ವಿಜಯಪುರ:ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಕನಸು ನನಸು ಮಾಡಿದ ಮಾಲೀಕ. ಕಾರ್ಮಿಕರನ್ನು ತನ್ನ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋದ ಹೃದಯವಂತ!vijayapur kooli worker flight tour

ವಿಜಯಪುರ:ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕರ ಕನಸು ನನಸು ಮಾಡಿದ ಮಾಲೀಕ. ಕಾರ್ಮಿಕರನ್ನು ತನ್ನ ಸ್ವಂತ ಖರ್ಚಿನಲ್ಲಿ ವಿಮಾನದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋದ ಹೃದಯವಂತ!vijayapur kooli worker flight tour

ಅರೇ ಕೂಲಿ ಕೆಲಸ ಮಾಡೋರು ವಿಮಾನದಲ್ಲಿ ಹೋದ್ರಾ ಅಂತ ನಿಮಗೆ ಶಾಕ್ ಆಗ್ಬಹುದು. ಆದ್ರೆ, ಇವರ ಕನಸಿಗೆ ರೆಕ್ಕೆ ಕೊಟ್ಟಿದ್ದು ಬೇರಾರು ಅಲ್ಲ. ಇವರು ಕೆಲಸ ಮಾಡ್ತಿದ್ದ ತೋಟದ ಮಾಲೀಕ. ಒಂದರ್ಥದಲ್ಲಿ ಇವರ ಪಾಲಿನ ಹೃದಯವಂತ ಅಂತಾನೇ ಹೇಳಬಹುದು. ಈ ಮಹಿಳೆಯರು ಕೂಲಿ ಕೆಲಸ ಮಾಡ್ತಿದ್ದ ತೋಟದ ಮಾಲೀಕನೇ ಇವರನ್ನೆಲ್ಲ ವಿಮಾನ ಹತ್ತಿಸಿ ಗೋವಾಗೆ ಕರ್ಕೊಂಡು ಹೋಗಿದ್ರು. ಇವರ ಕಂಡ ಕನಸಿಗೆ ಊರುಗೋಲಾಗಿ ನಿಂತು ಇವರ ಖುಷಿಗೆ ಕಾರಣರಾಗಿದ್ರು.

ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯ ರೈತ ವಿಶ್ವನಾಥರವರೇ ಮಹಿಳೆಯರ ಕನಸನ್ನ ನನಸು ಮಾಡಿದ್ದಾರೆ. ತಮ್ಮ ತೋಟದಲ್ಲಿ ಕೆಲಸ ಮಾಡ್ತಿದ್ದ 10 ಜನ ಮಹಿಳೆಯರಿಗೆ ವಿಮಾನಯಾನದ ಭಾಗ್ಯ ಕಲ್ಪಿಸಿದ್ದಾರೆ. ಇವತ್ತಿನ ಕಾಲದಲ್ಲಿ ಬೇರೆಯವರಿಗಾಗಿ ಒಂದು ರೂಪಾಯಿ ಕೊಡೋದಕ್ಕೂ ಜನ ಹಿಂದು ಮುಂದು ನೋಡ್ತಾರೆ. ಇನ್ನೂ ಕೆಲಸ ಮಾಡೋರ ಅಂದ್ರೆ ಕಾಲ ಕಸದಂತೆ ಕಾಣೋ ಧನಿಕರ ಮಧ್ಯೆ ವಿಶ್ವನಾಥ್ ತುಂಬಾನೇ ಡಿಫರೆಂಟ್​ ಕೆಲಸ ಮಾಡಿದ್ದಾರೆ. ನಿತ್ಯದ ಕೂಲಿಗಾಗಿ ತೋಟಕ್ಕೆ ಬರೋ ಮಹಿಳೆಯರಿಗಾಗಿ ಲಕ್ಷ ಲಕ್ಷ ಖರ್ಚು ಮಾಡಿದ್ದಾರೆ. ಕೇವಲ ವಿಮಾನ ಹತ್ತಿಸೋದು ಮಾತ್ರವಲ್ಲ ಗೋವಾದಲ್ಲಿ ಕೂಡ ಪ್ರತಿಯೊಂದ ಖರ್ಚನ್ನು ವಿಶ್ವನಾಥ್​ ನೋಡ್ಕೊಂಡಿದ್ದಾರೆ.

