ನ್ಯಾಷನಲ್:ಎಟಿಎಂ ಬಳಕೆದಾರರಿಗೆ ಶಾಕ್‌: ಮೇ 1ರಿಂದ ಹಣ ವಿತ್‌ಡ್ರಾಗೆ ನ್ಯೂ ರೂಲ್ಸ್..!!

ನ್ಯಾಷನಲ್:ಎಟಿಎಂ ಬಳಕೆದಾರರಿಗೆ ಶಾಕ್‌: ಮೇ 1ರಿಂದ ಹಣ ವಿತ್‌ಡ್ರಾಗೆ ನ್ಯೂ ರೂಲ್ಸ್..!!

ನ್ಯಾಷನಲ್ :ಎ ಟಿ ಯಂ ಇಂಟರ್‌ಚೇಂಜ್ ಶುಲ್ಕವನ್ನು ಆರ್‌ಬಿಐ ಹೆಚ್ಚಿಸಿದ್ದು, ಮೇ 1ರಿಂದ ದೇಶದ ಎಲ್ಲ ಎಟಿಎಂಗಳಲ್ಲಿ ಹಣ ವಿತ್‌ಡ್ರಾ ದುಬಾರಿಯಾಗಲಿದೆ. ಇನ್ನು ಹಣಕಾಸಿನ ವಹಿವಾಟುಗಳಿಗಾಗಿ ಎಟಿಎಂಗಳನ್ನು ಅವಲಂಬಿಸಿರುವ ಗ್ರಾಹಕರು ತಮ್ಮ ಉಚಿತ ವಹಿವಾಟು ಮಿತಿಯನ್ನು ಮೀರಿದಾಗ ಹೆಚ್ಚುವರಿ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ.

ಎಟಿಎಂ ಸೇವೆಗಳನ್ನು ಒದಗಿಸಲು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕವೇ ಎಟಿಎಂ ಇಂಟರ್‌ಚೇಂಜ್ ಶುಲ್ಕ. ಇದು ಸಾಮಾನ್ಯವಾಗಿ ಪ್ರತಿ ವಹಿವಾಟಿಗೆ ನಿಗದಿತ ಮೊತ್ತವಾಗಿದ್ದು, ಇದನ್ನು ಸಾಮಾನ್ಯವಾಗಿ ಗ್ರಾಹಕರಿಗೆ ಅವರ ಬ್ಯಾಂಕಿಂಗ್ ವೆಚ್ಚದ ಭಾಗವಾಗಿ ವರ್ಗಾಯಿಸಲಾಗುತ್ತದೆ.

ಈಗ ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳು ತಮ್ಮ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿವೆ ಎಂದು ವೈಟ್-ಲೇಬಲ್ ಎಟಿಎಂ ಆಪರೇಟರ್‌ಗಳ ವಿನಂತಿಗಳನ್ನು ಅನುಸರಿಸಿ, ಆರ್‌ಬಿಐ ಈ ಶುಲ್ಕಗಳನ್ನು ಪರಿಷ್ಕರಿಸಲು ನಿರ್ಧರಿಸಿದೆ.

ಮೇ 1ರಿಂದ ಎಟಿಎಂ ವಿತ್‌ಡ್ರಾ ದುಬಾರಿಯಾಗಲಿದ್ದು, ಆರ್‌ಬಿಐ ಶುಲ್ಕ ಹೆಚ್ಚಳಕ್ಕೆ ಅನುಮೋದನೆಯೂ ನೀಡಿದೆ
ಈ ಶುಲ್ಕ ಹೆಚ್ಚಳವು ದೇಶದಾದ್ಯಂತ ಅನ್ವಯವಾಗಲಿದ್ದು, ವಿಶೇಷವಾಗಿ ಸಣ್ಣ ಬ್ಯಾಂಕ್‌ಗಳ ಗ್ರಾಹಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಬ್ಯಾಂಕುಗಳು ಎಟಿಎಂ ಮತ್ತು ಸಂಬಂಧಿತ ಸೇವೆಗಳಿಗಾಗಿ ದೊಡ್ಡ ಹಣಕಾಸು ಸಂಸ್ಥೆಗಳನ್ನು ಅವಲಂಬಿಸಿವೆ. ಇದರಿಂದಾಗಿ ಅವು ಹೆಚ್ಚುತ್ತಿರುವ ವೆಚ್ಚಗಳಿಗೆ ಹೆಚ್ಚು ಗುರಿಯಾಗಲಿವೆ. ಹಾಗಾಗಿ ಮೇ 1ರಿಂದ ಗ್ರಾಹಕರು ತಮ್ಮ ಉಚಿತ ಮಿತಿಯನ್ನು ಮೀರಿದ ಪ್ರತಿ ಹಣಕಾಸು ವಹಿವಾಟಿಗೆ ಹೆಚ್ಚುವರಿಯಾಗಿ 2 ರೂಪಾಯಿ ಪಾವತಿಸಬೇಕು
ಬ್ಯಾಲೆನ್ಸ್ ಪರಿಶೀಲನೆಯಂತಹ ಹಣಕಾಸುಯೇತರ ವಹಿವಾಟುಗಳಿಗೆ ಶುಲ್ಕವು 1 ರೂಪಾಯಿ ಹೆಚ್ಚಾಗಲಿದೆ.

Ads on article

Advertise in articles 1

advertising articles 2

Advertise under the article