ಮಂಗಳೂರು : ವಾಮಂಜೂರು ಶೂಟೌಟ್ ಕೇಸು, ಪಿಸ್ತೂಲ್ ಒದಗಿಸಿದ್ದ ಕೇರಳದ ಅಬ್ದುಲ್ ಲತೀಫ್ ಸೇರಿ ಐವರು ಕುಖ್ಯಾತ ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ.

ಮಂಗಳೂರು : ವಾಮಂಜೂರು ಶೂಟೌಟ್ ಕೇಸು, ಪಿಸ್ತೂಲ್ ಒದಗಿಸಿದ್ದ ಕೇರಳದ ಅಬ್ದುಲ್ ಲತೀಫ್ ಸೇರಿ ಐವರು ಕುಖ್ಯಾತ ಆರೋಪಿಗಳು ಸಿಸಿಬಿ ಪೊಲೀಸರ ಬಲೆಗೆ.

ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಮೂರು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ನಿಷೇಧಿತ ಮಾದಕ ವಸ್ತು, ಅಕ್ರಮ ಪಿಸ್ತೂಲ್ ಸಾಗಾಟ ಪ್ರಕರಣ ಸಂಬಂಧಿಸಿ ಕೇರಳ- ಕರ್ನಾಟಕ ರಾಜ್ಯದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾದ ಮೂವರು ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಮೂರು ಪಿಸ್ತೂಲ್, 6 ಸಜೀವ ಮದ್ದುಗುಂಡುಗಳು ಹಾಗೂ 12.895 ಕೇಜಿ ಗಾಂಜಾ, ಮೂರು ಕಾರು, ಇತರ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಮಾರ್ಚ್ 12ರಂದು ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ನಗರದ ನಾಟೆಕಲ್ ಪರಿಸರದಲ್ಲಿ ಕೆಎಲ್ 14 ಜಿ- 9080 ನಂಬರಿನ ಕಾರೊಂದು ಅನುಮಾನಾಸ್ಪದ ರೀತಿ ತಿರುಗಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಕಾರಿನಲ್ಲಿದ್ದ ಕಾಸರಗೋಡು ಜಿಲ್ಲೆಯ ವೆಸ್ಟ್ ಎಳೇರಿ ನಿವಾಸಿ ನೌಫಾಲ್ (38), ಪೈವಳಿಕೆ ನಿವಾಸಿ ಮನ್ಸೂರ್(36) ಎಂಬವರನ್ನು ವಶಕ್ಕೆ ಪಡೆದಿದ್ದು, ಕಾರಿನಲ್ಲಿ ತಪಾಸಣೆ ನಡೆಸಿದಾಗ ಎರಡು ಪಿಸ್ತೂಲ್, ನಾಲ್ಕು ಸಜೀವ ಮದ್ದುಗುಂಡು, ಎರಡು ಮೊಬೈಲ್ ಫೋನ್ ಸಿಕ್ಕಿದ್ದು ಸ್ಕಾರ್ಪಿಯೋ ಕಾರನ್ನು ವಶಪಡಿಸಲಾಗಿದೆ. ನೌಫಾಲ್ ವಿರುದ್ಧ ಕಾಸರಗೋಡು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಮಾದಕ ದ್ರವ್ಯಕ್ಕೆ ಸಂಬಂಧಿಸಿ ಆರು ಪ್ರಕರಣ ದಾಖಲಾಗಿದೆ. ಮನ್ಸೂರ್ ವಿರುದ್ಧ ಕಾಸರಗೋಡಿನ ವಿವಿಧ ಠಾಣೆಗಳಲ್ಲಿ ನಾಲ್ಕು ಪ್ರಕರಣ ದಾಖಲಾಗಿದೆ.

