ಹೈದರಾಬಾದ್:  ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ': ಮಿಸ್ ಇಂಡಿಯಾ ನಂದಿನಿ ಗುಪ್ತಾ - ಮಿಸ್ ವರ್ಲ್ಡ್ ಸ್ಪರ್ಧೆಗೆ ಸಜ್ಜಾದ ಹೈದರಾಬಾದ್;  ಮುತ್ತಿನ ನಗರಿಗೆ ಆಗಮಿಸಲಿರುವ 120 ದೇಶಗಳ ಸುಂದರಿಯರು.!! ಭಾರತವನ್ನು ಪ್ರತಿನಿಧಿಸಲಿರುವ ನಂದಿನಿ ಗುಪ್ತಾ ಅವರ ವಿಶೇಷ ಸಂದರ್ಶನ.

ಹೈದರಾಬಾದ್: ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ': ಮಿಸ್ ಇಂಡಿಯಾ ನಂದಿನಿ ಗುಪ್ತಾ - ಮಿಸ್ ವರ್ಲ್ಡ್ ಸ್ಪರ್ಧೆಗೆ ಸಜ್ಜಾದ ಹೈದರಾಬಾದ್; ಮುತ್ತಿನ ನಗರಿಗೆ ಆಗಮಿಸಲಿರುವ 120 ದೇಶಗಳ ಸುಂದರಿಯರು.!! ಭಾರತವನ್ನು ಪ್ರತಿನಿಧಿಸಲಿರುವ ನಂದಿನಿ ಗುಪ್ತಾ ಅವರ ವಿಶೇಷ ಸಂದರ್ಶನ.

ಹೈದರಾಬಾದ್ :2025 ಮಿಸ್ ವರ್ಲ್ಡ್ ಸ್ಪರ್ಧೆ' ಮೇ 7 ರಿಂದ ಮೇ 31ರ ವರೆಗೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ. 'ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ 2023' ನಂದಿನಿ ಗುಪ್ತಾ (Nandini Gupta) ಭಾರತವನ್ನು ಪ್ರತಿನಿಧಿಸಲಿದ್ದು, ಅವರ ವಿಶೇಷ ಸಂದರ್ಶನ ಇಲ್ಲಿದೆ.

ವಿಶ್ವ ಪ್ರತಿಷ್ಠಿತ ವಿಶ್ವ ಸುಂದರಿ ಸ್ಪರ್ಧೆಗೆ ಸಕಲ ಸಿದ್ಧತೆ ನಡೆಯುತ್ತಿದೆ. ತೆಲಂಗಾಣ ರಾಜ್ಯ ಇದೇ ಮೊದಲ ಬಾರಿಗೆ ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ಈ ಸೌಂದರ್ಯ ಸ್ಪರ್ಧೆಯಲ್ಲಿ ಒಟ್ಟು 120 ದೇಶಗಳು ಸ್ಪರ್ಧಿಸುತ್ತಿದ್ದು, ರಾಜಸ್ಥಾನದ ಕಚ್ ಪ್ರದೇಶದ ನಂದಿನಿ ಗುಪ್ತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. 2023ರ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಗೊಂಡಿರುವ ನಂದಿನಿ 2025ರ ವಿಶ್ವ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದು, ಅವರ ವಿಶೇಷ ಸಂದರ್ಶನ ಇಲ್ಲಿದೆ.

ರಾಜಸ್ಥಾನದ ಕಚ್ ಪ್ರದೇಶದವರಾದ ನಂದಿನಿ ಗುಪ್ತಾ, ಮುಂಬೈ ಫ್ಯಾಷನ್ ಜಗತ್ತಿನಲ್ಲಿ ತಮಗಾಗಿ ವಿಶೇಷ ಸ್ಥಾನ ಗಳಿಸಿದ್ದಾರೆ. ತಮ್ಮ ಪ್ರಯಾಣದಲ್ಲಿ ಎದುರಿಸಿದ ಅಡೆತಡೆಗಳು ಮತ್ತು ಅನುಭವಗಳನ್ನು ಹಂಚಿಕೊಂಡರು. ಮೊದಲು ಎಲ್ಲರಿಗೂ ತೆಲುಗಿನಲ್ಲಿ ಶುಭಾಶಯ ಕೋರುವ ಮೂಲಕ ಮಾತು ಶುರು ಮಾಡಿದರು.

