ವಿಶಾಖಪಟ್ಟಣ :ದೇವರ ಉತ್ಸವದ ವೇಳೆ 20 ಅಡಿ ಉದ್ದದ ಗೋಡೆ ಕುಸಿದು 7 ಮಂದಿ ಸಾವು.
Tuesday, April 29, 2025

ವಿಶಾಖಪಟ್ಟಣ: ದೇವರ ಉತ್ಸವದ ವೇಳೆ 20 ಅಡಿ ಎತ್ತರದ ಗೋಡೆ ಕುಸಿದು 7ಭಕ್ತರು ಸಾವನ್ನಪ್ಪಿದ್ದು, ಹಲವು ಭಕ್ತರು ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ವಿಶಾಖಪಟ್ಟಣ ವರಮಹಾಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದ ಚಂದನೋತ್ಸವದಲ್ಲಿ ನಡೆದಿದೆ.
ಎಸ್.ಡಿ.ಆರ್.ಎಫ್. ಮತ್ತು ಎನ್.ಡಿ.ಆರ್.ಎಫ್.ನಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಘಟನೆಯಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ.