ಮಂಗಳೂರು : ಅತಿ ದೊಡ್ಡ ಡ್ರಗ್ಸ್ ಬೇಟೆ ಪ್ರಕರಣ ;  ತನಿಖೆಗಿಳಿದ ದೆಹಲಿ ಎನ್ ಸಿಬಿ ಅಧಿಕಾರಿಗಳು, ರಾಜಧಾನಿಯಲ್ಲೇ ಡ್ರಗ್ಸ್ ಫ್ಯಾಕ್ಟರಿ ಶಂಕೆ

ಮಂಗಳೂರು : ಅತಿ ದೊಡ್ಡ ಡ್ರಗ್ಸ್ ಬೇಟೆ ಪ್ರಕರಣ ; ತನಿಖೆಗಿಳಿದ ದೆಹಲಿ ಎನ್ ಸಿಬಿ ಅಧಿಕಾರಿಗಳು, ರಾಜಧಾನಿಯಲ್ಲೇ ಡ್ರಗ್ಸ್ ಫ್ಯಾಕ್ಟರಿ ಶಂಕೆ


ಮಂಗಳೂರು : ಮಂಗಳೂರು ಸಿಸಿಬಿ ಪೊಲೀಸರು ರಾಜ್ಯದಲ್ಲೇ ಅತೀ ದೊಡ್ಡ ಡ್ರಗ್ಸ್ ಬೇಟೆಯಾಡಿರುವ ಪ್ರಕರಣದಲ್ಲಿ ದೆಹಲಿಯ ನಾರ್ಕೋಟಿಕ್ ಕ್ರೈಮ್ ಬ್ಯೂರೋ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಬೆಂಗಳೂರಿನಲ್ಲಿ ಬಂಧನ ಆಗಿರುವುದರಿಂದ ಅಲ್ಲಿಂದಲೇ ತನಿಖೆ ಎತ್ತಿಕೊಂಡಿದ್ದಾರೆ. 

ಈ ನಡುವೆ, ಆರೋಪಿಗಳಾದ ದಕ್ಷಿಣ ಆಫ್ರಿಕಾ ಮೂಲದ ಬಾಂಬಾ ಫಾಂಟಾ ಹಾಗು‌ ಅಜಿಗೈಲ್ ಅಡೋನಿಸ್ ಅವರನ್ನು ಮಂಗಳೂರು ಪೊಲೀಸರು 7 ದಿನಗಳ ಕಾಲ ಕಸ್ಟಡಿ ಪಡೆದಿದ್ದು ತೀವ್ರ ವಿಚಾರಣೆ ನಡೆಸಿದ್ದಾರೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿರುವುದು ಪತ್ತೆಯಾಗಿದ್ದರಿಂದ ರಾಜಧಾನಿ ಆಸುಪಾಸಿನಲ್ಲೇ ದೊಡ್ಡ ಪ್ರಮಾಣದ ಡ್ರಗ್ಸ್ ತಯಾರಿ ಆಗುತ್ತಿರುವ ಅನುಮಾನಗಳಿವೆ. ದೆಹಲಿಯ ಕೈಗಾರಿಕಾ ಏರಿಯಾದಲ್ಲೇ ಡ್ರಗ್ಸ್ ತಯಾರಿ ನಡೆಸುತ್ತಿರುವ ಮಾಹಿತಿಯಿದ್ದು ಮಂಗಳೂರು ಪೊಲೀಸರು ಆ ನಿಟ್ಟಿನಲ್ಲಿ ತನಿಖೆ ನಡೆಸುತ್ತಿದ್ದಾರೆ.  

ದೆಹಲಿ ಕೇಂದ್ರೀಕರಿಸಿ ದೇಶದ ಹಲವಾರು ಭಾಗಗಳಲ್ಲಿ ಡ್ರಗ್ಸ್ ಸಾಮ್ರಾಜ್ಯ ಹರಡಿಕೊಂಡಿದ್ದು ದೇಸೀ ವಿಮಾನದಲ್ಲಿ ಅಧಿಕಾರಿಗಳ ಕಣ್ತಪ್ಪಿಸಿ ಡ್ರಗ್ಸ್ ರವಾನೆ ಆಗುತ್ತಿರುವ ವಿಚಾರ ತನಿಖೆಯಲ್ಲಿ ಬಯಲಾಗಿದ್ದು ಆತಂಕ ಮೂಡಿಸಿದೆ.‌ ಆರೋಪಿಗಳ ಮಾಹಿತಿ ಆಧರಿಸಿ ಮಂಗಳೂರು ಪೊಲೀಸರು ದೆಹಲಿಗೂ ತನಿಖೆ ವಿಸ್ತರಿಸಿದ್ದಾರೆ. ಬಂಧಿತ ಮಹಿಳೆಯರು ಡ್ರಗ್ಸ್ ಕ್ಯಾರಿಯರ್ ಆಗಿ ಕೆಲಸ ಮಾಡುತ್ತಿದ್ದು ಪ್ರಮುಖ ನಗರಗಳಿಗೆ ಖುದ್ದಾಗಿ ತೆರಳಿ ಪೂರೈಕೆ ಮಾಡುತ್ತಿದ್ದರು. 

ಈ ಹಿನ್ನಲೆಯಲ್ಲಿ ಮಂಗಳೂರು ಪೊಲೀಸರು ಬಯಲಿಗೆಳೆದಿರುವ ಡ್ರಗ್ಸ್ ಜಾಲದ NCB ಅಧಿಕಾರಿಗಳು ಮತ್ತಷ್ಟು ಆಳವಾಗಿ ತನಿಖೆ ನಡೆಸಲಿದ್ದು ಎಲ್ಲಿಂದ ಪೂರೈಕೆ ಆಗುತ್ತದೆ ಮತ್ತು ಇದರ ಹಿಂದೆ ಯಾರಿದ್ದಾರೆ ಎನ್ನುವ ವಿಚಾರದ ಬಗ್ಗೆ ತನಿಖೆ ನಡೆಸಲಿದ್ದಾರೆ.

Ads on article

Advertise in articles 1

advertising articles 2

Advertise under the article