ಪಾಟ್ನಾ :ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯ ಶಿರಶ್ಛೇದನ. ದೇಹವನ್ನು ಹೋಳಿಕಾ ದಹನ್ ನಲ್ಲಿ ಸುಟ್ಟ ಹಾಕಿದ ಘಟನೆ
Saturday, March 29, 2025
ಪಾಟ್ನಾ: ಬಿಹಾರದ ಔರಂಗಾಬಾದ್‌ನಲ್ಲಿ ಮಾಟಮಂತ್ರದ ಹೆಸರಿನಲ್ಲಿ ವ್ಯಕ್ತಿಯೊಬ್ಬರ ಶಿರಶ್ಛೇದನ ಮಾಡಿ ದೇಹವನ್ನು ಹೋಳಿಕಾ ದಹನ್‌ನಲ್ಲಿ ಸುಟ್ಟು ಹಾಕಿರುವ ಘಟನೆ ನಡೆದಿದೆ
ಮೃತ ವ್ಯಕ್ತಿಯನ್ನು ಯುಗುಲ್ ಯಾದಲ್(65) ಎಂದು ತಿಳಿದು ಬಂದಿದೆ. ಕೊಲೆ ಆರೋಪಿಗಳಾದ ಮಾಂತ್ರಿಕನ ಸಂಬಂಧಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಆರೋಪಿ ರಾಮಶಿಶ್ ರಿಕ್ಯಾಸನ್ ಎಂಬ ಮಾಂತ್ರಿಕ ಪರಾರಿಯಾಗಿದ್ದಾನೆ.
ಗುಲಾಬ್ ಬಿಘಾ ಗ್ರಾಮದ ನಿವಾಸಿ ಯುಗುಲ್ ಯಾದವ್ ನಾಪತ್ತೆಯಾಗಿದ್ದಾರೆ ಎಂದು ದೂರು ಬಂದಿತ್ತು. ಪ್ರಕರಣ ದಾಖಲಿಸಿಕೊಂಡು ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದರು. ಬಂಗೇರ್ ಗ್ರಾಮದಲ್ಲಿ ಹೋಳಿಕಾ ದಹನ ಬೆಂಕಿಯ ಚಿತಾಭಸ್ಮದಿಂದ ಮಾನವ ಮೂಳೆಗಳು ಪತ್ತೆಯಾಗಿವೆ.
ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದಾಗ ಸುಟ್ಟ ಮಾನವ ಮೂಳೆಗಳು ಮತ್ತು ಯುಗುಲ್ ಅವರ ಚಪ್ಪಲಿಗಳು ಕಂಡುಬಂದಿವೆ. ರಾಮಶಿಶ್ ಮನೆಯಲ್ಲಿ ಇಲ್ಲದಿದ್ದಾಗ ಈ ಕೃತ್ಯ ನಡೆದಿದೆ.