ಚಂಡಿಘಡ:ಟ್ರಾಫಿಕ್ ಮಧ್ಯೆ ರೀಲ್ಸ್ ಮಾಡಿದ ಪೊಲೀಸ್ ಪತ್ನಿ..!!!ಮುಂದೇನಾಯ್ತು????
Thursday, March 27, 2025
ಚಂಡೀಗಢ: ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಗಳದ್ದೇ ಹವಾ. ಹೀಗ ಯುವಕರಿಂದ ಹಿಡಿದು ವಯಸ್ಸದವರು ಕೂಡಾ ರೀಲ್ಸ್ ವಿಡಿಯೋ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಇಲ್ಲೊಬ್ಬಳು ಟ್ರಾಫಿಕ್ ಪೊಲೀಸ್ ಅಧಿಕಾರಿಯ ಪತ್ನಿ ರಸ್ತೆಯಲ್ಲಿ ರೀಲ್ಸ್ ಮಾಡುತ್ತಿರುವ ವಿಡಿಯೋ ಮಾಡಿದ್ದು, , ಪೊಲೀಸರು ಆ ಮಹಿಳೆಯ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಚಂಡೀಗಢದಲ್ಲಿ, ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ರಸ್ತೆಯ ಮಧ್ಯದಲ್ಲಿ ಹರಿಯಾನ್ವಿ ಹಾಡಿಗೆ ನೃತ್ಯ ಮಾಡಿ ಬಹಳ ಹೊತ್ತು ವಾಹನ ದಟ್ಟಣೆ ಆಗಿದೆ. ರಸ್ತೆಯ ಮಧ್ಯದಲ್ಲಿ ನೃತ್ಯ ಮಾಡುವುದು ಮತ್ತು ವೀಡಿಯೊ ಮಾಡುವುದರಲ್ಲಿದ್ದ ಮಹಿಳೆಗೆ
ಗ್ರೀನ್ ಸಿಗ್ನಲ್ ಬಿದ್ದರೂ ಅದು ಕಾಣಿಸಲಿಲ್ಲ. ಇದರಿಂದಾಗಿ ರಸ್ತೆಯಲ್ಲಿ ವಾಹನಗಳ ವಾಹನ ದಟ್ಟಣೆ ಉಂಟಾಗಿದೆ. ಈ ಘಟನೆ ಜೀಬ್ರಾ ಕ್ರಾಸಿಂಗ್‌ನಲ್ಲಿ ನಡೆದಿದ್ದು, ವೈರಲ್ ಆದ ವೀಡಿಯೊದ ನಂತರ, ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.