ಉತ್ತರ ಪ್ರದೇಶ :ಜೈಲಿನ 13 ಕೈದಿಗಳಿಗೆ ಹೆಚ್‌ಐವಿ ಸೋಂಕು: ಕಾರಣ ಬಹಿರಂಗ! ಉತ್ತರ ಪ್ರದೇಶದ ಮೌ ಎಂಬ ಜಿಲ್ಲಾ ಜೈಲಿನಲ್ಲಿ ನಡೆಸಿದ ಆರೋಗ್ಯ ತಪಾಸಣೆಯ ವೇಳೆ ಕೆಲವು ಕೈದಿಗಳಿಗೆ ಹೆಚ್‌ಐವಿ ತಗುಲಿರುವುದು ದೃಢ!!.

ಉತ್ತರ ಪ್ರದೇಶ :ಜೈಲಿನ 13 ಕೈದಿಗಳಿಗೆ ಹೆಚ್‌ಐವಿ ಸೋಂಕು: ಕಾರಣ ಬಹಿರಂಗ! ಉತ್ತರ ಪ್ರದೇಶದ ಮೌ ಎಂಬ ಜಿಲ್ಲಾ ಜೈಲಿನಲ್ಲಿ ನಡೆಸಿದ ಆರೋಗ್ಯ ತಪಾಸಣೆಯ ವೇಳೆ ಕೆಲವು ಕೈದಿಗಳಿಗೆ ಹೆಚ್‌ಐವಿ ತಗುಲಿರುವುದು ದೃಢ!!.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೌ ಎಂಬ ಜೈಲಿನ ಕೈದಿಗಳಲ್ಲಿ ಹೆಚ್​ಐವಿ ಪಾಸಿಟಿವ್ ಕಂಡುಬಂದಿದೆ. ಜೈಲಿನಲ್ಲಿ ನಿಯಮಿತ ಆರೋಗ್ಯ ತಪಾಸಣೆ ನಡೆಸಲಾಗಿದ್ದು, ಬಳಿಕ ಬಂದ ವರದಿಯಲ್ಲಿ 13 ಕೈದಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಪೈಕಿ ಬಲ್ಲಿಯಾದ 10 ಮತ್ತು ಮೌ ಎಂಬಲ್ಲಿಂದ 3 ಕೈದಿಗಳು ಸೇರಿದ್ದಾರೆ. ಇವರಲ್ಲಿ ಒಬ್ಬ ಮಹಿಳಾ ಕೈದಿಯೂ ಇದ್ದಾರೆ. ಪ್ರಸ್ತುತ ಮೌ ಜೈಲಿನಲ್ಲಿ 1,086 ಕೈದಿಗಳಿದ್ದು, 650 ಕೈದಿಗಳು ಬಲ್ಲಿಯಾ ಜಿಲ್ಲಾ ಜೈಲಿನಿಂದ ಬಂದವರಾಗಿದ್ದಾರೆ. ಜುಲೈ 2024ರಿಂದ ಬಲ್ಲಿಯಾ ಜಿಲ್ಲಾ ಜೈಲು ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ, ಇಲ್ಲಿನ ಕೈದಿಗಳನ್ನು ಮೌ ಜೈಲಿಗೆ ಸ್ಥಳಾಂತರಿಸಲಾಗಿದೆ.

HIVಗೆ ಕಾರಣ ಹಚ್ಚೇನಾ?: ಜೈಲು ಕೈಪಿಡಿ ಪ್ರಕಾರ ಪ್ರತಿಯೊಬ್ಬ ಕೈದಿಯನ್ನೂ ಜೈಲಿನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತದೆ. ಈ ತಪಾಸಣೆಯ ಸಮಯದಲ್ಲಿ, 13 ಕೈದಿಗಳಲ್ಲಿ ಹೆಚ್‌ಐವಿ ಪತ್ತೆಯಾಗಿದೆ. ಈ ವಿಚಾರವನ್ನು ಜೈಲು ಸೂಪರಿಂಟೆಂಡೆಂಟ್ ಆನಂದ್ ಶುಕ್ಲಾ ಖಚಿತಪಡಿಸಿದ್ದಾರೆ.


ದಾದ್ರಿ ಮೇಳದಲ್ಲಿ ಅಸುರಕ್ಷಿತ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಕೈದಿಗಳು ಹೆಚ್​ಐವಿ ಸೋಂಕಿಗೆ ಒಳಗಾಗಿದ್ದಾರೆ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸೋಂಕಿತ ರೋಗಿಗಳಿಗೆ ಗೌಪ್ಯ ರೀತಿಯಲ್ಲಿ ಎಆರ್‌ಟಿ ಕೇಂದ್ರದಿಂದ ಕಾರ್ಡ್ ತಯಾರಿಸಲಾಗುತ್ತದೆ ಮತ್ತು ಔಷಧಿ ಪ್ರಾರಂಭಿಸಲಾಗುತ್ತದೆ. ಜೈಲಿನಲ್ಲಿ ಯಾವುದೇ ಭಯವಿಲ್ಲ ಎಂದು ಶುಕ್ಲಾ ಹೇಳಿದರು.


Ads on article

Advertise in articles 1

advertising articles 2

Advertise under the article