ನಂದಿನಿ ಗುಪ್ತಾ, ರಾಜಸ್ಥಾನದ ಕೃಷಿಕ ಕುಟುಂಬದಿಂದ ಬಂದವರು. 'ನಾವು ಎಲ್ಲಿಂದ ಬಂದಿದ್ದೇವೆ ಎಂಬುದು ಮುಖ್ಯವಲ್ಲ, ಎಲ್ಲಿಗೆ ಹೋಗುತ್ತೇವೆ ಎಂಬುದು ಮುಖ್ಯ' ಎಂದು ತಿಳಿಸಿದರು. ನಿಜವಾದ ಸೌಂದರ್ಯ ಆಂತರಿಕ ಸೌಂದರ್ಯದಲ್ಲಿದೆ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಮುಖ್ಯ. ನನ್ನ ಮನೆಯಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಸದ್ಯ ಈ ಹಂತದಲ್ಲೀದ್ದೇನೆ ಎಂದು ವಿವರಿಸಿದರು.

ನಾನು ರೈತ ಕುಟುಂಬದಿಂದ ಫ್ಯಾಷನ್ ಜಗತ್ತಿಗೆ ಬಂದವಳು. ಹತ್ತನೇ ವಯಸ್ಸಿನಲ್ಲಿ ಐಶ್ವರ್ಯಾ ರೈ ಅವರಿಂದ ಸ್ಫೂರ್ತಿ ಪಡೆದೆ. ನನ್ನ ಕನಸುಗಳನ್ನು ನನಸಾಗಿಸುವಲ್ಲಿ ನಾನು ಯಶಸ್ವಿಯಾದೆ. ಕೃಷಿಕ ಕುಟುಂಬದಿಂದ ಬಂದು ಫ್ಯಾಷನ್ ಜಗತ್ತಿನಲ್ಲಿ ಬೆಳೆದ ರೀತಿ ಹೆಮ್ಮೆಯ ವಿಷಯ. ನಾನು ಎಲ್ಲಿಂದ ಬಂದಿದ್ದೇನೆ ಎಂಬುದು ಮುಖ್ಯವಲ್ಲ, ನಾನು ಎಲ್ಲಿಗೆ ಹೋಗುತ್ತೇನೆ ಎಂಬುದು ಮುಖ್ಯ. ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯ ಬಹಳಾನೇ ಮುಖ್ಯ. ನನಗೆ ಸೀರೆ ತುಂಬಾನೇ ಇಷ್ಟ. ಚಾರ್ಮಿನಾರ್ ಪ್ರದೇಶ ನನ್ನ ಮೇಲೆ ತುಂಬಾನೆ ಪ್ರಭಾವ ಬೀರಿದೆ. ಹೈದರಾಬಾದ್ ಆತಿಥ್ಯಕ್ಕೆ ಸಮಾನಾರ್ಥ ಎನ್ನಬಹುದು - ನಂದಿನಿ ಗುಪ್ತಾ.

ಭಾರತದ ವಿಶ್ವ ಸುಂದರಿಯರು:

  • ರೀಟಾ ಫರಿಯಾ (1966).
  • ಐಶ್ವರ್ಯಾ ರೈ ಬಚ್ಚನ್ (1994).
  • ಡಯಾನಾ ಹೇಡನ್ (1997).
  • ಯುಕ್ತಾ ಮುಖಿ (1999).
  • ಪ್ರಿಯಾಂಕಾ ಚೋಪ್ರಾ (2000).
  • ಮಾನುಷಿ ಚಿಲ್ಲರ್ (2017).
ಈ ಸಾಲಿನ ಬಹುನಿರೀಕ್ಷಿತ ವಿಶ್ವ ಸೌಂದರ್ಯ ಸ್ಪರ್ಧೆ ಮೇ 7 ರಿಂದ ಮೇ 31ರ ವರೆಗೆ ಹೈದರಾಬಾದ್‌ನ ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಜರುಗಲಿದೆ.

Ads on article

Advertise in articles 1

advertising articles 2

Advertise under the article