ಒಂದರ್ಥದಲ್ಲಿ ಈ ಮಹಿಳೆಯರ ಪಾಲಿಗೆ ಹೃದಯವಂತನೇ ಆಗಿರೋ ವಿಶ್ವನಾಥ್​ ಕಂಡ ಕನಸನ್ನ ನನಸು ಮಾಡಿದ್ದಾರೆ. ಈ ವಿಷ್ಯವೇ ನಿಮಗೆ ಅಚ್ಚರಿ ಅನಿಸ್ತಿದೆ. ಆದ್ರೆ ಇದಕ್ಕಿಂತ ಇಂಟರ್​ಸ್ಟಿಂಗ್​ ವಿಚಾರ ಏನಂದ್ರೆ ಕೂಲಿ ಕಾರ್ಮಿಕರ ಕನಸಿಗೆ ಬೆನ್ನೆಲುಬಾಗಿ ನಿಂತ ವಿಶ್ವನಾಥ ಹಿನ್ನೆಲೆ. ಇದಷ್ಟೆ ಅಲ್ಲ ವಿಶ್ವನಾಥ್​ಗೆ ಮಹಿಳೆಯರ ಕನಸನ್ನ ನನಸು ಮಾಡೋದಕ್ಕೆ ಪ್ರೇರೇಪಿಸಿದ್ದೇನು? ಈ ನಿಸ್ವಾರ್ಥ ಕೆಲಸ ಹಿಂದೆ ಇರೋ ಕಾರಣವೇನು? ಎಲ್ಲದಕ್ಕಿಂತ ಹೆಚ್ಚಾಗಿ ರೈತನಾಗಿರುವ ಈ ವಿಶ್ವನಾಥ ಯಾರು? ಏನಾಗಿದ್ರು? ಅನ್ನೋದು ಕೂಡ ತುಂಬಾನೇ ಕೂತುಹಲಕಾರಿ ವಿಚಾರವೇ.

ವಿಶ್ವನಾಥ ಕೂಲಿ ಕಾರ್ಮಿಕ ಮಹಿಳೆಯರ ಆಸೆ ಈಡೇರಿಸಿದ್ದರ ಹಿಂದೆ ಒಂದು ರೋಚಕ ಕಹಾನಿಯೇ ಇದೆ. ಅಷ್ಟಕ್ಕೂ ಆ ಶ್ರಮಜೀವಿಗಳನ್ನೆಲ್ಲಾ ವಿಶ್ವನಾಥ್​ ಗೋವಾಗೆ ಕರ್ಕೊಂಡು ಹೋಗ್ಬೇಕು ಅಂತಾ ಅನಿಸಿದ್ದು ಯಾಕೆ? 10 ಜನರನ್ನ ವಿಮಾನದಲ್ಲಿ ಕೂರಿಸಿ ಗೋವಾದಲ್ಲಿ ಸುತ್ತಿಸೋದಕ್ಕೆ ಖರ್ಚಾಗಿದ್ದೆಷ್ಟು? ಇಂತಾದೊಂದು ಹೃದಯ ಶ್ರೀಮಂತಿಕೆಯ ಹಿಂದಿನ ಕಾರಣ ಕೇಳಿದ್ರೆ ಶಾಕ್​ ಆಗ್ತೀರಾ.

ಸಾಮಾನ್ಯವಾಗಿ ಚಿಕ್ಕವರಿಂದ ಹಿಡಿದು ದೊಡ್ಡವರಾದ್ರೂ ಮನೆ ಮೇಲೆ ಒಂದು ವಿಮಾನ ಹಾರಿದ್ರೆ ಸಾಕು ನಾವು ಎಲ್ಲಿದ್ರೂ ಓಡಿ ಬಂದು ಆಕಾಶದಲ್ಲಿ ಹಾರೋ ವಿಮಾನ ಕಂಡು ಖುಷಿ ಪಡ್ತಿದ್ವಿ. ನೀಲಿ ಆಕಾಶದಲ್ಲಿ ಹಾರೋ ವಿಮಾನ ನೋಡೋದೆ ಒಂದು ತರಹದ ಸಂಭ್ರಮ ಸಂತಸ ತರ್ತಿತ್ತು. ಈಗ ವಿಜಯನಗರದ ಈ ಮಹಿಳೆಯರು ಕೂಡ ತೋಟದ ಮೇಲೆ ಹಾರ್ತಿದ್ದ ವಿಮಾನವನ್ನು ಕಂಡು ನಾವು ಒಂದು ಸಾರಿ ಪ್ಲೈಟ್​ ಹತ್ತಬೇಕು ಅನ್ನೋ ಕನಸು ಕಂಡಿದ್ರು. ಪ್ರತಿ ದಿನ ಆಗಸದಲ್ಲಿ ಹಾರಿ ಬರ್ತಿದ್ದ ವಿಮಾನ ಕಂಡು ಖುಷಿ ಪಡ್ತಿದ್ರು. ವಿಮಾನದ ಶಬ್ಧ ಕೇಳಿದ್ರೂ ಸಾಕು ಕೆಲಸ ಬಿಟ್ಟು, ಬಿಟ್ಟ ಕಣ್ಣು ಬಿಟ್ಟಂತೆ ನೋಡ್ತಾ ನಿಲ್ತಿದ್ರು. ಇದನ್ನ ತೋಟದ ಮಾಲೀಕ ವಿಶ್ವನಾಥ್​ ಕೂಡ ಗಮನಸಿದ್ರು. ಆಗ್ಲೇ ನೋಡಿ ವಿಶ್ವನಾಥ್​​​ಗೆ ಕೂಲಿ ಕೆಲಸ ಮಾಡೋ ಮಹಿಳೆಯಗರಿಗೆ ಪ್ಲೈಟ್​ ಹತ್ತಿಸೋ ಪ್ಲಾನ್​ ಬಂದಿದ್ದು.

