ಬೆಂಗಳೂರು :ಮಂಗಳೂರು ಪೊಲೀಸರ ಡ್ರಗ್ಸ್ ಬೇಟೆ ಬೆನ್ನಲ್ಲೇ ಬೆಂಗಳೂರು ಏರ್‌ಪೋರ್ಟ್‌ ಅಲರ್ಟ್ ; ಡಿಆರ್ ಐ ಅಧಿಕಾರಿಗಳ ಬಲೆಗೆ ಬಿದ್ದ ಘಾನಾ ದೇಶದ ಲೇಡಿ, 38 ಕೋಟಿ ಮೌಲ್ಯದ ಕೊಕೇನ್ ಜಪ್ತಿ.!!!!drugs hunting ghana lady arrest

ಬೆಂಗಳೂರು :ಮಂಗಳೂರು ಪೊಲೀಸರ ಡ್ರಗ್ಸ್ ಬೇಟೆ ಬೆನ್ನಲ್ಲೇ ಬೆಂಗಳೂರು ಏರ್‌ಪೋರ್ಟ್‌ ಅಲರ್ಟ್ ; ಡಿಆರ್ ಐ ಅಧಿಕಾರಿಗಳ ಬಲೆಗೆ ಬಿದ್ದ ಘಾನಾ ದೇಶದ ಲೇಡಿ, 38 ಕೋಟಿ ಮೌಲ್ಯದ ಕೊಕೇನ್ ಜಪ್ತಿ.!!!!drugs hunting ghana lady arrest


ಬೆಂಗಳೂರು: ಮಂಗಳೂರು ಪೊಲೀಸರು ವಿಮಾನದಲ್ಲಿ ತರುತ್ತಿದ್ದ ಭಾರೀ ಡ್ರಗ್ಸ್ ದಂಧೆಯನ್ನು ಬಯಲಿಗೆಳೆದ ಬೆನ್ನಲ್ಲೇ ಬೆಂಗಳೂರು ಏರ್ಪೋರ್ಟ್ ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ವಿದೇಶದಿಂದ ಅಕ್ರಮವಾಗಿ ಡ್ರಗ್ಸ್ ತರುತ್ತಿದ್ದ ಮಹಿಳೆಯನ್ನು ಕಂದಾಯ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದು, 38.8 ಕೋಟಿ ಮೌಲ್ಯದ 3 ಕೆ.ಜಿ ಕೊಕೇನ್ ವಶಕ್ಕೆ ಪಡೆದಿದ್ದಾರೆ. 

ಮಾರ್ಚ್​​ 18ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕತಾರ್​​ ದೇಶದಿಂದ ಬಂದಿದ್ದ ಮಹಿಳೆಯನ್ನು ತಪಾಸಣೆ ನಡೆಸಿದಾಗ, ಆಕೆ ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಮಹಿಳೆ ಆಫ್ರಿಕಾದ ಘಾನಾ ದೇಶದ ಪ್ರಜೆಯಾಗಿದ್ದಾಳೆ. 

ಖಚಿತ ಮಾಹಿತಿ ಆಧರಿಸಿ ಮಹಿಳೆಯ ಲಗೇಜ್​ ಪರಿಶೀಲನೆ ನಡೆಸಿದ್ದು 38.8 ಕೋಟಿ ಮೌಲ್ಯದ 3 ಕೆ.ಜಿ ಕೊಕೇನ್ ಪತ್ತೆಯಾಗಿದೆ. ಬಳಿಕ ಆಕೆಯನ್ನು ಬಂಧಿಸಲಾಗಿದೆ ಎಂದು ಡಿಆರ್​ಐ ಮೂಲಗಳು ತಿಳಿಸಿವೆ. ಮಹಿಳೆಗೆ ಕಳ್ಳ ಸಾಗಣಿಕೆದಾರರ ಜೊತೆಗೆ ನಂಟು ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಮಂಗಳೂರು ಪೊಲೀಸರು ಇತ್ತೀಚೆಗೆ ರಾಜ್ಯದಲ್ಲೇ ಅತಿ ದೊಡ್ಡದು ಎನ್ನಲಾದ 75 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ಬೆಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ವಶಪಡಿಸಿದ್ದರು. ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಡ್ರಗ್ಸ್ ತಂದು ಪೂರೈಕೆ ಮಾಡುತ್ತಿದ್ದ ದಕ್ಷಿಣ ಅಫ್ರಿಕಾ ಮೂಲದ ಪ್ರಜೆಗಳಿಬ್ಬರನ್ನು ಬಂಧಿಸಿ, 75 ಕೋಟಿ ಮೊತ್ತದ 37.870 ಕೆಜಿ ಎಡಿಎಂಎ ವಶಪಡಿಸಿಕೊಂಡಿದ್ದರು.

Ads on article

Advertise in articles 1

advertising articles 2

Advertise under the article