ಕೇರಳ: ನಟ ದರ್ಶನ ಕುಟುಂಬದ ಜೊತೆ ಕೇರಳ ಪ್ರಸಿದ್ದ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀತ್ ಹಾಗೂ ಧನ್ವೀರ್ ಗೌಡ ಅವರುಗಳ ಜೊತೆಯಲ್ಲಿ ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಶ್ರೀಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಈ ದೇವಾಲಯವು ಶತ್ರು ಸಂಹಾರ ಹೋಮಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಇದೀಗ ದರ್ಶನ್ ಅವರು ಕುಟುಂಬ ಸಮೇತ ಇಲ್ಲಿಗೆ ಬಂದಿರುವುದು ಸಹ ಶತ್ರು ಸಂಹಾರ ಹೋಮಕ್ಕಾಗಿಯೇ ಎನ್ನಲಾಗುತ್ತಿದೆ.
ಇದೀಗ ನಟ ದರ್ಶನ್ ಈ ದೇವಾಲಯಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ದರ್ಶನ್, ತಮ್ಮ ಶತ್ರುಗಳ ವಿರುದ್ಧ ಜಯ ಕಾಣಲೆಂದು, ಶತ್ರು ಕಾಟ ನಿವಾರಣೆಗಾಗಿ ಈ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರ ಇಚ್ಛೆ ಈಡೇರುತ್ತದೆಯೇ ಕಾದು ನೋಡಬೇಕಿದೆ.