ಇವತ್ತಿನ ಕಾಲದಲ್ಲಿ ಕೂಲಿ ಕೆಲಸಕ್ಕೆ ಜನಾನೇ ಸಿಗ್ತಿಲ್ಲ. ಹೀಗಿರುವಾಗ ವಿಶ್ವನಾಥ್​ ತೋಟಕ್ಕೆ ಈ 10 ಜನ ಮಹಿಳೆಯರು ನಿತ್ಯ ಕೆಲಸಕ್ಕೆ ಬರ್ತಿದ್ರು. ಹೀಗಾಗಿ ತಮ್ಮಲ್ಲಿ ಕೆಲಸ ಮಾಡೋ ಮಹಿಳೆಯರಿಗೆ ಜೀವನದಲ್ಲಿ ಮರೆಯಲಾಗದ ಉಡುಗೊರೆ ಕೊಡ್ಬೇಕು ಅಂತ ತೀರ್ಮಾನಿಸದ್ದ ವಿಶ್ವನಾಥ್​ ವಿಮಾನ ಹತ್ತಿಸಿ ಗೋವಾಗೆ ಕರ್ಕೊಂಡು ಹೋಗೋದಕ್ಕೆ ರೆಡಿಯಾಗಿದ್ರು. ಬಳಿಕ ಇದಾದ ಮೇಲೆ ತಮ್ಮ ಜಮೀನಿನಲ್ಲಿ ಕೆಲಸಕ್ಕೆ ಬರುತ್ತಿದ್ದ 10 ಮಹಿಳಾ ಕಾರ್ಮಿಕರಿಗೆ ಹಾಗೂ ತಮ್ಮನ್ನು ಸೇರಿದಂತೆ 11 ಜನರಿಗೆ ವಿಮಾನದಲ್ಲಿ ಗೋವಾಗೆ ಹೋಗಲು ಟಿಕೆಟ್ ಬುಕಿಂಗ್ ಮಾಡಿದ್ದಾರೆ. ನಂತರ, ಎಲ್ಲ ಕಾರ್ಮಿಕರನ್ನು ತನ್ನೊಂದಿಗೆ ಹತ್ತಿರ ವಿಮಾನ ನಿಲ್ದಾಣವಾದ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಗೋವಾಗೆ ಕರ್ಕೊಂಡು ಹೋಗಿ, ಬೀಚ್​ನಲ್ಲಿ ಸುತ್ತಾಡಿಸಿ, ಗೋವಾದ ಕಲರ್​ಫುಲ್​ ನೈಟ್​ ಕೂಡ ತೋರಿಸಿ ಮುಗ್ಧ ಮನಸ್ಸುಗಳನ್ನ ಖುಷಿಪಡಿಸಿದ್ದಾರೆ.

