ಪುತ್ತೂರು : ಪತಿಯ ಆಟೋದಲ್ಲಿ ತೆರಳುತ್ತಿದ್ದಾಗಲೇ ಕೆಎಸ್ಸಾರ್ಟಿಸಿ ಬಸ್ಸಿಗೆ ಡಿಕ್ಕಿ ; ಪತ್ನಿ, ಮೊಮ್ಮಗ ದುರಂತ ಸಾವು, ಪುತ್ತೂರು ಹೆದ್ದಾರಿಯಲ್ಲಿ ಘಟನೆ

ಪುತ್ತೂರು : ಕೆಎಸ್ ಆರ್ ಟಿಸಿ ಬಸ್ ಬರುತ್ತಿದ್ದಾಗ ಆಟೋ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದಿದ್ದು ರಿಕ್ಷಾದಲ್ಲಿದ್ದ ತಾಯಿ, ಮಗು ಮೃತಪಟ್ಟ ದಾರುಣ ಘಟನೆ ಪುತ್ತೂರು ಪೇಟೆ ಹೊರವಲಯದ ಮಂಜಲ್ಪಡ್ಪು ಎಂಬಲ್ಲಿ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ಸಂಜೆ ನಡೆದಿದೆ.
ಮೃತರನ್ನು ಕೆದಂಬಾಡಿ ನಿವಾಸಿಗಳಾದ ಜಮೀಲ(49) ಹಾಗೂ ತಪ್ಸಿಬ್(5) ಎಂದು ಗುರುತಿಸಲಾಗಿದೆ. ಮಂಗಳೂರಿನಿಂದ ಪುತ್ತೂರಿನತ್ತ ವೇಗವಾಗಿ ಬರುತ್ತಿದ್ದ ಕೆಎಸ್ ಆರ್ ಟಿಸಿ ಬಸ್ಸಿಗೆ ಪುತ್ತೂರು ಕಡೆಯಿಂದ ಕಬಕ ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ ಡಿಕ್ಕಿಯಾಗಿದೆ. ಡಿಕ್ಕಿಯಾದ ದೃಶ್ಯ ಸ್ಥಳೀಯ ಕಟ್ಟಡದ ಸಿಸಿಟಿವಿಯಲ್ಲಿ ದಾಖಲಾಗಿದ್ದು ಆಟೋ ನೇರವಾಗಿ ರಸ್ತೆ ನಡುವೆ ಬಂದಿದ್ದು ಬಸ್ಸನ್ನು ನೋಡಿ ತಪ್ಪಿಸಲೆಂದು ಹೋದಾಗ ಪಲ್ಟಿಯಾಗಿದೆ.

ಕೆದಂಬಾಡಿ ಗ್ರಾಮದ ನಿವಾಸಿ ಆಟೋ ಚಾಲಕ ಮಹಮ್ಮದ್ ಎಂಬವರು ತನ್ನ ಪತ್ನಿ ಮತ್ತು ಮೊಮ್ಮಗನನ್ನು ಕುಳ್ಳಿರಿಸಿಕೊಂಡು ಭಾನುವಾರ ಸಂಜೆ ಮನೆ ಕಡೆಗೆ ಹೋಗುತ್ತಿದ್ದರು. ಆಟೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗುತ್ತಲೇ ಅದಕ್ಕೆ ಬಸ್ ಡಿಕ್ಕಿಯಾಗಿದ್ದು ಅಪ್ಪಚ್ಚಿಯಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಚಾಲಕ ಮಹಮ್ಮದ್ ಅವರ ಪತ್ನಿ ಜಮೀಲ(52) ಮತ್ತು ಅವರ ಮೊಮ್ಮಗ ತಪ್ಸಿಬ್(5) ಇದರ ನಡುವೆ ಸಿಕ್ಕಿಕೊಂಡು ಮೃತಪಟ್ಟಿದ್ದಾರೆ. ರಿಕ್ಷಾ ಚಾಲಕ ಮಹಮ್ಮದ್ ಗಂಭೀರ ಗಾಯಗೊಂಡಿದ್ದಾರೆ.
ಮಹಮ್ಮದ್ ಅವರು ಪತ್ನಿ, ಮೊಮ್ಮಗನ ಜೊತೆಗೆ ಬಟ್ಟೆ ಖರೀದಿಸಿ ರಿಕ್ಷಾದಲ್ಲಿ ಮನೆಯತ್ತ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