ದಕ್ಷಿಣ ಕನ್ನಡ:ಜಿಲ್ಲೆಯಾದ್ಯಂತ ಮಿಂಚು ಗುಡುಗು ಸಹಿತ ಭಾರಿ ಮಳೆ. ಇಂದೂ ಕೂಡ ಮಳೆ ಬರುವ ನಿರೀಕ್ಷೆ ;ಹವಾಮಾನ ಮುನ್ಸೂಚನೆ ವರದಿ

ದಕ್ಷಿಣ ಕನ್ನಡ:ಜಿಲ್ಲೆಯಾದ್ಯಂತ ಮಿಂಚು ಗುಡುಗು ಸಹಿತ ಭಾರಿ ಮಳೆ. ಇಂದೂ ಕೂಡ ಮಳೆ ಬರುವ ನಿರೀಕ್ಷೆ ;ಹವಾಮಾನ ಮುನ್ಸೂಚನೆ ವರದಿ

ದಕ್ಷಿಣ ಕನ್ನಡ :ಕಳೆದ ಒಂದು ವಾರದಿಂದ ಬಿಸಿಲಿನ ತಾಪಕ್ಕೆ ಕಂಗೆಟ್ಟಿದ್ದ ಇಳೆ ತಂಪಾಗಿದೆ. ಮಂಗಳೂರು, ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ ತಾಲೂಕು ಸಹಿತ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದೆ. ಕೆಲವೊಂದು ತಗ್ಗು ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದೆ.

ಯಕ್ಷಗಾನ, ನೇಮಕ್ಕೂ ತೊಂದರೆ:
ಜಿಲ್ಲೆಯ ಹಲವು ಕಡೆಗಳಲ್ಲಿ ಯಕ್ಷಗಾನ, ನೇಮ, ನಾಟಕ ಸೇರಿದಂತೆ ಆಯೋಜಿಸಲಾಗಿದ್ದ ಕಾರ್ಯಕ್ರಮಗಳಿಗೆ ದಿಢೀರ್ ಸುರಿದ ಮಳೆಯಿಂದಾಗಿ ಸಮಸ್ಯೆ ಉಂಟಾಗಿದೆ. ಮನೆಯ ಅಂಗಳದಲ್ಲಿ ಒಣಗಲು ಹಾಕಿದ್ದ ಅಡಕೆ ಉದ್ದೆಯಾಗಿ ರೈತರಿಗೂ ಸಮಸ್ಯೆ ಉಂಟಾಗಿದೆ.

ಮಳೆ ಮುಂದುವರೆಯುವ ನಿರೀಕ್ಷೆ:
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮಳೆ ಕೆಲ ಗಂಟೆ ಇದೇ ರೀತಿ ಮುಂದುವರೆಯುವ ಸಾಧ್ಯತೆ ಇದೆ. ಮುಂದಿನ ಎರಡು ದಿನಗಳಲ್ಲಿ ಜಿಲ್ಲೆಯ ಅಲ್ಲಲ್ಲಿ ಸಾಧಾರಣ ಮಳೆ ಸುರಿಯುವ ನಿರೀಕ್ಷೆ ಇದೆ.

Ads on article

Advertise in articles 1

advertising articles 2

Advertise under the article