ಶೂಟೌಟ್, ಪಿಸ್ತೂಲ್ ಒದಗಿಸಿದ್ದ ಆರೋಪಿ ಸೆರೆ

ಮತ್ತೊಂದು ಪ್ರಕರಣದಲ್ಲಿ ಕೇರಳದಿಂದ ಮಂಗಳೂರಿಗೆ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದು ಅರ್ಕುಳದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ನಿವಾಸಿ ಅಬ್ದುಲ್ ಲತೀಫ್ (29) ಎಂಬಾತನನ್ನು ಕಾರು ಸಹಿತ ಬಂಧಿಸಿದ್ದಾರೆ. ಕೆಎಲ್ 10-ಬಿಸಿ 6548 ನಂಬರಿನ ಸ್ವಿಫ್ಟ್ ಕಾರು ಮತ್ತು ಅದರಲ್ಲಿದ್ದ 12.895 ಕೇಜಿ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಅಬ್ದುಲ್ ಲತೀಫ್, ಇತ್ತೀಚೆಗೆ ಗ್ರಾಮಾಂತರ ಠಾಣೆ ವ್ಯಾಪ್ತಿಯ ವಾಮಂಜೂರಿನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ಒದಗಿಸಿದ್ದ. ಈ ಹಿಂದೆ, ಒಂದು ವರ್ಷದ ಹಿಂದೆ ಉಳ್ಳಾಲದಲ್ಲಿ ಅಕ್ರಮ ಪಿಸ್ತೂಲ್ ಹೊಂದಿದ್ದ ಅಸ್ಗರ್ ಎಂಬಾತನಿಗೂ ಪಿಸ್ತೂಲ್ ಒದಗಿಸಿದ್ದ ಎನ್ನುವ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಅಬ್ದುಲ್ ಲತೀಫ್ ವಿರುದ್ಧ ಕೇರಳ ಮತ್ತು ಕರ್ನಾಟಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಕೇಸು, ಹಲ್ಲೆ, ಕೊಲೆಯತ್ನ, ದರೋಡೆ, ಕೊಲೆ ಸೇರಿದಂತೆ 13 ಪ್ರಕರಣಗಳಿವೆ ಎಂಬುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕೇರಳ ಗಡಿಭಾಗ ತಲಪಾಡಿಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಾಸ್ಪದ ರೀತಿ ತಿರುಗಾಡುತ್ತಿದ್ದ ಮತ್ತಿಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದು, ಅವರ ಕೈಯಲ್ಲಿದ್ದ ಒಂದು ಪಿಸ್ತೂಲ್, ಸಜೀವ ಮದ್ದುಗುಂಡು-2, ಮೊಬೈಲ್ ಫೋನ್ ಮತ್ತು ಕಾರನ್ನು ವಶಕ್ಕೆ ಪಡೆದಿದ್ದಾರೆ. ಮಂಜೇಶ್ವರ ತಾಲೂಕಿನ ಕಡಂಬಾರು ಮೊರತ್ತಣೆ ನಿವಾಸಿಗಳಾದ ಮಹಮ್ಮದ್ ಅಸ್ಗರ್ (27) ಮತ್ತು ಮಹಮ್ಮದ್ ಸಾಲಿ (31) ಎಂಬವರನ್ನು ಬಂಧಿಸಲಾಗಿದೆ. ಮಹಮ್ಮದ್ ಅಸ್ಗರ್ ವಿರುದ್ಧ ದರೋಡೆ, ಕೊಲೆಯತ್ನ ಸೇರಿ ಕೇರಳ- ಕರ್ನಾಟಕದಲ್ಲಿ 17 ಪ್ರಕರಣಗಳಿದ್ದರೆ, ಮಹಮ್ಮದ್ ಸಾಲಿ ವಿರುದ್ಧ ಮಂಜೇಶ್ವರ ಠಾಣೆಯಲ್ಲಿ ಹಲ್ಲೆ, ಕೊಲೆಯತ್ನ, ಮರಳು ಸಾಗಾಟ ಸೇರಿ 10 ಪ್ರಕರಗಳಿವೆ.

Ads on article

Advertise in articles 1

advertising articles 2

Advertise under the article