ಕೊಡಗು : ಅತ್ತೆ - ಮಾವ ಸೇರಿ ನಾಲ್ವರನ್ನು ಕೊಚ್ಚಿ ಕೊಂದ ಅಳಿಯ, ಅನೈತಿಕ ಸಂಬಂಧಕ್ಕೆ ನಡೀತಾ ಭೀಕರ ಕೃತ್ಯ ? ಒಂಟಿ ಮನೆಯಲ್ಲಿ ನಾಲ್ವರ ಹೆಣ !

ಕೊಡಗು: ಒಂದೇ ಕುಟುಂಬದ ನಾಲ್ವರನ್ನ ಭೀಕರವಾಗಿ ಹತ್ಯೆ ಮಾಡಿರುವ ಪ್ರಕರಣ ಇದೀಗ ಕೊಡಗಿನಲ್ಲಿ ಬೆಳಕಿಗೆ ಬಂದಿದೆ. ಅಳಿಯನಿಂದಲೇ ಅತ್ತೆ, ಮಾವ, ಪತ್ನಿ ಮತ್ತು ಮಗಳ ಹತ್ಯೆ ಆಗಿದೆ.
ಕೊಡಗು ಜಿಲ್ಲೆಯ ಪೋನಂಪೇಟೆ ತಾಲ್ಲೂಕಿನ ಬೇಗೂರು ಸಮೀಪದ ಕೊಳತೋಡು ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, 7 ವರ್ಷದ ಮಗಳು ಸೇರಿ ಅತ್ತೆ, ಮಾವ, ಪತ್ನಿಯನ್ನ ಗಂಡ ಗಿರೀಶ್ ಕತ್ತಿಯಿಂದ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.


ಇನ್ನು ಕೊಲೆಯಾದವರನ್ನು ಮಾವ ಕರಿಯ (75), ಅತ್ತೆ ಗೌರಿ (70), ಪತ್ನಿ ನಾಗಿ (35), ಮಗಳು ಕಾವೇರಿ (7) ಎಂದು ಗುರುತಿಸಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾಗಿದ್ದು, ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೊಡಗು ಎಸ್ಪಿ ರಾಮರಾನ್ ಭೇಟಿ ನೀಡಿದ್ದಾರೆ.
ಪತ್ನಿ ನಾಗಿಯೊಂದಿಗೆ ಗಿರೀಶ್ 3ನೇ ಮದುವೆಯಾಗಿ ತೋಟದ ಮನೆಯಲ್ಲಿ ಜೀವನ ನಡೆಸುತ್ತಿದ್ದ. ಇನ್ನೂ ಕಾಫಿ ಬೀಜ ಮಾರಾಟ ಮಾಡಿ ಬಂದ ಹಣದ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು. ಅಲ್ಲದೇ ಅನೈತಿಕ ಸಂಬಂಧದ ಹಿನ್ನೆಲೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಆದರೆ ಈ ಕೃತ್ಯ ಯಾಕೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿ ಪೊಲೀಸರ ತನಿಖೆಯಿಂದ ತಿಳಿದು ಬರಬೇಕಷ್ಟೇ.