ನವದೆಹಲಿ :ನಡುಗಿದ ಮ್ಯಾನ್ಮಾರ್, ಥೈಲ್ಯಾಂಡ್ ; ಭೀಕರ ಭೂಕಂಪಕ್ಕೆ ನೆಲಸಮ ಆದ ಗಗನಚುಂಬಿ ಕಟ್ಟಡಗಳು, ನೋಡ ನೋಡುತ್ತಲೇ ಕುಸಿದ ಭೂಮಿ ! ನೂರಾರು ಮಂದಿ ಸಾವಿನ ಶಂಕೆ

ನವದೆಹಲಿ, ಮಾ.28 : ಭಾರತದ ನೆರೆ ರಾಷ್ಟ್ರ ಮ್ಯಾನ್ಮಾರ್ ನಲ್ಲಿ ಭೀಕರ ಭೂಕಂಪ ಸಂಭವಿಸಿದೆ. ಇಂದು ಬೆಳಗ್ಗೆ 11:50ರ ಸುಮಾರಿಗೆ ಭೂಮಿ ನಡುಗಿದ್ದು ಕ್ಷಣಾರ್ಧದಲ್ಲಿ ಗಗನ ಚುಂಬಿ ಕಟ್ಟಡಗಳು ನೆಲಕ್ಕುರುಳಿ ಬಿದ್ದಿಚೆ. ಮೊದಲ ಕಂಪನದ ತೀವ್ರತೆ 7.2ರಷ್ಟಿದ್ದರೆ, 2ನೇ ಸಲ ಕಂಪನದ ತೀವ್ರತೆ 7ರಷ್ಟು ದಾಖಲಾಗಿದೆ.
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲೂ ಭೂಕಂಪನ ಅನುಭವಕ್ಕೆ ಬಂದಿದೆ. ವಿಯೆಟ್ನಾಂ ಸೇರಿದಂತೆ ನೆರೆಯ ದೇಶಗಳಲ್ಲು ಭೂಕಂಪನದ ಅನುಭವವಾಗಿದೆ. ಭಾರತದ ಈಶಾನ್ಯ ರಾಜ್ಯಗಳಲ್ಲಿ ಕಂಪನ ಆಗಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.

![]()




ಮ್ಯಾನ್ಮಾರ್ ದೇಶದ ಎರಡನೇ ಅತಿದೊಡ್ಡ ಮಂಡಾಲೆ ನಗರದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಈ ನಗರದಿಂದ 17.2 ಕಿಮೀ ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಇದ್ದು 10 ಕಿಮೀ ಆಳದಿಂದ ಭೂಮಿ ಕಂಪಿಸಿದೆ. ಭಾರತದ ಮಣಿಪುರ, ಪಶ್ಚಿಮ ಬಂಗಾಳದಲ್ಲು ಕಂಪನದ ಅನುಭವ ಆಗಿದೆ. ಅಲ್ಲದೆ, ಬಾಂಗ್ಲಾದೇಶದಲ್ಲು ಕಂಪನ ಉಂಟಾಗಿದೆ.


)


![]()
ಥೈಲ್ಯಾಂಡ್ ನಲ್ಲಿ ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ. ಮ್ಯಾನ್ಮಾರ್ ದೇಶದ ಗಡಿ ಹಂಚಿಕೊಂಡಿರುವ ಚೀನಾ ದೇಶದ ಯುನಾನ್ ಪ್ರಾಂತ್ಯದಲ್ಲಿ ಕಂಪನ ಉಂಟಾಗಿದೆ. ಮ್ಯಾನ್ಮಾರ್ ದೇಶದಲ್ಲಿ ಭಾರೀ ನಾಶ- ನಷ್ಟ ಆಗಿರುವುದರಿಂದ ಎಮರ್ಜೆನ್ಸಿ ಘೋಷಣೆಯಾಗಿದೆ. ನೂರಾರು ಮಂದಿ ಕಟ್ಟಡಗಳ ಗಡಿಭಾಗದಲ್ಲಿ ಸಿಲುಕಿದ್ದು ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ.
ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಅನೇಕ ಎತ್ತರದ ಕಟ್ಟಡಗಳು ಕ್ಷಣಾರ್ಧದಲ್ಲಿ ನೆಲಸಮಗೊಂಡಿದ್ದು ಇದರ ವಿಡಿಯೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ನೂರಾರು ಮಂದಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಗಗನಚುಂಬಿ ಕಟ್ಟಡಗಳಿಗೆ ಹೆಸರಾಗಿರುವ ಬ್ಯಾಂಕಾಕ್ ನಲ್ಲಿ ಜಗತ್ತಿನ ಎಲ್ಲ ದೇಶಗಳ ಜನರಿದ್ದು ಪ್ರವಾಸಕ್ಕೆ ಹೆಸರುವಾಸಿಯಾಗಿದೆ. ಸುಮಾರು 17 ಮಿಲಿಯನ್ ಜನರು ಈ ನಗರದಲ್ಲಿ ವಾಸ ಇದ್ದಾರೆ.