ಒಡಿಶಾ: ಆನ್‌ಲೈನ್ ಗೇಮ್ ಚಟ ; ಆಡದಂತೆ ವಿರೋಧಿಸಿದ್ದಕ್ಕೆ ತಂದೆ- ತಾಯಿ, ಸಹೋದರಿಯನ್ನು ಕೊಚ್ಚಿ ಕೊಲೆ ಮಾಡಿದ 21 ವರ್ಷದ ಯುವಕ.

ಒಡಿಶಾ: ಆನ್‌ಲೈನ್ ಗೇಮ್ ಚಟ ; ಆಡದಂತೆ ವಿರೋಧಿಸಿದ್ದಕ್ಕೆ ತಂದೆ- ತಾಯಿ, ಸಹೋದರಿಯನ್ನು ಕೊಚ್ಚಿ ಕೊಲೆ ಮಾಡಿದ 21 ವರ್ಷದ ಯುವಕ.


ಪಾರಾದೀಪ್‌: ಆನ್‌ಲೈನ್ ಗೇಮ್ ಆಡದಂತೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ ಕಾರಣಕ್ಕಾಗಿ, ತಂದೆ, ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿರುವ ಘಟನೆ ಒಡಿಶಾದ ಜಗತ್‌ಸಿಂಗ್‌ಪುರದಲ್ಲಿ ನಡೆದಿದೆ.

ಆರೋಪಿಯನ್ನು ಸೂರ್ಯಕಾಂತ್ ಸೇಥಿ (21), ಕಾಲೇಜು ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

ಆನ್‌ಲೈನ್‌ ಗೇಮ್ ಆಡದಂತೆ ಕುಟುಂಬಸ್ಥರಿಂದ ವಿರೋಧ ವ್ಯಕ್ತವಾಗಿದ್ದು, ಇದರಿಂದ ವಿಪರೀತ ಕೋಪಕೊಂಡ ಸೂರ್ಯಕಾಂತ್, ತಂದೆ-ತಾಯಿ ಮತ್ತು ಸಹೋದರಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ತಲೆಮರೆಸಿಕೊಂಡಿದ್ದ.

ಮೃತರನ್ನು ಪ್ರಶಾಂತ್ ಸೇಥಿ (65), ಅವರ ಪತ್ನಿ ಕನಕಲತಾ (62) ಮತ್ತು ಮಗಳು ರೊಸಾಲಿನ್ (25) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಸ್ಥಳವನ್ನು ಪರಿಶೀಲಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.

Ads on article

Advertise in articles 1

advertising articles 2

Advertise under the article