ಬೆಂಗಳೂರು :ಪಾಲಿಶ್ ಮಾಡದ ಅಕ್ಕಿಯ ಬಳಕೆಯಿಂದ ಮಧುಮೇಹ ನಿಯಂತ್ರಣ ಮತ್ತು ಕ್ಯಾನ್ಸರ್ ತಡೆ ಗಟ್ಟುವಿಕೆ ಸಾಧ್ಯ;ಜೊತೆಗೆ ಹಲವು ಆರೋಗ್ಯದ ಪ್ರಯೋಜನಗಳ ಬಗ್ಗೆ ಸಂಶೋಧನೆ ವರದಿ.
ಪಾಲಿಶ್ ಮಾಡದ ಅಕ್ಕಿಯ ಮೇಲಿರುವ ಭತ್ತದ ಹೊಟ್ಟಿನ ಪದರಿನಲ್ಲಿ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಈ ಅಕ್ಕಿಯನ್ನು ಪಾಲಿಶ್ ಮಾಡಿದಾಗ ಭತ್ತದ ಹೊಟ್ಟಿನ ಪದರು ಹೋಗುತ್ತದೆ. ಅದಕ್ಕಾಗಿಯೇ ಬಿಳಿ ಅಕ್ಕಿಗಿಂತ ಕಂದು ಅಕ್ಕಿ ಉತ್ತಮ ಎಂದು ಸಂಶೋಧಕರು ಹೇಳುತ್ತಾರೆ. ಪಾಲಿಶ್ ಮಾಡದ ಅಕ್ಕಿಯನ್ನು ಕಂದು ಅಕ್ಕಿ ಮತ್ತು ಕೆಂಪು ಅಕ್ಕಿ ಎಂದು ಕರೆಯಲಾಗುತ್ತದೆ.
ಮೂಳೆ ಆರೋಗ್ಯ: ಹಾರ್ವರ್ಡ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಸಂಶೋಧಕರು ವಾರಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಬಿಳಿ ಅನ್ನ ಸೇವಿಸುವುದರಿಂದ ಮಧುಮೇಹ ಬರುವ ಅಪಾಯ ಹೆಚ್ಚಾಗುತ್ತದೆ. ಬಿಳಿ ಅಕ್ಕಿಯ ಸೇವನೆಯನ್ನು 50 ಗ್ರಾಂ ಕಡಿಮೆ ಮಾಡಿ, ಇದರ ಬದಲಾಗಿ ಕಂದು ಅಕ್ಕಿಯನ್ನು ಬಳಕೆ ಮಾಡಿದರೆ, ಮಧುಮೇಹದ ಅಪಾಯ ಶೇ.16ರಷ್ಟು ಕಡಿಮೆಯಾಗುತ್ತದೆ ಎಂದು ತಜ್ಞರು ಬಹಿರಂಗಪಡಿಸಿದ್ದಾರೆ
ಹೆಚ್ಚುವರಿಯಾಗಿ ಕಂದು ಅಕ್ಕಿಯಲ್ಲಿ ಸೋಡಿಯಂ ಕಡಿಮೆ ಇರುವುದು ಕಂಡುಬಂದಿದೆ. ಇದು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು. ಪೋಷಕಾಂಶಗಳ ವಿಷಯದಲ್ಲಿ ತಜ್ಞರು ಹೇಳುವಂತೆ, ಈ ಅಕ್ಕಿಯಲ್ಲಿ ನಿಯಾಸಿನ್ ಮತ್ತು ವಿಟಮಿನ್ ಬಿ3 ಬಹಳ ಹೆಚ್ಚಿನ ಪ್ರಮಾಣದಲ್ಲಿವೆ. ಇದು ನಾವು ಸೇವಿಸುವ ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇವುಗಳಲ್ಲಿರುವ ಕ್ಯಾಲ್ಸಿಯಂ ಹಾಗೂ ಮೆಗ್ನೀಸಿಯಮ್ ಮೂಳೆಗಳ ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತವೆ ಎಂದು ವಿವರಿಸಲಾಗಿದೆ.
ಕ್ಯಾನ್ಸರ್ ತಡೆಗಟ್ಟುತ್ತೆ: ಈ ಕಂದು ಅಕ್ಕಿಯಲ್ಲಿ ಸೆಲೆನಿಯಮ್ ಕೂಡ ಅಧಿಕವಾಗಿದ್ದು, ಇದು ಥೈರಾಯ್ಡ್ ಹಾರ್ಮೋನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಸ್ವತಂತ್ರ ರಾಡಿಕಲ್‌ಗಳನ್ನು ತಡೆಯುತ್ತದೆ. ಈ ಪಾಲಿಫಿನಾಲ್‌ಗಳಲ್ಲಿರುವ ಲಿಗ್ನಾನ್‌ಗಳು ಕರುಳನ್ನು ತಲುಪಿದ ನಂತರ ಫೈಟೊಈಸ್ಟ್ರೊಜೆನ್ ಎಂಟರೊಲ್ಯಾಕ್ಟೇನ್ ಆಗಿ ಪರಿವರ್ತನೆಗೊಳ್ಳುತ್ತವೆ.
ಕಂದು ಅಕ್ಕಿಯಿಂದ ಕ್ಯಾನ್ಸರ್ ತಡೆಗಟ್ಟುವುದಲ್ಲದೇ ಹೃದಯದ ಆರೋಗ್ಯಕ್ಕೂ ಕೊಡುಗೆ ನೀಡುತ್ತವೆ. ಇವುಗಳಲ್ಲಿರುವ ಪಿಷ್ಟ ನಿಧಾನವಾಗಿ ಜೀರ್ಣವಾಗುತ್ತದೆ. ಆದ್ದರಿಂದ, ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳು ಅಷ್ಟು ಬೇಗ ಏರುವುದಿಲ್ಲ. ಇದು ನಿಮಗೆ ತಕ್ಷಣ ಹಸಿವಾಗುವುದಿಲ್ಲ. ಏಕೆಂದರೆ, ಅದು ನಿಮಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.