ಬೆಂಗಳೂರು: ಅಗತ್ಯ ವಸ್ತು ಗಳ ಬೆಲೆ ಏರಿಕೆ ಬಿಸಿಯಲ್ಲಿ ಇರುವಾಗಲೇ ರಾಜ್ಯದ ಜನರಿಗೆ ಮತ್ತೊಂದು ಶಾಕ್ ; ಡೀಸೆಲ್ ದರ 2 ರೂ. ಹೆಚ್ಚಿಸಿದ ಸರ್ಕಾರ, ಮಧ್ಯರಾತ್ರಿಯಿಂದಲೇ ಜಾರಿ !government diesel rate hike

ಬೆಂಗಳೂರು: ಅಗತ್ಯ ವಸ್ತು ಗಳ ಬೆಲೆ ಏರಿಕೆ ಬಿಸಿಯಲ್ಲಿ ಇರುವಾಗಲೇ ರಾಜ್ಯದ ಜನರಿಗೆ ಮತ್ತೊಂದು ಶಾಕ್ ; ಡೀಸೆಲ್ ದರ 2 ರೂ. ಹೆಚ್ಚಿಸಿದ ಸರ್ಕಾರ, ಮಧ್ಯರಾತ್ರಿಯಿಂದಲೇ ಜಾರಿ !government diesel rate hike


ಬೆಂಗಳೂರು: ಅನೇಕ ಬೆಲೆ ಏರಿಕೆಗಳೊಂದಿಗೆ ಜನರ ಮೇಲೆ ಬರೆ ಎಳೆದಿರುವ ರಾಜ್ಯ ಸರ್ಕಾರ, ಇದೀಗ ಮತ್ತೊಂದು ಬೆಲೆ ಏರಿಕೆಯ ಶಾಕ್ ನೀಡಿದೆ. ಡೀಸೆಲ್ ಬೆಲೆ 2 ರೂ. ಏರಿಸಿ ಸರ್ಕಾರ ರಾಜ್ಯದ ಜನರಿಗೆ ಮತ್ತೊಂದು ಬರೆ ಎಳೆದಿದೆ.

ಏಪ್ರಿಲ್ 1ರಿಂದ ಅನ್ವಯವಾಗುವಂತೆ ಈಗಾಗಲೇ ಹಾಲು, ವಿದ್ಯುತ್, ಟೋಲ್ ದರ ಏರಿಕೆ ಮಾಡಿರುವ ಸರ್ಕಾರ, ಇದೀಗ ಆ ಪಟ್ಟಿಗೆ ಡೀಸೆಲ್ ಅನ್ನು ಸೇರಿಸಿದೆ. ಡೀಸೆಲ್ ಬೆಲೆ ಮೇಲಿನ ಮಾರಾಟ ತೆರಿಗೆಯನ್ನು ಶೇ 18.44 ರಿಂದ ಶೇ 21.17 ಗೆ ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ 2 ರೂ. ಏರಿಕೆ ಮಾಡಿದೆ.

ಅದರಂತೆ, ರಾಜ್ಯದಲ್ಲಿ ಡೀಸೆಲ್ ದರ 91.02 ರೂ. ಆಗಲಿದೆ. ಈ ಮುಂಚೆ ಬೆಂಗಳೂರಲ್ಲಿ ಡೀಸೆಲ್ ದರ 89.02 ರೂ. ಇದೆ. ಪರಿಷ್ಕೃತ ದರ ಇಂದಿನಿಂದಲೇ ಅನ್ವಯವಾಗಲಿದೆ. ಡೀಸೆಲ್ ಬೆಲೆ ಏರಿಕೆಯಿಂದ ರಾಜ್ಯದ ಜನರ ಮೇಲೆ ಮತ್ತೆ ಹೊರೆ ಬೀಳಲಿದೆ. ಸರಕುಗಳು, ಹಣ್ಣು, ತರಕಾರಿಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ.

2021ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 25.92 ಕ್ಕೆ ಹಾಗೂ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇ 14.34ಕ್ಕೆ ಇಳಿಕೆ ಮಾಡಿತ್ತು. ಬಳಿಕ 2024ರ ಜೂನ್ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 29.84%ಗೆ ಏರಿಕೆ ಮಾಡಿದ್ದರೆ, ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 18.44%ಗೆ ಏರಿಕೆ ಮಾಡಿತ್ತು. ಇದೀಗ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 21.17%ಗೆ ಏರಿಕೆ ಮಾಡಿದೆ

Ads on article

Advertise in articles 1

advertising articles 2

Advertise under the article