ಬೆಂಗಳೂರು :ಸರ್ಕಾರಿ ಇಮೇಲ್ ಐಡಿ ಬಳಸಿ ಬ್ಯಾಂಕ್ ನಿಂದ 1 ಕೋಟಿ ರೂ. ದೋಚಿದ ಖತರ್ನಾಕ್ ಕಳ್ಳರು..!!

ಬೆಂಗಳೂರು: ಸರ್ಕಾರಿ ಅಧಿಕಾರಿ ಸೋಗಿನಲ್ಲಿ 18 ಬಾರಿ ನ್ಯಾಯಾಲಯದ ನಕಲಿ ಆದೇಶಗಳನ್ನು ಸೃಷ್ಟಿಸಿ ಬ್ಯಾಂಕ್ನಿಂದ 1.32 ಕೋಟಿ ದೋಚಿದ್ದ ಮೂವರು ವಂಚಕರನ್ನು ಬೆಂಗಳೂರು ನಗರ ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯಾಂಕ್ನ ಸಿಬ್ಬಂದಿ ಪರಿಶೀಲನೆ ನಡೆಸಲು ಕರೆ ಮಾಡಿದಾಗಲೂ ಇವರು ಸುಳ್ಳು ಮಾಹಿತಿ ನೀಡುತ್ತಿದ್ದರು. ಇದೇ ರೀತಿ ಒಟ್ಟು 18 ನಕಲಿ ಕೋರ್ಟ್ ಆದೇಶಗಳನ್ನು ಆರೋಪಿಗಳು ಬ್ಯಾಂಕ್ಗೆ ನೀಡಿದ್ದಾರೆ. ನಕಲಿ ಆದೇಶಗಳ ಮೂಲಕ 1.23 ಕೋಟಿ ರೂ. ವಂಚಿಸಿದ್ದಾರೆ.ಸರ್ಕಾರಿ ಅಧಿಕಾರಿ ರೀತಿ ದಾಖಲಾತಿ ಸಿದ್ದಪಡಿಸಿಕೊಂಡು ಸರ್ಕಾರಿ ಇಮೇಲ್ ಐಡಿ ಬೇಕೆಂದು ಸರ್ಕಾರ ಅಧೀನದಲ್ಲಿ ಬರುವ ಕೆ-ಸ್ವಾನ್ ಆನ್ಲೈನ್ ಮೂಲಕ ಮನವಿ ಸಲ್ಲಿಸಿ ಮೇಲ್ ಐಡಿ ಪಡೆದುಕೊಂಡಿದ್ದಾರೆ.
ಹಲಸೂರು ಶಾಖೆಯ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ದೆಹಲಿಯ ಅಭಿಮನ್ಯು ಕುಮಾರ್ ಪಾಂಡೆ, ನೀರಜ್ ಸಿಂಗ್ ಹಾಗೂ ರಾಜಸ್ಥಾನ ಮೂಲದ ಸಾಗರ್ ಲಾಕುರ್ ಎಂಬುವರನ್ನ ಬಂಧಿಸಲಾಗಿದೆ. ಸದ್ಯ 63 ಲಕ್ಷ ರೂಪಾಯಿ ಹಣ ಸೀಜ್ ಮಾಡಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.