ಎಲ್ಲ ಮಹಿಳೆಯರೂ ಒಂದೇ ತರಹದ ಸೀರೆ ಧರಿಸಿಕೊಂಡು ಶಿವಮೊಗ್ಗದಿಂದ ಗೋವಾಕ್ಕೆ ವಿಮಾನದಲ್ಲಿ ಪ್ರಯಾಣ ಮಾಡಿದ್ದಾರೆ. ತಾವು ಪ್ರತಿದಿನ ಹೊಲದಲ್ಲಿ ಕೆಲಸ ಮಾಡುವಾಗ ತಲೆ ಎತ್ತಿ ಆಕಾಶದಲ್ಲಿ ನೋಡುತ್ತಿದ್ದ ವಿಮಾನದಲ್ಲಿ ನಾವೇ ಪ್ರಯಾಣ ಮಾಡುತ್ತಿದ್ದೇವೆ ಎಂಬ ಸಂತಸಗೊಳ್ಳುತ್ತಿದ್ದರು. ಇದೀಗ ಅವರೇ ವಿಮಾನದಲ್ಲಿ ಹಾರಾಡಿ ಫುಲ್​ ಖುಷ್ ಆಗಿದ್ದಾರೆ. ಇನ್ನು ಈ ಕೆಲಸದ ಬಗ್ಗೆ ವಿಶ್ವನಾಥ್ ಖುಷಿಯಿಂದಲೇ ಮಾತನಾಡಿದ್ದಾರೆ. ಕೆಲಸ ಬರ್ತಿದ್ದ ಮಹಿಳೆಯರು ತಮ್ಮ ಕನಸನ್ನ ಹೇಳಿಕೊಂಡಿದ್ದರು. ಜೀವನದಲ್ಲಿ ವಿಮಾನದಲ್ಲಿ ಹತ್ತೋಕ್ಕಾಗುತ್ತ ಅಂತ ಕೇಳಿದ್ರು. ಆ ಮಾತು ಕೇಳಿ ಮೊದಲು ತಿರುಪತಿಗೆ ಕರ್ಕೊಂಡು ಹೋಗ್ಬೇಕು ಅಂತ ಪ್ಲಾನ್ ಮಾಡಿದ್ರು. ಆದ್ರೆ ಟಿಕೆಟ್ ಸಿಗದ ಕಾರಣ ಗೋವಾಗೆ ಟಿಕೆಟ್​ ಬುಕ್ ಮಾಡಿ ಕರ್ಕೊಂಡು ಹೋದೆ ಅಂತ ಪ್ರೀತಿಯಿಂದಲೇ ಮಾತನಾಡಿದ್ದಾರೆ.

ಅಸಲಿಗೆ ಈಗ ರೈತನಾಗಿರುವ ವಿಶ್ವನಾಥ್​ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡ್ತಿದ್ದು. ದಾವಣೆಗರೆಯ ಪೊಲೀಸ್ ಇಲಾಖೆ ಗುಪ್ತಚರ ವಿಭಾಗದಲ್ಲಿ ಕಾರ್ಯನಿರ್ವಹಿಸ್ತಿದ್ದ ವಿಶ್ವನಾಥ್​ ವಾಲೆಂಟರಿ ರಾಜೀನಾಮೆ ನೀಡಿದ್ರು. ಇದಾದ ಮೇಲೆ ಕೃಷ್ಟಿಯಲ್ಲಿ ಏನಾದ್ರೂ ಮಾಡ್ಬೇಕು ಅನ್ನೋ ಗುರಿ ಇಟ್ಕೊಂಟು 14 ಎಕರೆಯ ತೋಟದಲ್ಲಿ ಅಡಿಕೆ ಲವಂಗ್, ಚಕ್ಕೆ,ಪಲವಾ್, ದಿನಸಿ ಪದಾರ್ಥಗಳನ್ನ ಬೆಳೆದು ಸಕ್ಸಸ್​ ಕಂಡಿದ್ದಾರೆ. ಐದು ವರ್ಷದ ಹಿಂದೆಯೇ ಕೆಲಸ ಬಿಟ್ಟು ಕೃಷಿ ಕಾಯಕ ಶುರು ಮಾಡಿದ್ದ ವಿಶ್ವನಾಥ ಈಗ ವಿಜಯನಗರ ಜಿಲ್ಲೆಯ ಮಾದರಿ ರೈತರಾಗಿದ್ದಾರೆ. ಕೇವಲ ಮಾದರಿ ರೈತರಲ್ಲ ಕೆಲಸ ಮಾಡೋರ ಕನಸಿಗೆ ರೆಕ್ಕೆ ಕೊಟ್ಟು ಮಾದರಿ ವ್ಯಕ್ತಿತ್ವ ಕೂಡ ಆಗಿದ್ದಾರೆ.


