ಮಂಗಳೂರು :ರಾಜ್ಯದ ಅತಿ ದೊಡ್ಡ ಡ್ರಗ್ಸ್ ಜಾಲ ಬೇಟೆ!!! 74 ಕೋಟಿ ರೂ ಮೌಲ್ಯದ ಮಾದಕವಸ್ತು ವಶ!! ವಿದೇಶಿಯರ ಬಂಧನ.
Sunday, March 16, 2025
ಮಂಗಳೂರು: ಇಲ್ಲಿನ ಸಿಸಿಬಿ ಪೊಲೀಸರು ರಾಜ್ಯದ ಇತಿಹಾಸದಲ್ಲಿಯೇ ಅತಿ ದೊಡ್ಡ ಡ್ರಗ್ಸ್ ಬೇಟೆಯಾಡಿದ್ದು, ಬರೋಬ್ಬರಿ 74 ಕೋಟಿ ರೂ. ಮೌಲ್ಯದ ಮಾದಕವಸ್ತು ಜಪ್ತಿ ಮಾಡಿದ್ದಾರೆ.
ಕಳೆದ 5 ತಿಂಗಳಲ್ಲಿ ನಡೆದ ಕಾರ್ಯಾಚಾರಣೆಯಲ್ಲಿ ಭಾರೀ ಪ್ರಮಾಣದ ಮಾದಕವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಡ್ರಗ್ಸ್ ಮಾರುತ್ತಿದ್ದ ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ.
ದೆಹಲಿಯ ಲ್ಯಾಬ್‌ನಲ್ಲಿ ಎಂಡಿಎಂ ತಯಾರಿಸಲಾಗುತ್ತಿತ್ತು. ಅವುಗಳನ್ನು ವಾರಕ್ಕೊಮ್ಮೆ ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ಸಾಗಣೆ ಮಾಡಲಾಗುತ್ತಿತ್ತು.
ದೆಹಲಿ ಏರ್‌ಪೋರ್ಟ್‌ನಲ್ಲಿಯೇ ಡ್ರಗ್ಸ್ ಮಾಫಿಯಾಗೆ ಅಧಿಕಾರಿಗಳೇ ಸಾಥ್ ನೀಡುತ್ತಿದ್ದರು. ದೆಹಲಿ ಫ್ಲೈಟ್ ಮೂಲಕ ಬೆಂಗಳೂರಿಗೆ ಮೂಟೆಗಟ್ಟಲೆ ಎಂಡಿಎಂಎ ಮಾತ್ರೆಗಳು ಬರುತ್ತಿದ್ದುದು ಈ ಕಾರ್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.
ಏರ್‌ಪೋರ್ಟ್ ಮಾಫಿಯಾವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ. ಮಂಗಳೂರು ಕಮಿಷ್ನರ್ ಅನುಪಮ್ ಅಗರ್ವಾಲ್, ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.