ಅಂತರಾಷ್ಟ್ರೀಯ :10 ವರ್ಷ ನಂತರ ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಕಾರಣವೇನು? ಮುಂಬರುವ ದಿನಗಳಲ್ಲಿ ಜಗತ್ತನ್ನು ಸಂಪೂರ್ಣವಾಗಿ ಎ ಐ ಆವರಿಸಲಿದೆ. ಸುಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಹೇಳಿಕೆ.

ಅಂತರಾಷ್ಟ್ರೀಯ :10 ವರ್ಷ ನಂತರ ವೈದ್ಯರೂ ಇರಲ್ಲ, ಶಿಕ್ಷಕರೂ ಬೇಕಿಲ್ಲ- ಕಾರಣವೇನು? ಮುಂಬರುವ ದಿನಗಳಲ್ಲಿ ಜಗತ್ತನ್ನು ಸಂಪೂರ್ಣವಾಗಿ ಎ ಐ ಆವರಿಸಲಿದೆ. ಸುಪ್ರಸಿದ್ಧ ಉದ್ಯಮಿ ಬಿಲ್ ಗೇಟ್ಸ್ ಹೇಳಿಕೆ.

ವಿದೇಶ :ಉದ್ಯಮಿ ಬಿಲ್ ಗೇಟ್ಸ್ ಹೇಳಿರುವಂತೆ ಇನ್ನು ಮುಂದೆ ಬರಬರುತ್ತಾ ಮನುಷ್ಯರ ಅವಶ್ಯಕತೆಗಳೇ ಇರುವುದಿಲ್ಲ. ಅದರಲ್ಲಿಯೂ ಮುಖ್ಯವಾಗಿ ವೈದ್ಯರು ಮತ್ತು ಶಿಕ್ಷಕರ ಜಾಗಕ್ಕೆ ಎಐ ಬರುವ ಕಾರಣ, ಅವರ ಅವಶ್ಯಕತೆಯೂ ಇರುವುದಿಲ್ಲ. ಇದೆಲ್ಲಾ ಬರಲು ಹತ್ತೇ ವರ್ಷಗಳ ಸಾಕು ಎಂದಿದ್ದಾರೆ.

ಬದಲಾಗುತ್ತಿರುವ ಕಾಲಘಟ್ಟದಲ್ಲಿ ತಂತ್ರಜ್ಞಾನ ಹೇಗೆ ಉಪಯೋಗಕ್ಕೆ ಬರುತ್ತಿದೆ ಎನ್ನುವ ಬಗ್ಗೆ ಅವರು ಸಂತೋಷದಿಂದ ಈ ವಿಷಯವನ್ನು ಹೇಳಿದ್ದಾರೆ. AI ಯೊಂದಿಗೆ, ಮುಂದಿನ ದಶಕದಲ್ಲಿ ಉತ್ತಮ ವೈದ್ಯಕೀಯ ಸಲಹೆ ಮತ್ತು ಉತ್ತಮ ಶಿಕ್ಷಣವು ಉಚಿತ ಮತ್ತು ತುಂಬಾ ಸಾಮಾನ್ಯವಾಗುತ್ತದೆ ಎನ್ನುವ ಮೂಲಕ ಈಗ ಚಿಕಿತ್ಸೆ ಮತ್ತು ಶಿಕ್ಷಣವನ್ನೇ ವ್ಯವಹಾರ ಮಾಡಿಕೊಂಡು ಲಕ್ಷ ಗಟ್ಟಲೆ ಬಾಚುತ್ತಿರುವ ಬಗ್ಗೆ ಮಾತನಾಡಿದ್ದಾರೆ.

ಜನಸಾಮಾನ್ಯರು ಇನ್ನು, ಸುಲಭದಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯ ಪಡೆಯಬಹುದು. ಜನರ ಜಾಗದಲ್ಲಿ ಕೃತಕ ಬುದ್ಧಿಮತ್ತೆ ಬರಲಿದೆ ಎಂದಿದ್ದಾರೆ.
ಜಗತ್ತು ಹೊಸ ಯುಗವನ್ನು ಪ್ರವೇಶಿಸುತ್ತಿದೆ. ಉತ್ತಮ ಔಷಧಗಳು ಮತ್ತು ರೋಗನಿರ್ಣಯದಿಂದ ಹಿಡಿದು AI ಬೋಧಕರು ಮತ್ತು ವರ್ಚುವಲ್ ಸಹಾಯಕರವರೆಗೆ AI ನಮ್ಮ ಜೀವನದ ಬಹುತೇಕ ಪ್ರತಿಯೊಂದು ಅಂಶವನ್ನು ಸ್ಪರ್ಶಿಸುತ್ತದೆ. ಈ ಬೆಳವಣಿಗೆ ವೇಗವಾಗಿ ನಡೆಯುತ್ತಿದೆ’ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article