ಪಾಲ್ಘರ್: ಕಿರುಕುಳದಿಂದ ಬೇಸತ್ತು ಮಲತಂದೆ ಗುಪ್ತಾಂಗ ಕತ್ತರಿಸಿದ ಯುವತಿ!!!!

ಪಾಲ್ಘರ್: ಕಿರುಕುಳದಿಂದ ಬೇಸತ್ತು ಮಲತಂದೆ ಗುಪ್ತಾಂಗ ಕತ್ತರಿಸಿದ ಯುವತಿ!!!!

ಪಾಲ್ಘರ್: ಮಲತಂದೆ 2 ವರ್ಷಗಳಿಂದ ತನ್ನ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯದಿಂದ ಬೇಸತ್ತ ಯುವತಿ ತನ್ನ ಮಲತಂದೆಯ ಗುಪ್ತಾಂಗ ವನ್ನು ಕತ್ತರಿಸಿರುವ ಘಟನೆ ನಲಸೋಪರ ಪೂರ್ವದ ಚಾಲ್‌ನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಲ್ಲೆಯಲ್ಲಿ ಮಲತಂದೆ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೋಮವಾರ ತನ್ನ ಮೇಲೆ ಬಲವಂತವಾಗಿ ಹಲ್ಲೆ ನಡೆಸಲು ಪ್ರಯತ್ನಿಸಿದ 56 ವರ್ಷದ ಮಲತಂದೆಯ ಮೇಲೆ ಆ ಯುವತಿ ಹಲ್ಲೆ ನಡೆಸಿದ್ದಾಳೆ. ಆತನನ್ನು ಕಣ್ಣುಮುಚ್ಚುವಂತೆ ಮನವೊಲಿಸಿ, ಆತನ ಕಣ್ಣಿಗೆ ಬಟ್ಟೆ ಕಟ್ಟಿ ಚಾಕುವಿನಿಂದ ಹಲ್ಲೆ ಮಾಡಿ, ಆತನ ಜನನಾಂಗಗಳನ್ನು ಕತ್ತರಿಸಿದ್ದಾಳೆ. ನೋವಿನಿಂದ ಕಿರುಚುತ್ತಾ, ಆ ವ್ಯಕ್ತಿ ಬಟ್ಟೆಯ ಮೇಲೆಲ್ಲ ರಕ್ತದ ಕಲೆಗಳೊಂದಿಗೆ ಮನೆಯಿಂದ ಹೊರಗೆ ಓಡಿಹೋಗಿದ್ದಾನೆ. ಆದರೂ ಬಿಡದ ಆಕೆ ಅವನನ್ನು ಬೆನ್ನಟ್ಟಿ ರಸ್ತೆಯ ಮೇಲೆ ಮತ್ತೆ ಇರಿದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Ads on article

Advertise in articles 1

advertising articles 2

Advertise under the article