ಗದಗ :ವಿದ್ಯಾರ್ಥಿನಿಯರ ಮೇಲೆ ಕೆಮಿಕಲ್ ಮಿಶ್ರಿತ ‘ಹೋಳಿ’ ಬಣ್ಣ ಎರಚಿದ ಪುಂಡರು;ಅಸ್ವಸ್ಥ ಗೊಂಡ ನಾಲ್ವರು ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲು.
Friday, March 14, 2025
ಗದಗ: ಹೋಳಿ ಆಚರಣೆ ನೆಪದಲ್ಲಿ ದುಷ್ಕರ್ಮಿಗಳು ಅಟ್ಟಹಾಸ ಮೆರೆದಿದ್ದು, ಕೆಮಿಕಲ್ ಮಿಶ್ರಿತ ಹೋಳಿ ಎರಚಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಗದಗದಲ್ಲಿ ನಡೆದಿದೆ.
ಸುವರ್ಣಗಿರಿ ತಾಂಡಾ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಬರಲು ಬಸ್ ಕಾಯುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಕಿಡಿಗೇಡಿಗಳು ಕೆಮಿಕಲ್ ಮಿಶ್ರಿತ ಬಣ್ಣ ಎರಚಿದ್ದಾರೆ.
ಪರಿಣಾಮ ನಾಲ್ವರು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯಾರ್ಥಿನಿಯರು ಎದೆನೋವು, ಉಸಿರಾಟ ತೊಂದರೆಯಿಂದ ನರಳಾಡುತ್ತಿದ್ದಾರೆ.
ಗೌರಿ ಪೂಜಾರ, ದಿವ್ಯಾ ಲಮಾಣಿ, ಅಂಕಿತಾ, ಅನುಷಾ ಲಮಾಣಿ ಎಂಬ ನಾಲ್ವರು ವಿದ್ಯಾರ್ಥಿನಿಯರು ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಸುವರ್ಣಗಿರಿ ತಾಂಡಾ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಲಕ್ಷ್ಮೇಶ್ವರ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.