ಬೆಂಗಳೂರು:1ನೇ ತರಗತಿ ಸೇರ್ಪಡೆಗೆ ವಯೋಮಿತಿ ಸಡಿಲಿಕೆ ;ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ.
Wednesday, April 16, 2025

ಬೆಂಗಳೂರು: ಒಂದನೇ ತರಗತಿಗೆ ಮಕ್ಕಳನ್ನು ಸೇರಿಸಲುಐದು ವರ್ಷ ಐದು ತಿಂಗಳು ತುಂಬಿದ್ದರೆ ಸಾಕು ಎಂದು ರಾಜ್ಯ ಸರ್ಕಾರ ಘೋಷಿಸಿದೆ.
1ನೇ ತರಗತಿ ಸೇರುವ ಮಕ್ಕಳ ವಯೋಮಿತಿ ಸಡಿಲಿಕೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾತನಾಡಿದರು.
ಪೋಷಕರು ವಯೋಮಿತಿ ಗೊಂದಲದಲ್ಲಿ ಇದ್ದಾರೆ. ಎರಡು ತಿಂಗಳು ರಿಯಾಯ್ತಿ ಕೊಡಬಹುದು. ದೇಶದಲ್ಲಿ ಈಗಾಗಲೇ 6 ವರ್ಷ ಇದೆ. ಈ ವರ್ಷ ಮಾತ್ರ ವಯಸ್ಸಿನ ಮಿತಿ ಸಡಿಲ ಮಾಡಲಾಗುವುದು. ಮುಂದಿನ ವರ್ಷದಿಂದ 1ನೇ ತರಗತಿಗೆ ಸೇರಲು 6 ವರ್ಷ ನಿಯಮ ಕಡ್ಡಾಯ. 1ನೇ ತರಗತಿಗೆ 5 ವರ್ಷ 5 ತಿಂಗಳು ದಾಖಲಾತಿ ಮಿತಿ ಸಡಿಲಿಕೆ ಮಾಡಲಾಗಿದೆ. ಇದು ಕೇವಲ ರಾಜ್ಯಪಠ್ಯ ಕ್ರಮಕ್ಕೆ ಮಾತ್ರ ಅನ್ವಯ. ಐಸಿಎಸ್‌ಸಿ, ಸಿಬಿಎಸ್‌ಇ ಬೋರ್ಡ್ ಬಗ್ಗೆ ನಾವು ನಿರ್ಧಾರ ಮಾಡಲು ಆಗೊಲ್ಲ ಎಂದು ಸ್ಪಷ್ಟಪಡಿಸಿದರು.