ನವದೆಹಲಿ :ಅಕ್ಷಯ ತೃತೀಯದಂದು 21 ಸಾವಿರ ಮದುವೆಗಳಿಗೆ ಸಾಕ್ಷಿಯಾದ ರಾಜಧಾನಿ ದೆಹಲಿ..

ನವದೆಹಲಿ: ಹಿಂದೂ ಕ್ಯಾಲೆಂಡರ್‌ನಲ್ಲಿ ಶುಭ ದಿನವಾದ ಅಕ್ಷಯ ಅಕ್ಷಯ ತೃತೀಯಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು 21,000 ವಿವಾಹಗಳು ನಡೆದಿದೆ
ಹಿಂದೂ ಕ್ಯಾಲೆಂಡರ್‌ನ ವೈಶಾಖ ಮಾಸದ ಶುಭಾರ್ಧದ ಮೂರನೇ ದಿನದಂದು ವಾರ್ಷಿಕವಾಗಿ ಆಚರಿಸಲಾಗುವ ಅಕ್ಷಯ ತೃತೀಯ ಈ ವರ್ಷ ಬುಧವಾರ ಬಂದಿದೆ
ದೆಹಲಿಯಲ್ಲಿ ವಿವಾಹ ಸಂಬಂಧಿತ ವ್ಯವಹಾರಗಳು ಒಂದೇ ದಿನದಲ್ಲಿ 1,000 ಕೋಟಿ ರೂ.ಹೆಚ್ಚು ವಹಿವಾಟು ನಡೆದಿದೆ. ಸಾವಿರಾರು ಸಂಖ್ಯೆಯಲ್ಲಿ ಮದುವೆ ಕಾರ್ಯಕ್ರಮ ಜರುಗುತ್ತಿವೆ. ಇದರಿಂದ ಕಲ್ಯಾಣ ಮಂಟಪ, ಹೋಟೆಲ್, ಅಡುಗೆ, ಸಲೂನ್, ಅಲಂಕಾರ, ಆರ್ಕೆಸ್ಟ್ರಾಕ್ಕೆ ಬೇಡಿಕೆ ಹೆಚ್ಚಿದೆ ಎಂದು ದೆಹಲಿಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಅಂದಾಜಿಸಿದೆ.
ಔತಣಕೂಟದ ಸಭಾಂಗಣ ಮತ್ತು ಹೋಟೆಲ್‌ಗಳ ಬಾಡಿಗೆ ದರವು ಶೇ 10ರಿಂದ ಶೇ 15ರಷ್ಟು ಏರಿಕೆಯಾಗಿದೆ ಎಂದು ತಿಳಿಸಿದೆ
“ಚಿನ್ನದ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ಕಳೆದ ವರ್ಷ ಅಕ್ಷಯ ತೃತೀಯದಂದು 73,500 ರೂ. ಇದ್ದ ಹತ್ತು ಗ್ರಾಂ ಚಿನ್ನದ ಬೆಲೆ ಪ್ರಸ್ತುತ 97,000 ರೂ.ಗಳಷ್ಟಿದೆ. ಇದರ ಪರಿಣಾಮವಾಗಿ, ಗ್ರಾಹಕರ ಬೇಡಿಕೆಯನ್ನು ಪೂರೈಸಲು ವ್ಯಾಪಾರಿಗಳು ಸಣ್ಣ, ಹಗುರವಾದ ಚಿನ್ನ ಮತ್ತು ವಜ್ರದ ಆಭರಣಗಳತ್ತ ಗಮನ ಹರಿಸುತ್ತಿದ್ದಾರೆ” ಎಂದು ಅರೋರಾ ಹೇಳಿದರು.