ಇಂಗ್ಲೆಂಡ್ :ಬೀಚ್ ನಲ್ಲಿ ರೆಕ್ಕೆ ಹೊಂದಿರುವ ನಿಗೂಢ ಜೀವಿ ಅಸ್ಥಿಪಂಜರ ಪತ್ತೆ

ಇಂಗ್ಲೆಂಡ್ :ಬೀಚ್ ನಲ್ಲಿ ರೆಕ್ಕೆ ಹೊಂದಿರುವ ನಿಗೂಢ ಜೀವಿ ಅಸ್ಥಿಪಂಜರ ಪತ್ತೆ

ಏಲಿಯನ್ ರೀತಿ ಮುಖ ಹೊಂದಿರುವ ವಿಚಿತ್ರ ಜೀವಿಯಿಂದು ಸಮುದ್ರ ದಂಡೆಯಲ್ಲಿ ಪತ್ತೆಯಾಗಿದ್ದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಸದ್ಯ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

ಈ ವಿಚಿತ್ರ ಜೀವಿ ಇಂಗ್ಲೆಂಡ್‌ನ ಮಾರ್ಗೇಟ್ ನಗರದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ. ಪೌಲಾ ರೇಗನ್ ತನ್ನ ಪತಿ ಡೇವ್ ಜೊತೆ ಮಾರ್ಗೇಟ್‌ನ ಕಡಲ ತೀರದಲ್ಲಿ ವಾಕಿಂಗ್ ಮಾಡುವಾಗ ಈ ಅಸ್ಥಿ ಪಂಜರದಂತಹ ಜೀವಿ ಕಣ್ಣಿಗೆ ಬಿದ್ದಿದೆ. ವಿಚಿತ್ರ ಅಸ್ಥಿಪಂಜರ ನೋಡಿದ ದಂಪತಿ ತಕ್ಷಣ ಅದರ ಫೋಟೋ ತೆಗೆದಿದ್ದಾರೆ. ಇಬ್ಬರು ಅದರ ಜೊತೆಗೆ ಸೆಲ್ಪೀ ಸಹ ಕ್ಲಿಕ್ಕಿಸಿದ್ದಾರೆ. ಇದಾದ ಕೆಲವೇ ಸಮಯದಲ್ಲಿ ಅಲ್ಲಿ ಜನರು ಸೇರಿದ್ದಾರೆ. ಸಮುದ್ರ ತೀರಕ್ಕೆ ಬಂದವರು ಈ ವಿಚಿತ್ರ ಆಕೃತಿ ಕಂಡು ನಿಬ್ಬೆರಗಾಗಿದ್ದಾರೆ, ಆದ್ರೆ ಯಾವುದಿದು ಜೀವಿ, ತೀರಕ್ಕೆ ಹೇಗೆ ಬಂದಿದೆ ಎಂಬುದು ತಿಳಿಯದೆ ತಿಳಿದು ಬಂದಿಲ್ಲ.

Ads on article

Advertise in articles 1

advertising articles 2

Advertise under the article