ನ್ಯೂಯಾರ್ಕ್ :ಟೂರ್ ನೆಪದಲ್ಲಿ ಸ್ವಂತ ಮಗನನ್ನೇ ಕತ್ತು ಸೀಳಿದ ತಾಯಿ.
ನ್ಯೂಯಾರ್ಕ್: 11 ವರ್ಷದ ಸ್ವಂತ ಮಗನನ್ನು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.
ಯತಿನ್ ಮೃತ ಬಾಲಕ ಎಂದು ತಿಳಿದು ಬಂದಿದೆ. ಸರಿತಾ ರಾಮರಾಜು ಎಂಬ ಭಾರತ ಮೂಲದ ಮಹಿಳೆ ಕೊಲೆ ಆರೋಪಿ. ಈ ಸರಿತಾ ರಾಮರಾಜು ತನ್ನ ಮಗನನ್ನು ಪ್ರವಾಸಕ್ಕೆಂದು ಡಿಸ್ನಿಲ್ಯಾಂಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಆ ನಂತರ ಅಲ್ಲಿನ ಹೋಟೆಲ್‌ನಲ್ಲಿಯೇ ತನ್ನ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾಳೆ. ಹೀಗೆ ಕೊಲೆ ಮಾಡಿದ ನಂತರ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ.
ಸರಿತಾ ರಾಮರಾಜು ತಮ್ಮ ಪತಿಯಿಂದ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಇನ್ನು ಮಗ ತಂದೆಯ ಜೊತಿಯಿದ್ದ. ಆದ್ರೆ ಈಕೆ ಕೆಲ ದಿನಗಳ ಹಿಂದೆ ಮಗನನ್ನು ಭೇಟಿಯಾಗಿ ಪ್ರವಾಸಕ್ಕೆ ಕರೆದೊಯ್ಯುವುದಾಗಿ ಪುಸಲಾಯಿಸಿದ್ದಾಳೆ.
ಆ ನಂತರ ಈ ರೀತಿ ಮಗನ ಕತ್ತು ಸೀಳಿ ಕೊಂದಿದ್ದಾಳೆ. ಹೀಗೆ ಮಗನನ್ನು ಕೊಂದ ನಂತರ ಪೊಲೀಸರಿಗೆ ಆಕೆಯೇ ಕರೆಮಾಡಿ ಈ ಬಗ್ಗೆ ತಿಳಿಸಿದ್ದಾಳೆ ಎನ್ನಲಾಗಿದೆ. ಆದ್ರೆ ತನ್ನ ಸ್ವಂತ ಮಗನನ್ನೇ ತಾಯಿ ಇಷ್ಟು ಕ್ರೂರವಾಗಿ ಕೊಲ್ಲಲು ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ.