ಬೆಂಗಳೂರು :ಅಧಿವೇಶನದಲ್ಲಿ ಹನಿಟ್ರ್ಯಾಪ್ ಸದ್ದು ; ಈಗ ಸಚಿವ ಕೆ.ಎನ್ ರಾಜಣ್ಣ ಟ್ರಾಪ್ ಸರದಿ, ಒಬ್ಬನದ್ದಲ್ಲ 48 ಜನರ ಸಿಡಿ ಇದೆ ! ಡಿಕೆಶಿ ಟೀಮ್ ಬಗ್ಗೆ ಮುನಿರತ್ನ ಆರೋಪ, ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರ ಆದೇಶ.

ಬೆಂಗಳೂರು :ಅಧಿವೇಶನದಲ್ಲಿ ಹನಿಟ್ರ್ಯಾಪ್ ಸದ್ದು ; ಈಗ ಸಚಿವ ಕೆ.ಎನ್ ರಾಜಣ್ಣ ಟ್ರಾಪ್ ಸರದಿ, ಒಬ್ಬನದ್ದಲ್ಲ 48 ಜನರ ಸಿಡಿ ಇದೆ ! ಡಿಕೆಶಿ ಟೀಮ್ ಬಗ್ಗೆ ಮುನಿರತ್ನ ಆರೋಪ, ಉನ್ನತ ಮಟ್ಟದ ತನಿಖೆಗೆ ಗೃಹ ಸಚಿವರ ಆದೇಶ.


ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಹನಿಟ್ರ್ಯಾಪ್ ಪ್ರಕರಣ ಇದೀಗ ವಿಧಾನಸಭೆ ಅಧಿವೇಶನದಲ್ಲು ಪ್ರತಿಧ್ವನಿಸಿದೆ. ಶಾಸಕರು, ಸಚಿವರಿಗೆ ಹನಿಟ್ರ್ಯಾಪ್ ಮಾಡಲಾಗುತ್ತಿದೆ ಎಂಬ ಆರೋಪ ಕುರಿತು ಗಂಭೀರ ಚರ್ಚೆ ನಡೆಯಿತು. ಬೆಳಗ್ಗೆ ಕಲಾಪದಲ್ಲಿ ಪಾಲ್ಗೊಂಡು ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಆಗಿದೆ ಎಂದು ಹೇಳಿ ಸ್ಪಷ್ಟನೆ ಕೇಳಿದರು. 

ಆರೋಪ ಕುರಿತು ಪ್ರತಿಕ್ರಿಯಿಸಿದ ಸಚಿವ ರಾಜಣ್ಣ, ಕರ್ನಾಟಕ ಮಾತ್ರದಲ್ಲದೇ ದೇಶಾದ್ಯಂತ ಹನಿಟ್ರ್ಯಾಪ್ ನಡೆಯುತ್ತಿದೆ. ಕರ್ನಾಟಕ ಸಿಡಿ, ಪೆನ್ ಡ್ರೈವ್ ಕಾರ್ಖಾನೆ ಆಗಿದೆ. ಒಂದೆರಡಲ್ಲ, 48 ಜನ ಶಾಸಕರ ಹನಿಟ್ರ್ಯಾಪ್ ಮಾಡಲಾಗಿದೆ. ಸಿಡಿ, ಪೆನ್ ಡ್ರೈವ್ ಮಾಡುವಂತಹ 48 ಜನರು ನಮ್ಮ ನಡುವೆ ಇದ್ದಾರೆ. ಈ ಸಂಬಂಧ ಗೃಹ ಸಚಿವರಿಗೆ ಲಿಖಿತ ದೂರು ನೀಡುತ್ತೇನೆ. ಗೃಹ ಸಚಿವರು ವಿಶೇಷ ತನಿಖೆ ಮಾಡಿಸಬೇಕು. ಇದರ ಹಿಂದಿರುವ ನಿರ್ದೇಶಕರು ಯಾರೆಂಬುದು ಗೊತ್ತಾಗಲಿದೆ ಎಂದರು.

ಡಿಕೆ ಶಿವಕುಮಾರ್ ಮಹಾಪಾಪದ ಕೆಲಸ‌

ಈ ವೇಳೆ ಮಾತನಾಡಿದ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ನನ್ನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಕಾರಣ. ನನಗೆ 15 ವರ್ಷದ ಮೊಮ್ಮಕ್ಕಳು ಇದ್ದಾರೆ. ಹೆಚ್.ಡಿ ರೇವಣ್ಣ, ರಮೇಶ್ ಜಾರಕಿಹೊಳಿ ಮನೆ ಹಾಳು ಮಾಡಿದ್ದು, ಈಗ ರಾಜಣ್ಣ ಅವರಿಗೂ ಮಾಡಿದ್ದಾರೆ. ಡಿಕೆ ಶಿವಕುಮಾರ್ ಮಹಾಪಾಪದ ಕೆಲಸ ಮಾಡುತ್ತಿದ್ದಾರೆ. ಇದನ್ನು ಇಲ್ಲಿಗೇ ನಿಲ್ಲಿಸಬೇಕು. ಇಲ್ಲದಿದ್ದರೆ ಎಲ್ಲಾ ಶಾಸಕರ ಜೀವನ ಹಾಳು ಮಾಡುತ್ತಾರೆ ಎಂದು ಆರೋಪಿಸಿದರು. ಡಿಕೆಶಿಯವರು ತಾನು ಆ ರೀತಿ ಮಾಡಿಲ್ಲ ಅಂದ್ರೆ ಅಜ್ಜಯ್ಯ ಮತ್ತು ಶನಿ ದೇವರ ಫೋಟೊ ಹಿಡಿದು ಪ್ರಮಾಣ ಮಾಡಲಿ ಎಂದು ಸವಾಲೆಸೆದರು. ನಿಮ್ಮ ಹನಿಟ್ರ್ಯಾಪ್ ಟೀಮ್ ಬಗ್ಗೆ ಗೊತ್ತಿದೆ, ನೀವು ರಾತ್ರಿ ಮೀಟಿಂಗ್ ಮಾಡಿದ್ದೂ ಗೊತ್ತಿದೆ. ಈ ರೀತಿಯ ಪಾಪದ ಕೆಲಸ ಯಾಕೆ ಬೇಕು. ನನ್ನಲ್ಲಿ ಸಿಸಿಟಿವಿ, ಆಡಿಯೋ ಎಲ್ಲ ಸಾಕ್ಷಿ ಇವೆ ಎಂದು ಹೇಳಿದರು. 

ರಾಜಣ್ಣ ಮಾತಿಗೆ ಬೆಂಬಲ ಘೋಷಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಇಂತಹ ಪಾಪದ ಕೆಲಸಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು. ಮತ್ತೊಂದೆಡೆ ಈ ಕುರಿತು ಗೃಹ ಸಚಿವರು ಯಾವ ರೀತಿಯ ತನಿಖೆ ನಡೆಸುತ್ತಾರೆಂದು ಬಹಿರಂಗಪಡಿಸಬೇಕು ಎಂದು ಪಟ್ಟುಹಿಡಿದ ವಿಪಕ್ಷ ನಾಯಕ ಆರ್.ಅಶೋಕ್, ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಉನ್ನತ ಮಟ್ಟದ ತನಿಖೆಗೆ ಆದೇಶ 

ರಾಜಣ್ಣ ದೂರು ನೀಡಿದರೆ ಉನ್ನತ ಮಟ್ಟದ ತನಿಖೆಗೆ ಆದೇಶಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಸದನಕ್ಕೆ ಭರವಸೆ ನೀಡಿದರು. ಯತ್ನಾಳ್ ಸೇರಿ ಕೆಲವು ಸದಸ್ಯರು ಬಹಳ ಗಂಭೀರವಾದ ವಿಷಯ ಎತ್ತಿದ್ದಾರೆ. ಇದು ಈ ಸದನದ ಪ್ರತಿಯೊಬ್ಬ ಸದಸ್ಯನ ಪ್ರಶ್ನೆ, ಇದಕ್ಕೆ ಒಂದು ಫುಲ್ ಸ್ಟಾಪ್ ಹಾಕಬೇಕು ಎಂದು ಹೇಳಿದರು.

Ads on article

Advertise in articles 1

advertising articles 2

Advertise under the article