ಬೆಂಗಳೂರು: ಭಕ್ತರಿಗೆ ಗುಡ್ ನ್ಯೂಸ್..!! ಇನ್ನು ಮುಂದೆ ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದ ಭಕ್ತರ ಮನೆ ಬಾಗಿಲಿಗೆ ತಲುಪಲಿದೆ!!! ಇ -ಪ್ರಸಾದ ಸೇವೆಗೆ ಚಾಲನೆ ನೀಡಿದ ಧಾರ್ಮಿಕ ದತ್ತಿ ಇಲಾಖೆ.

ಬೆಂಗಳೂರು: ಭಕ್ತರಿಗೆ ಗುಡ್ ನ್ಯೂಸ್..!! ಇನ್ನು ಮುಂದೆ ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದ ಭಕ್ತರ ಮನೆ ಬಾಗಿಲಿಗೆ ತಲುಪಲಿದೆ!!! ಇ -ಪ್ರಸಾದ ಸೇವೆಗೆ ಚಾಲನೆ ನೀಡಿದ ಧಾರ್ಮಿಕ ದತ್ತಿ ಇಲಾಖೆ.

ಬೆಂಗಳೂರು: ರಾಜ್ಯದ ಪ್ರಮುಖ 14 ದೇವಾಲಯಗಳ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ಇ- ಪ್ರಸಾದ ಸೇವೆಗೆ ಧಾರ್ಮಿಕ ದತ್ತಿ ಇಲಾಖೆ ಗುರುವಾರದಿಂದ ಚಾಲನೆ ನೀಡಿದೆ.

ಶಾಂತಿನಗರ ಸಾರಿಗೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸೇವೆಗೆ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದ್ದಾರೆ.
ದೇವಾಲಯಗಳ ಕಲ್ಲು ಸಕ್ಕರೆ, ಬಾದಾಮಿ, ಗೋಡಂಬಿ, ದ್ರಾಕ್ಷಿ, ಭಂಡಾರ, ಕುಂಕುಮ, ಭಸ್ಮ, ಬಿಲ್ವಪತ್ರೆ, ತುಳಸಿ, ದೇವರ ಚಿತ್ರವಿರುವ ಪ್ಯಾಕೆಟ್ ಅಳತೆಯ ಲ್ಯಾಮಿನೇಟೆಡ್ ಭಾವಚಿತ್ರ, ದೇವರ ಸ್ಥಳ ಮಹಿಮೆ ಸ್ತೋತ್ರ ಮುದ್ರಣಗಳನ್ನು ಭಕ್ತರು ಈ ಪ್ರಸಾದ ಸೇವೆಯಿಂದ ತರಿಸಿಕೊಳ್ಳಬಹುದು. csc.devalayas.com ಆನ್ ಲೈನ್ ಮೂಲಕ ಪ್ರಸಾದ ತರಿಸಿ ಕೊಳ್ಳಬಹುದಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article