ಅಂತಾರಾಷ್ಟ್ರೀಯ ಸುದ್ದಿ :ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಮುಕೇಶ್ ಅಂಬಾನಿ ಔಟ್!

ಅಂತಾರಾಷ್ಟ್ರೀಯ ಸುದ್ದಿ :ವಿಶ್ವದ ಟಾಪ್-10 ಶ್ರೀಮಂತರ ಪಟ್ಟಿಯಿಂದ ಮುಕೇಶ್ ಅಂಬಾನಿ ಔಟ್!

ಅಂತಾರಾಷ್ಟ್ರೀಯ ಸುದ್ದಿ :ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಭಾರತದ ಪ್ರಮುಖ ಉದ್ಯಮಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಟಾಪ್-10 ಸ್ಥಾನದಿಂದ ಹೊರಗುಳಿದಿದ್ದಾರೆ

ಇತ್ತೀಚಿನ ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2025ರ ಪ್ರಕಾರ ಅಂಬಾನಿ ಅವರು ಈ ವರ್ಷ 11ನೇ ಸ್ಥಾನಕ್ಕೆ ತಲುಪಿದ್ದಾರೆ.ಈ ಮೂಲ ವಿಶ್ವದ ಟಾಪ್ 10 ಪಟ್ಟಿಯಿಂದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಹೊರಬಿದ್ದಿದ್ದಾರೆ. ವಿಶೇಷ ಅಂದರೆ ಗೌತಮ್ ಅದಾನಿ ಹಾಗೂ ಹೆಚ್‌ಸಿಎಲ್‌ನ ರೋಶ್ನಿ ನಾಡರ್ ದಾಖಲೆಯ ಆದಾಯ ಗಳಿಕೆ ಮೂಲಕ ಮೈಲಿಗಲ್ಲು ನಿರ್ಮಿಸಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದ್ರೆ ಮುಕೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಈ ಬಾರಿ ಸ್ವಲ್ಪ ಕಡಿಮೆಯಾಗಿದೆ. ಆದರೂ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ತಮ್ಮ ಪ್ರಾಬಲ್ಯ ಕಾಯ್ದುಕೊಂಡಿದ್ದಾರೆ.

ಈ ವರ್ಷದ ಹುರುನ್ ಗ್ಲೋಬಲ್ ರಿಚ್ ಲಿಸ್ಟ್‌ನಲ್ಲಿ ಅಮೆರಿಕ ಮತ್ತು ಚೀನಾದ ಉದ್ಯಮಿಗಳು ಟಾಪ್-10 ಸ್ಥಾನಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲಾನ್ ಮಸ್ಕ್ (ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಮುಖ್ಯಸ್ಥ), ಜೆಫ್ ಬೆಜೋಸ್ (ಅಮೆಜಾನ್ ಸಂಸ್ಥಾಪಕ), ಮತ್ತು ಮಾರ್ಕ್ ಝುಕರ್‌ಬರ್ಗ್ (ಮೆಟಾ ಸಿಇಒ) ಅವರಂತ ದಿಗ್ಗಜರು ಮೊದಲ ಕೆಲವು ಸ್ಥಾನಗಳನ್ನು ಅಲಂಕರಿಸಿದ್ದಾರೆ.

ಮುಕೇಶ್ ಅಂಬಾನಿ ಟಾಪ್ 10 ರಿಂದ ಹೊರಗುಳಿದರೂ, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಅವರು ಉನ್ನತ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ವಿಶ್ವದ 5ನೇ ಶ್ರೀಮಂತ ಮಹಿಳೆ ರೋಶ್ನಿ ನಾಡರ್
ಹೆಚ್‌ಸಿಎಲ್ ಕಂಪನಿಯ ಶಿವ್ ನಾಡರ್ ಕುಟುಂಬ ಈ ಬಾರಿ ಶ್ರೀಮಂತರ ಪಟ್ಟಿಯಲ್ಲಿ ಹೊಸ ದಾಖಲೆ ಬರೆದಿದೆ. ಶಿವ ನಾಡರ್ ಇತ್ತೀಚೆಗೆ ಹೆಚ್‌ಸಿಎಲ್ ಕಂಪನಿ ಶೇಕಡಾ 47 ರಷ್ಟು ಪಾಲನ್ನು ಪುತ್ರಿ ರೋಶ್ನಿ ನಾಡರ್‌ಗೆ ವರ್ಗಾಯಿಸಿದ್ದರು. ಇದರ ಪರಿಣಾಮ ರೋಶ್ನಿ ನಾಡರ್ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಅಂದರೆ ರೋಶ್ನಿ ನಾಡರ್ ವಿಶ್ವದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದ್ದಾರೆ.

ಭಾರತದ ಶ್ರೀಮಂತರು
ಮುಕೇಶ್ ಅಂಬಾನಿ: 8.6 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ಗೌತಮ್ ಅದಾನಿ : 8.4 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ರೋಶ್ನಿ ನಾಡರ್:3.5 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ದಿಲೀಪ್ ಸಾಂಘ್ವಿ: 2.5 ಲಕ್ಷ ಕೋಟಿ ರೂಪಾಯಿ(ಸಂಪತ್ತು)
ಅಜೀಮ್ ಪ್ರೇಮ್‌ಜಿ:2.2 ಲಕ್ಷ ಕೋಟಿ ರೂಪಾಯಿ (ಸಂಪತ್ತು)


Ads on article

Advertise in articles 1

advertising articles 2

Advertise under the article