ನವದೆಹಲಿ:ಭಾರತೀಯರು ದಿನದಲ್ಲಿ 5 ಗಂಟೆಗಳ ಕಾಲ ಫೋನ್‌ನಲ್ಲಿ ಕಳೆಯುತ್ತಾರೆ!

ನವದೆಹಲಿ:ಭಾರತೀಯರು ದಿನದಲ್ಲಿ 5 ಗಂಟೆಗಳ ಕಾಲ ಫೋನ್‌ನಲ್ಲಿ ಕಳೆಯುತ್ತಾರೆ!

ನವದೆಹಲಿ :ಇತ್ತೀಚಿನ ದಿನಗಳಲ್ಲಿ ಎಲ್ಲಾ ವಯೋಮಾನದವರಲ್ಲೂ ಫೋನ್ ಬಳಕೆ ಮಾಡುತಾರೆ.. ಇದನ್ನು ಬಳಸುತ್ತಾ ಕುಳಿತುಕೊಂಡರೆ ಸಮಯ ಕಳೆಯುವುದೇ ತಿಳಿಯುವುದಿಲ್ಲ. ಈ ಸೆಲ್ ಫೋನ್ಗಳ ಅತಿಯಾದ ಬಳಕೆ ಚಟವಾಗಿದೆ ಅಂದರೆ ಸಹಜ. ಅತೀ ಹೆಚ್ಚಿನ ಜನರು ಮೊಬೈಲ್ ನಲ್ಲಿ ಸಮಯವನ್ನು ಕಳೆಯುತ್ತಾರೆ. ಆದರೆ ಜಾಗತಿಕ ನಿರ್ವಹಣಾ ಸಂಸ್ಥೆ EY ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಭಾರತೀಯರು ಮೊದಲಿಗಿಂತ ಹೆಚ್ಚು ಸಮಯ ತಮ್ಮ ಮೊಬೈಲ್‌ಗಳಲ್ಲಿ ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.

ಐದು ಗಂಟೆಗಳ ಕಾಲ ಭಾರತೀಯ ಬಳಕೆದಾರರು ಸಾಮಾಜಿಕ ಜಾಲತಾಣ, ಗೇಮಿಂಗ್ ಮತ್ತು ವಿಡಿಯೋ ಸ್ಟ್ರೀಮಿಂಗ್‌ಗಾಗಿ ಸಮಯ ಕಳೆಯುತ್ತಾರೆ . ಕೈಗೆಟಕುವ ಇಂಟರ್ನೆಟ್ ಮತ್ತು ಹೆಚ್ಚುತ್ತಿರುವ ಡಿಜಿಟಲ್ ಪ್ರವೇಶದಿಂದಾಗಿ ಮಾಧ್ಯಮ ಬಳಕೆಯು ಹೇಗೆ ಬದಲಾಗುತ್ತಿದೆ ಎಂದು ಈ ಅಧ್ಯಯನಲ್ಲಿ ತಿಳಿಸಲಾಗಿದೆ

EY ವಿಶ್ಲೇಷಣೆಯ ವರದಿಯ ಪ್ರಕಾರ, ಹೆಚ್ಚುತ್ತಿರುವ ಡಿಜಿಟಲ್ ವೇದಿಕೆಗಳು ಭಾರತದ ಮಾಧ್ಯಮ ಮತ್ತು ಮನರಂಜನಾ ವ್ಯವಹಾರದಲ್ಲಿ ಟೆಲಿವಿಷನ್ ಅನ್ನು ಹಿಂದಿಕ್ಕಿ ಮೊದಲ ಸ್ಥಾನದಲ್ಲಿವೆ. 2024 ರಲ್ಲಿ ಇದರ ಮೌಲ್ಯ 2.5 ಟ್ರಿಲಿಯನ್ ರೂಪಾಯಿ ($29.1 ಬಿಲಿಯನ್) ಎಂದು ಅಂದಾಜಿಸಲಾಗಿದೆ.
ಭಾರತೀಯ ಬಳಕೆದಾರರುಪ್ರತಿದಿನ ತಮ್ಮ ಫೋನ್‌ಗಳಲ್ಲಿ ಕಳೆಯುವ ಐದು ಗಂಟೆಗಳಲ್ಲಿ ಸುಮಾರು 70% ಸೋಶಿಯಲ್‌ ಮೀಡಿಯಾ, ಸ್ಟ್ರೀಮಿಂಗ್ ವೀಡಿಯೊಗಳು ಮತ್ತು ಗೇಮಿಂಗ್ ನಲ್ಲಿ ಕಳೆಯುತ್ತಾರೆ.

ಸಂಶೋಧನೆಯ ಪ್ರಕಾರ, ಭಾರತವು ವಿಶ್ವದ ಅತಿದೊಡ್ಡ ಡಿಜಿಟಲ್ ಮಾರುಕಟ್ಟೆಯಾಗಿದೆ. ಬ್ರೆಜಿಲ್ ಮತ್ತು ಇಂಡೋನೇಷ್ಯಾ ನಂತರ ಅತಿ ಹೆಚ್ಚು ಮೊಬೈಲ್ ಬಳಸುವವರಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.

Ads on article

Advertise in articles 1

advertising articles 2

Advertise under the article