ಬಳ್ಳಾರಿ : ಹಕ್ಕಿಜ್ವರ ಹಾವಳಿ ; ಹತ್ತು ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ, ಭೋಪಾಲ್ ಗೆ ಸ್ಯಾಂಪಲ್, ಕುಕ್ಕುಟ ಉದ್ಯಮಕ್ಕೆ ಭಾರಿ ಪೆಟ್ಟು.

ಬಳ್ಳಾರಿ : ಹಕ್ಕಿಜ್ವರ ಹಾವಳಿ ; ಹತ್ತು ಸಾವಿರಕ್ಕೂ ಹೆಚ್ಚು ಕೋಳಿಗಳ ಮಾರಣಹೋಮ, ಭೋಪಾಲ್ ಗೆ ಸ್ಯಾಂಪಲ್, ಕುಕ್ಕುಟ ಉದ್ಯಮಕ್ಕೆ ಭಾರಿ ಪೆಟ್ಟು.

ಬಳ್ಳಾರಿ : ಬಳ್ಳಾರಿ ಜಿಲ್ಲೆಯಾದ್ಯಂತ ಹಕ್ಕಿಜ್ವರ ಹಾವಳಿ ಕಾಣಿಸಿಕೊಂಡಿದ್ದು ಒಂದೇ ಫಾರಂನಲ್ಲಿ 8,000 ಕೋಳಿಗಳು ಸಾವನ್ನಪ್ಪಿದೆ. ನಿನ್ನೆ ಸಂಡೂರಲ್ಲಿ  2400 ಕೋಳಿಗಳ ಮಾರಣ ಹೋಮ ನಡೆದಿತ್ತು. ‌ರಾಜ್ಯದಲ್ಲೇ ಅತಿ ಹೆಚ್ಚು ಕೋಳಿ ಫಾರಂ ಬಳ್ಳಾರಿ ಜಿಲ್ಲೆಯಲ್ಲಿದ್ದು ಜ್ವರದ ಹಾವಳಿಯಿಂದಾಗಿ ಕುಕ್ಕುಟ ಉದ್ಯಮಕ್ಕೆ ಭಾರೀ ಪೆಟ್ಟು ಬೀಳಲಿದೆ. 

ಬಳ್ಳಾರಿ ಹೊರವಲಯದ ಕಪ್ಪಗಲ್ಲು ಗ್ರಾಮದ ಕೋಳಿ ಫಾರಂವೊಂದರಲ್ಲಿ ವಾರದಿಂದ ಈಚೆಗೆ 8 ಸಾವಿರ ಕೋಳಿಗಳು ಸಾವಿಗೀಡಾಗಿವೆ. ಕೋಳಿ ಸಾವಿಗೆ ಹಕ್ಕಿ ಜ್ವರ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು ಪರೀಕ್ಷೆಗಾಗಿ ಮಾದರಿಯನ್ನು ಬೆಂಗಳೂರಿಗೆ ಕಳಿಸಿಕೊಡಲಾಗಿದೆ. 

'ರವಿ ಎಂಬುವರಿಗೆ ಸೇರಿದ ಕೋಳಿ ಫಾರಂನಲ್ಲಿ ಕೋಳಿಗಳ ಮರಣಮೃದಂಗ ನಿರಂತರವಾಗಿದೆ. ಮೊದಲು 15 ಸಾವಿರ ಕೋಳಿಗಳಿದ್ದವು, ಈವರೆಗೆ 8 ಸಾವಿರ ಕೋಳಿಗಳು ಮೃತಪಟ್ಟಿವೆ. ಸದ್ಯ 7 ಸಾವಿರ ಕೋಳಿಗಳು ಮಾತ್ರವೇ ಜೀವಂತ ಇವೆ. ಇನ್ನೂ, ಹೆಚ್ಚಿನ ಪ್ರಮಾಣದಲ್ಲಿ ಕೋಳಿಗಳು ಸಾಯುವ ಸಾಧ್ಯತೆ ಇದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ‌

'ಮೃತ ಕೋಳಿಗಳ ಮಾದರಿಗಳನ್ನು ಬೆಂಗಳೂರಿಗೆ ಕಳುಹಿಸಲಾಗಿದೆ. ಅದನ್ನು ಭೋಪಾಲ್‌ನಲ್ಲಿರುವ 'ರಾಷ್ಟ್ರೀಯ ಉನ್ನತ ಪ್ರಾಣಿ ರೋಗಗಳ ಸಂಸ್ಥೆ'ಗೆ ರವಾನಿಸಿ ಪರೀಕ್ಷೆ ನಡೆಸಲಾಗುವುದು. ಸೋಮವಾರದ ವೇಳೆಗೆ ಪರೀಕ್ಷಾ ವರದಿ ಬರಬಹುದು. ಹಕ್ಕಿ ಜ್ವರ ಇರುವುದು ದೃಢಪಟ್ಟರೆ, ಉಳಿದ ಕೋಳಿಗಳನ್ನೂ ವಧೆ ಮಾಡಲಾಗುವುದು ಎಂದು ಇಲಾಖೆಯ ಉಪನಿರ್ದೇಶಕ ಡಾ. ಕಾರಬಾರಿ ಅವರು ಮಾಹಿತಿ ನೀಡಿದ್ದಾರೆ. ‌

'ಜಿಲ್ಲೆಯಲ್ಲಿ ಹಕ್ಕಿ ಜ್ವರ ತಡೆಯಲು ಮತ್ತು ಪರಿಶೀಲಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಪಶು ಸಂಗೋಪನಾ ಇಲಾಖೆಯು 10 ತಂಡಗಳನ್ನು ರಚಿಸಲಾಗಿದೆ. ಈ ತಂಡಗಳು ನಿತ್ಯ ಇಲಾಖೆಗೆ ವರದಿ ನೀಡಲಿವೆ. ಬಳ್ಳಾರಿ ಜಿಲ್ಲೆಯು ಆಂಧ್ರ ಪ್ರದೇಶದೊಂದಿಗೆ ಗಡಿ ಹಂಚಿಕೊಂಡಿದ್ದು, ಚೆಕ್‌ಪೋಸ್ಟ್‌ಗಳಲ್ಲೂ ಪರಿಶೀಲನೆ ನಡೆದಿದೆ. ಬಳ್ಳಾರಿಯಲ್ಲಿ ಒಟ್ಟು 74 ಕೋಳಿ ಫಾರಂಗಳಿವೆ.‌ 14 ಮೊಟ್ಟೆ ಸಂವರ್ಧನಾ ಕೇಂದ್ರಗಳಿವೆ.  ಇವುಗಳ ಮೇಲೂ ನಿಗಾ ವಹಿಸಲಾಗಿದೆ ಎಂದವರು ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article