ಐಸ್ ಲ್ಯಾಂಡ್ :ಹದಿಹರೆಯದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ ತಪ್ಪಿಗೆ ಐಸ್ ಲ್ಯಾಂಡ್ ದೇಶದ ಸಚಿವೆ ರಾಜಿನಾಮೆ !!!

ನವದೆಹಲಿ : ಹದಿಹರೆಯದ ಹುಡುಗನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡು ಗರ್ಭವತಿಯಾಗಿದ್ದರಿಂದ ಐಸ್ ಲ್ಯಾಂಡ್ ದೇಶದ ಸಚಿವೆಯೊಬ್ಬರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ ಪ್ರಸಂಗ ನಡೆದಿದೆ.
ಐಸ್‌ಲ್ಯಾಂಡ್ ದೇಶದ ಮಕ್ಕಳ ಕಲ್ಯಾಣ ವಿಭಾಗದ ಸಚಿವೆ ಅಸ್ತಿಲ್ಡರ್ ಲೋವಾ ಥೋರ್ಸ್‌ಡೋಟ್ಟಿರ್ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಅದಕ್ಕೆ ಕಾರಣವನ್ನೂ ಕೊಟ್ಟುಕೊಂಡಿದ್ದಾರೆ. ಮೂರು ದಶಕಗಳ ಹಿಂದೆ ತಾನು ಹರೆಯದಲ್ಲಿದ್ದಾಗ ಟೀನೇಜ್ ಹುಡುಗೊಂದಿಗೆ ಸೆಕ್ಸ್ ಮಾಡಿ ಮಗು ಪಡೆದಿದ್ದೆ. ಇದಕ್ಕಾಗಿ ಪಶ್ಚಾತ್ತಾಪದಿಂದ ಈಗ ಮಕ್ಕಳ ಕಲ್ಯಾಣ ಸಚಿವ ಸ್ಥಾನ ತ್ಯಜಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಪ್ರಸ್ತುತ 55 ವಯಸ್ಸಿನ ಅಸ್ತಿಲ್ಡರ್ ಲೋವಾ ತಮ್ಮ 22ನೇ ವಯಸ್ಸಿನಲ್ಲಿದ್ದಾಗ 15 ವರ್ಷದ ಹುಡುಗನೊಂದಿಗೆ ಅಕ್ರಮ ಸಂಬಂಧ ಏರ್ಪಟ್ಟು ಮಗು ಪಡೆದಿದ್ದರಂತೆ. ಈ ವಿಚಾರ ಲೀಕ್ ಆಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದರಿಂದ ಸಚಿವೆ ವಿವಾದಕ್ಕೆ ಸಿಲುಕಿದ್ದರು. ಇದೀಗ ತಮ್ಮ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ವಿವಾದಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.
ತಾನು ಭಾಗವಹಿಸುತ್ತಿದ್ದ ಧಾರ್ಮಿಕ ಸಭೆಯಲ್ಲಿ ಟೀನೇಜ್ ಹುಡುಗನ ಪರಿಚಯವಾಗಿತ್ತು. ಆಗ ನನಗೆ 22 ವರ್ಷ ಮತ್ತು ಆತನಿಗೆ 15 ವರ್ಷ ಆಗಿತ್ತು. ಇಬ್ಬರೂ ಪರಸ್ಪರ ಆಕರ್ಷಿತಗೊಂಡಿದ್ದೆವು. ನನ್ನ ಕಷ್ಟದ ಸಮಯದಲ್ಲಿ ಆತನ ಮನೆಯಲ್ಲಿ ಆಶ್ರಯ ಪಡೆದಿದ್ದೆ. 23ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದೆ ಎಂದು ಹೇಳಿಕೊಂಡಿದ್ದಾರೆ.
ಅಂದಹಾಗೆ ಐಸ್ಯ್ ಲ್ಯಾಂಡ್ ನಲ್ಲಿ ಒಪ್ಪಿಗೆಯ ದೈಹಿಕ ಸಂಪರ್ಕಕ್ಕೆ 15 ವರ್ಷ ಆಗಿದ್ದರೆ ಸಾಕು. ವ್ಯಕ್ತಿ ಮಾರ್ಗದರ್ಶಕ ಅಥವಾ ಶಿಕ್ಷಕರಾಗಿದ್ದರೆ ಅಥವಾ ಅವರು ನಿಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದರೆ ಅಥವಾ ನಿಮಗಾಗಿ ಕೆಲಸ ಮಾಡುತ್ತಿದ್ದರೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಕಾನೂನುಬಾಹಿರವಾಗಿದೆ. ಒಂದು ವೇಳೆ ತಪ್ಪಿತಸ್ಥರೆಂದು ಕಂಡುಬಂದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸ ಬಹುದಾಗಿದೆ.