ಇನ್ನೂ ಗೋವಾಗೆ ಕರ್ಕೊಂಡು ಹೋಗ್ಬೇಕು ಅಂದ್ರೆ ಹಣ ಬೇಕಲ್ವಾ. ವಿಶ್ವನಾಥ್​ ತೋಟದಲ್ಲಿ ಕೆಲಸ ಮಾಡ್ತಿದ್ದ 10 ಜನ ಮಹಿಳೆಯರು ಮತ್ತು ತಾವು ಒಟ್ಟು 11 ಟಿಕೆಟ್​ಗಳನ್ನ ಬುಕ್​ ಮಾಡಿದ್ರು. ಇದ್ರ ಜೊತೆಗೆ ಹೋಟೆಲ್​​ ಬೋಟಿಂಗ್​ ಸೇರಿ ಎಲ್ಲ ಖರ್ಚು ತಾವೇ ನೋಡ್ಕೊಂಡಿದ್ದಾರೆ. ಇಷ್ಟಕ್ಕೆಲ ಅಂದಾಜು ಎರಡು ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು, ಪೂರ್ತಿ ಹಣವನ್ನ ವಿಶ್ವನಾಥವರೇ ಕೊಟ್ಟಿದ್ದಾರೆ. ಯಾರೊಬ್ಬರ ಬಳಿಯೂ ಒಂದೂ ರೂಪಾಯಿ ಕೂಡ ಖರ್ಚು ಮಾಡಿಸಿಲ್ಲ. ಸದ್ಯ ವಿಶ್ವನಾಥ್ ಕೆಲಸಕ್ಕೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದೆ. ಇನ್​ಫ್ಯಾಕ್ಟ್​ ಗೋವಾದಲ್ಲೂ ಕೂಡ ವಿಶ್ವನಾಥ್​ ಮಾಡಿದ ಕೆಲಸ ನೋಡಿ ಅಲ್ಲಿನವರು ಕೂಡ ಖುಷಿ ವ್ಯಕ್ತಪಡಿಸಿದ್ದಾರೆ. ಈ ಕಾಲದಲ್ಲಿ ಇಷ್ಟೆಲ್ಲ ಹಣ ಖರ್ಚು ಮಾಡ್ತಾರೆ ಅಂದ್ರೆ ನಿಜಕ್ಕೂ ಗ್ರೇಟ್ ಅಂತ ಬಾಯ್ ಮೇಲೆ ಬೆರಳ್ಳಿಟ್ಟಕೊಂಡಿದ್ದಾರೆ


ಪ್ಲೈಟ್ ಹತ್ತಿ ಗೋವಾ ಸುತ್ತಿ ಸಂಭ್ರಮಿಸಿರುವ ಮಹಿಳೆಯರು ವಿಶ್ವನಾಥ್​ ಹೊಟ್ಟೆ ತಣ್ಣಗಿರಲಿ ಅಂತ ಹಾರೈಸಿದ್ದಾರೆ. ನಮ್ಮ ಕನಸು ಈಡೇರಿಸಿವ ದಣಿಗೆ ದೇವರು ನೂರು ವರ್ಷ ಆಯಸ್ಸು ಕೊಟ್ಟು ಕಾಪಾಡಲಿ ಅಂತ ಹಾರೈಸ್ತಿದ್ದಾರೆ. ಇತ್ತ ವಿಶ್ವನಾಥ್ ಕೂಡ ಶ್ರಮ ಜೀವಿಗಳ ಖುಷಿಯಲ್ಲೇ ಸಾರ್ಥಕತೆಯ ಭಾವ ಕಾಣ್ತಿದ್ದಾರೆ. ಅದೇನೆ ಇರಲಿ ವಿಶ್ವನಾಥ್​ ಕೆಲಸಕ್ಕೆ ಒಂದು ಸೆಲ್ಯೂಟ್ ಅಂತೂ ಹೇಳಲೇಬೇಕು. ಹಣ ಆಸ್ತಿ ಅಂತಸ್ತು ಎಲ್ಲ ಇದ್ರೂ ಜನ ತಮಗಾಗಿ ಖರ್ಚು ಮಾಡೋದಕ್ಕೆ ಹಿಂದು ಮುಂದು ನೋಡ್ತಾರೆ. ಇಂಥಹ ಕಾಲದಲ್ಲಿ ವಿಶ್ವನಾಥ ಪರೋಪಕಾರಿಯಾಗಿ ಬಡವರ ಕನಸಿಗೆ ಊರುಗೋಲಾಗಿದ್ದು ನಿಜಕ್ಕೂ ಮೆಚ್ಚಲೇಬೇಕು.


Ads on article

Advertise in articles 1

advertising articles 2

Advertise under the article