ಕಾನ್ಪುರ: ತಂದೆಯ ಸಾವು ಸಹಿಸಲಾಗದೆ ಮಗನಿಗೆ ಹೃದಯಾಘಾತ: ಒಟ್ಟಿಗೆ ಇಬ್ಬರ ಅಂತ್ಯಕ್ರಿಯೆ
Sunday, March 23, 2025
ಕಾನ್ಪುರ: ತಂದೆಯ ಮೃತದೇಹ ಕೊಂಡೊಯ್ಯುತ್ತಿರುವಾಗ ಹೃದಯಾಘಾತದಿಂದ ಮಗನೂ ಪ್ರಾಣಬಿಟ್ಟಿರುವ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಹಾಗೆಯೇ ತಂದೆಯ ಮೃತದೇಹ ಕಂಡು ಆಘಾತಕ್ಕೊಳಗಾಗಿದ್ದ ಮಗ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇಬ್ಬರ ಅಂತ್ಯಕ್ರಿಯೆಯನ್ನು ಒಟ್ಟಿಗೆ ನೆರವೇರಿಸಲಾಗಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಯುವಕನೊಬ್ಬ ತನ್ನ ತಂದೆಯ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಕರೆದೊಯ್ಯುತ್ತಿದ್ದ. ಆದರೆ ವಿಧಿ ಬೇರೆಯದನ್ನೇ ಬರೆದಿತ್ತು. ಕಾನ್ಪುರ ನಿವಾಸಿ ಲೈಕ್ ಅಹ್ಮದ್ ಮಾರ್ಚ್ 20 ರಂದು ಆರೋಗ್ಯ ಹದಗೆಟ್ಟ ಕಾರಣ ಖಾಸಗಿ ನರ್ಸಿಂಗ್ ಹೋಂನಲ್ಲಿ ನಿಧನರಾದರು.
ತಂದೆ ಬಗ್ಗೆ ಅತೀಕ್ ಗೆ ತುಂಬಾ ಪ್ರೀತಿ, ತಂದೆ ಸತ್ತಿದ್ದಾರೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದ್ದ. ಬಳಿಕ ಬೇರೆ ಆಸ್ಪತ್ರೆಗೆ ಕರೆದೊಯ್ದು ತನ್ನ ತಂದೆ ಬದುಕಿದ್ದಾರಲ್ಲವೇ ಆ ವೈದ್ಯರು ಸರಿಯಾಗಿ ಹೇಳಿಲ್ಲ ಎಂದು ವೈದ್ಯರ ಬಳಿ ತಂದೆಯ ಪ್ರಾಣಕ್ಕಾಗಿ ಅಂಗಲಾಚಿದ್ದ, ಆದರೆ ಸತ್ತವರು ಬದುಕಿ ಬರಲು ಸಾಧ್ಯವೇ, ಹೀಗಾಗಿ ಆ ವೈದ್ಯರೂ ಕೂಡ ತಂದೆ ಮೃತಪಟ್ಟಿದ್ದಾರೆಂದು ಹೇಳಿದ್ದರು.