ನವದೆಹಲಿ:ಸಂಸದರ ವೇತನ, ಭತ್ಯೆ ಏರಿಕೆ ಮಾಡಿದ ಕೇಂದ್ರ.Central govt mp salary hike
Monday, March 24, 2025
ನವದೆಹಲಿ: ಕೇಂದ್ರ ಸರಕಾರವು ಸೋಮವಾರ ಸಂಸದರು ಮತ್ತು ಮಾಜಿ ಸಂಸದರ ವೇತನ, ದಿನಭತ್ಯೆ ಮತ್ತು ಪಿಂಚಣಿಗಳಲ್ಲಿ ಶೇ. 24 ರಷ್ಟು ಹೆಚ್ಚಳ ಏಪ್ರಿಲ್ 1, 2023 ರಿಂದ ಜಾರಿಗೆ ಬರುವಂತೆ ಅಧಿಸೂಚನೆ ಹೊರಡಿಸಿದೆ.
ಸಂಸದೀಯ ವ್ಯವಹಾರಗಳ ಸಚಿವಾಲಯ ಹೊರಡಿಸಿದ ಅಧಿಸೂಚನೆಯಲ್ಲಿ ಹಾಲಿ ಸದಸ್ಯರಿಗೆ ದಿನಭತ್ಯೆ ಮತ್ತು ಮಾಜಿ ಸದಸ್ಯರಿಗೆ ಐದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಪಿಂಚಣಿ ಮತ್ತು ಹೆಚ್ಚುವರಿ ಪಿಂಚಣಿಯನ್ನು ಹೆಚ್ಚಳ ಮಾಡಿದೆ.
ಹಾಲಿ ಸಂಸದ ಈಗ ಮಾಸಿಕ 1 ಲಕ್ಷ ರೂ. ವೇತನ ಪಡೆಯುತ್ತಿದ್ದು, ಇನ್ನು ಮುಂದೆ 1.24 ಲಕ್ಷ ರೂ. ವೇತನ ಪಡೆಯಲಿದ್ದಾರೆ. ದಿನಭತ್ಯೆಯನ್ನು 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಮಾಜಿ ಸಂಸದರ ಪಿಂಚಣಿಯನ್ನು ತಿಂಗಳಿಗೆ 25,000 ರೂ.ಗಳಿಂದ 31,000 ರೂ.ಗಳಿಗೆ ಹೆಚ್ಚಿಸಲಾಗಿದೆ. ಐದು ವರ್ಷಗಳಿಗಿಂತ ಹೆಚ್ಚಿನ ಸೇವೆ ಸಲ್ಲಿಸಿದ ಪ್ರತಿ ವರ್ಷಕ್ಕೆ ಹೆಚ್ಚುವರಿ ಪಿಂಚಣಿಯನ್ನು ತಿಂಗಳಿಗೆ 2,000 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗಿದೆ