ಮಯನ್ಮಾರ್: ಭೂಕಂಪಕ್ಕೆ ತತ್ತರಿಸಿದ ಮಯನ್ಮಾರ್-ಥೈಲ್ಯಾಂಡ್: 1000ಕ್ಕೂ ಅಧಿಕ ಸಾವು..!!!

ಮಯನ್ಮಾರ್: ಭೂಕಂಪಕ್ಕೆ ತತ್ತರಿಸಿದ ಮಯನ್ಮಾರ್-ಥೈಲ್ಯಾಂಡ್: 1000ಕ್ಕೂ ಅಧಿಕ ಸಾವು..!!!

ಮಯನ್ಮಾರ್ ಹಾಗೂ ಥೈಲ್ಯಾಂಡ್‌: ಪ್ರಬಲ ಭೂಕಂಪಕ್ಕೆ ತತ್ತರಿಸಿ ಹೋಗಿವೆ. ಈ ಎರಡು ದೇಶಗಳ ಮಧ್ಯೆ 735 ಮೈಲಿಯಷ್ಟು ಅಂತರವಿದೆ. ಈ ದೇಶದಲ್ಲಿ ಈಗ ಗಂಟೆಗಳು ಉರುಳಿದಂತೆ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಅವಶೇಷಗಳಡಿ ಸಿಲುಕಿದ್ದ ಅನೇಕರು ಪ್ರಾಣ ಬಿಟ್ಟಿದ್ದು, ಸದ್ಯದ ಮಾಹಿತಿ ಪ್ರಕಾರ ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,000ಕ್ಕೂ ಹೆಚ್ಚಾಗಿದೆ.

ಮಯನ್ಮಾರ್‌ಗಿಂತಲೂ ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪಕ್ಕೆ ಅಧಿಕ ಅನಾಹುತ ನಡೆದಿದೆ. ಇಲ್ಲಿ ಅವಶೇಷಗಳಡಿ ಸಿಲುಕಿದ್ದವರ ಶವಗಳು ಸಿಕ್ಕಿದ್ದರಿಂದ ಸಾವು- ನೋವಿನ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ಗಾಯಾಳುಗಳಿಗೆ ರಕ್ತದಾನ ಮಾಡುವಂತೆ ಸೇನೆ ಮನವಿ ಮಾಡಿಕೊಂಡಿದೆ. ಬದುಕುಳಿದವರ ಚಿಕಿತ್ಸೆಗೆ ಭಾರತ 15 ಟನ್ ರಕ್ಷಣಾ ಸಾಮಗ್ರಿಯನ್ನು ಈಗಾಗಲೇ ಕಳುಹಿಸಿದೆ.

ಪ್ರಬಲ ಭೂಕಂಪದ ಮಧ್ಯೆ ಬ್ಯಾಂಕಾಂಕ್‌ಗೆ ತೆರಳಿದ್ದ ಕನ್ನಡಿಗರು ಸುರಕ್ಷಿತರಾಗಿದ್ದಾರೆ ಎನ್ನಲಾಗಿದೆ. ಎಂಎಲ್‌ಸಿ ಮರಿತಿಬ್ಬೆಗೌಡ ಮಗಳು, ಅಳಿಯ ಮತ್ತು ಮೊಮ್ಮಗ ಕಳೆದ ಮೂರು ದಿನಗಳ ಹಿಂದೆ ಪ್ರವಾಸಕ್ಕೆಂದು ಬ್ಯಾಂಕಾಂಕ್‌ಗೆ ಈ ಕುಟುಂಬ ತೆರಳಿತ್ತು. ಇವರು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಆಗಿದ್ದಾರೆ.
ಮಯನ್ಮಾರ್, ಥೈಲ್ಯಾಂಡ್‌ ಭೂಕಂಪದ ಬಗ್ಗೆ ಮಾತನಾಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್ ಕೆಲವು ಕನ್ನಡಿಗರು ಸೇಫ್ ಆಗಿದ್ದಾರೆ ಎನ್ನುವ ಮಾಹಿತಿ ರಾಜ್ಯ ಸರ್ಕಾರಕ್ಕಿದೆ. ಯಾರಿಗೂ ತೊಂದರೆ ಆಗಿರುವ ಮಾಹಿತಿ ಬಂದಿಲ್ಲ ಎಂದಿದ್ದಾರೆ.

Ads on article

Advertise in articles 1

advertising articles 2

Advertise under the article