ಪಾಕಿಸ್ತಾನ : ಪಾಕ್ ಜೈಲಿನಲ್ಲಿದ್ದ ಭಾರತೀಯ ಮೀನುಗಾರ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣು.
Thursday, March 27, 2025

ಇಸ್ಲಮಾಬಾದ್: ಭಾರತೀಯ ಮೀನುಗಾರ ಪಾಕಿಸ್ತಾನದ ಕರಾಚಿಯ ಮಲಿರ್ ಪ್ರದೇಶದ ಜೈಲಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನೇಣಿಗೆ ಶರಣಾದ ವ್ಯಕ್ತಿಯನ್ನು ಗೌರವ್ ರಾಮ್ ಆನಂದ್ (52) ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ ಜೈಲಿನ ಬ್ಯಾರಕ್‌ನ ಸ್ನಾನಗೃಹದಲ್ಲಿ ಆತ ಹಗ್ಗದಿಂದ ನೇಣು ಬಿಗಿದುಕೊಂಡಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.
ಫೆಬ್ರವರಿ 2022 ರಲ್ಲಿ ಡಾಕ್ಸ್ ಪೊಲೀಸರು ಗೌರವ್ ರಾಮ್ ಆನಂದ್‌ನನ್ನು ಬಂಧಿಸಿದ್ದರು.ವೈದ್ಯರು ಕೈದಿಯನ್ನು ಪರೀಕ್ಷಿಸಿ ರಾತ್ರಿ 2:20ಕ್ಕೆ ಮೃತಪಟ್ಟಿದ್ದಾನೆ ಎಂದು ಖಚಿತಪಡಿಸಿದ್ದಾರೆ. ನ್ಯಾಯಾಧೀಶರು ವಿಚಾರಣೆ ನಡೆಸಿ, ಕಾನೂನು ಕಾರ್ಯವಿಧಾನಗಳು ಮತ್ತು ಮುಂದಿನ ಆದೇಶಗಳು ಪೂರ್ಣಗೊಳ್ಳುವವರೆಗೆ ಶವವನ್ನು ಸೊಹ್ರಾಬ್ ಗೋತ್‌ನಲ್ಲಿರುವ ಈಧಿ ಫೌಂಡೇಶನ್‌ನ ಕೋಲ್ಡ್ ಸ್ಟೋರೇಜ್‌ನಲ್ಲಿ ಇಡಲು ಸೂಚಿಸಿದ್ದಾರೆ.