ನಾಸಾ :ನಿಗದಿತ ಸಮಯ ಬುಧವಾರ ಬೆಳಗಿನ ಜಾವ 3:27ಕ್ಕೆ ಭೂಮಿಗೆ ಮರಳಿದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ಯಶಸ್ವಿಯಾಗಿ ಭೂಮಿಗೆ ಮರಳಿದ ಗಗನಯಾತ್ರಿಗಳು!!!
ಈ ಮೂಲಕ ಒಂಬತ್ತು ತಿಂಗಳ ಬಾಹ್ಯಾಕಾಶ ಪ್ರಯಾಣವು ಕೊನೆಗೊಂಡಿತು. ಎರಡು ಶಿಪ್, ಹೆಲಿಕಾಪ್ಟರ್, ಆ್ಯಂಬುಲೆನ್ಸ್ ಮೂಲಕ ಅವರನ್ನು ಸಮುದ್ರದಿಂದ ಭೂಮಿಗೆ ಕರೆತರಲಾಯಿತು.
ನಾಸಾ ನೇರ ಪ್ರಸಾರದ ಪ್ರಕಾರ ಮಂಗಳವಾರ ಬೆಳಗ್ಗೆಯಿಂದಲೇ ಸುನಿತಾ ವಿಲಿಯಮ್ಸ್ ಸೇರಿದಂತೆ ನಾಲ್ಕು ಗಗನಯಾತ್ರಿಗಳು ಭೂಮಿಗೆ ಇಳಿಯಲು ಸಜ್ಜಾಗಿದ್ದು, ಬರೋಬ್ಬರಿ 17 ಗಂಟೆ ಪ್ರಯಾಣ ಮಾಡಿ ಭೂಮಿಗೆ ಮರಳಿದ್ದಾರೆ.
ಹೊರಡುವ ಮುನ್ನ ಸುನೀತಾ ಹಾಗೂ ಬುಚ್ ಫೋಟೋಗಳನ್ನು ತೆಗೆದುಕೊಂಡಿದ್ದಾರೆ.
ಸುನಿತಾ ವಿಲಿಯಮ್ಸ್, ವಿಲ್ಮೋರ್ ಮತ್ತು ಇತರ ಇಬ್ಬರು ಕ್ರೂ-9 ಸದಸ್ಯರೊಂದಿಗೆ, ಸ್ಪೇಸ್‌ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಮರಳಿದ್ದಾರೆ.
ಈ ಮಧ್ಯೆ, ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರ ಸುರಕ್ಷಿತ ಮರಳುವಿಕೆಗೆ ಶುಭ ಹಾರೈಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ. ಸುನೀತಾ ವಿಲಿಯಮ್ಸ್ ಅವರನ್ನು ಭೂಮಿಗೆ ಕರೆತರುತ್ತಿರುವ ಕಾರ್ಯಾಚರಣೆ ಸಫಲವಾಗಲಿ ಎಂದು ಹಾರೈಸಿದ್ದರು. ಸುನೀತಾ ವಿಲಿಯಮ್ಸ್ ಸಮಸ್ತ ಭಾರತೀಯರ ಹೃದಯಕ್ಕೆ ಹತ್ತಿರವಾಗಿದ್ದಾರೆ.. ಎಂದು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸುನಿತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಜೂನ್ 5, 2024 ರಂದು ಭೂಮಿಯನ್ನು ಬಿಟ್ಟು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದತ್ತ ಹೆಜ್ಜೆ ಹಾಕಿದ್ದರು.
ಕೆಲವು ಸಮಯದವರೆಗೆ ಅಲ್ಲಿ ಇರಬೇಕಾಗಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಅದು ವಿಳಂಬವಾಯಿತು. ನಾಸಾಗೆ ಅವರನ್ನು ಕರೆತರಲು ಸಾಧ್ಯವಾಗಲಿಲ್ಲ. ಆದರೆ ಸ್ಪೇಕ್ಸ್ ಎಕ್ಸ್ ಈ ಕಾರ್ಯವನ್ನು ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆಯುವ ಗಗನಯಾತ್ರಿಗಳು ತಮ್ಮ ಸ್ನಾಯುಗಳು ಮತ್ತು ಮೂಳೆಗಳನ್ನು ಬಲವಾಗಿಡಲು ಪ್ರತಿದಿನ ವ್ಯಾಯಾಮ ಮಾಡುತ್ತಾರೆ. ಆದರೂ, ಸ್ನಾಯು ಮತ್ತು ಮೂಳೆ ನಷ್ಟ ಸಂಭವಿಸುತ್ತದೆ. ಏಕೆಂದರೆ ದೇಹವು ಬಾಹ್ಯಾಕಾಶದಲ್ಲಿ ನಡೆಯಲು, ನಿಲ್ಲಲು ಅಥವಾ ಗುರುತ್ವಾಕರ್ಷಣೆಯ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ.