ದಕ್ಷಿಣ ಕನ್ನಡ: ಸರಕಾರಿ ಮೆಡಿಕಲ್ ಕಾಲೇಜು ಉಲ್ಲೇಖ! ಪುತ್ತೂರು ಶಾಸಕ ಅಶೋಕ್ ರೈ ತೃಪ್ತಿಪಡಿಸಲು ಮಾಡಿದ ತಂತ್ರ- ಮಾಜಿ ಶಾಸಕ ಸಂಜೀವ ಮಠಂದೂರುputtur government college offer

ದಕ್ಷಿಣ ಕನ್ನಡ: ಸರಕಾರಿ ಮೆಡಿಕಲ್ ಕಾಲೇಜು ಉಲ್ಲೇಖ! ಪುತ್ತೂರು ಶಾಸಕ ಅಶೋಕ್ ರೈ ತೃಪ್ತಿಪಡಿಸಲು ಮಾಡಿದ ತಂತ್ರ- ಮಾಜಿ ಶಾಸಕ ಸಂಜೀವ ಮಠಂದೂರುputtur government college offer

ಪುತ್ತೂರು: ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅದರೆ ಕಾಲೇಜು ಸ್ಥಾಪನೆ ಬಗ್ಗೆ ಸ್ಪಷ್ಟಕೆ ಇಲ್ಲ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಪುತ್ತೂರಿನಲ್ಲಿ ಮಾತನಾಡಿದ ಅವರು ಸರಕಾರಿ ಆಸ್ಪತ್ರೆಗೆ ಮೊದಲು ತಾಲೂಕು ಸರಕಾರಿ ಆಸ್ಪತ್ರೆಯನ್ನು 300 ಬೆಡ್ ಗೆ ಉನ್ನತೀಕರಿಸಬೇಕು, ಆದರೆ ಬಜೆಟ್ ನಲ್ಲಿ ಈ ಪ್ರಸ್ತಾಪವನ್ನೇ ಮಾಡಿಲ್ಲ, ಸರಕಾರಿ ಮೆಡಿಕಲ್ ಕಾಲೇಜು ಉಲ್ಲೇಖ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರನ್ನು ತೃಪ್ತಿಪಡಿಸಲು ಮಾಡಿದ ತಂತ್ರವಾಗಿದ್ದು ಈ ಮೂಲಕ ಪುತ್ತೂರಿನ ಜನತೆಯನ್ನು ಮೋಸ ಮಾಡಲಾಗಿದೆ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಆರೋಪಿಸಿದ್ದಾರೆ.

ಸಿದ್ಧರಾಮಯ್ಯ ಮಂಡಿಸಿದ ಬಜೆಟ್ ಸಾಲದ ಬಜೆಟ್, ಬಜೆಟ್ ನ ಒಟ್ಟು ಗಾತ್ರದಲ್ಲಿ 27 ಶೇಕಡಾ ಸಾಲದ ರೂಪದಲ್ಲಿದೆ. ಸುಮಾರು 57 ಶೇಕಡಾ ತೆರಿಗೆ ಮೂಲಕ ಸಂಗ್ರಹ. ಅಂದರೆ ಹಣದ ಕ್ರೂಡೀಕರಣ ಇಲ್ಲದೆ ಸಾಲದ ಮೂಲಕವೇ ಬಜೆಟ್ ಸಿದ್ಧಪಡಿಸಲಾಗಿದೆ. ಪಶು ವೈದ್ಯಕೀಯ ಕಾಲೇಜಿನ ಕಟ್ಟಡ ಸಿದ್ಧವಾಗಿ ನಿಂತಿದೆ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ತರಗತಿ ಆರಂಭವಾಗುವ ನಿರೀಕ್ಷೆಯಲ್ಲಿ ಜನತೆಯಿದ್ದರು ಆದರೆ ಈ ಬಗ್ಗೆ ಬಜೆಟ್ ನಲ್ಲಿ ಉಲ್ಲೇಖವೇ ಇಲ್ಲ, ತರಗತಿ ಆರಂಭಕ್ಕಾಗಿ ಅನುದಾನವನ್ನೂ ಮೀಸಲಿಟ್ಟಿಲ್ಲ ಎಂದು ಸಂಜೀವ ಮಠಂದೂರು ಆರೋಪಿಸಿದ್ದಾರೆ.


Ads on article

Advertise in articles 1

advertising articles 2

Advertise under the article