ಬೆಂಗಳೂರು :"ಶುಭವಾಗಲಿ" ಬರೆಯಲು ಬಾರದ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ; ವಿಡಿಯೋ ಟ್ರೋಲ್ ಬೆನ್ನಲ್ಲೇ ಬಿಜೆಪಿ ವ್ಯಂಗ್ಯ, ಕಾಂಗ್ರೆಸ್ ಸರ್ಕಾರ ಅನಕ್ಷರಸ್ಥರ ದೊಡ್ಡಿ ಎಂದು ಟೀಕೆ

ಬೆಂಗಳೂರು :"ಶುಭವಾಗಲಿ" ಬರೆಯಲು ಬಾರದ ಕನ್ನಡ ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ; ವಿಡಿಯೋ ಟ್ರೋಲ್ ಬೆನ್ನಲ್ಲೇ ಬಿಜೆಪಿ ವ್ಯಂಗ್ಯ, ಕಾಂಗ್ರೆಸ್ ಸರ್ಕಾರ ಅನಕ್ಷರಸ್ಥರ ದೊಡ್ಡಿ ಎಂದು ಟೀಕೆ

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡದಲ್ಲಿ 'ಶುಭವಾಗಲಿ' ಎಂದು ಬರೆಯಲು ಪರದಾಡಿದ್ದನ್ನು ಬಿಜೆಪಿ ವ್ಯಂಗ್ಯವಾಡಿದೆ. ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತೆಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್‌ ಮೇಧಾವಿಗಳಾದ ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ ಎಂದು ಬಿಜೆಪಿ ಟೀಕಿಸಿದೆ. 

ಕೊಪ್ಪಳ ಜಿಲ್ಲೆಯ ಕಾರಟಗಿ ಜೆಪಿ ನಗರದ ಅಂಗವಾಡಿಗೆ ಭೇಟಿ ನೀಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಕನ್ನಡದಲ್ಲಿ 'ಶುಭವಾಗಲಿ' ಎಂದು ಬರೆಯಲು ಪರದಾಡಿದ್ದರು. 'ಶಬ' ಎಂದು ಬರೆದ ಬಳಿಕ ಬೆಂಬಲಿಗರು ಶುಭ ಮಾಡಲು ಸೂಚಿಸಿದ್ದರಿಂದ ಆನಂತರ ಸರಿಯಾಗಿ ಬರೆದಿದ್ದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಶಿಕ್ಷಣ ಸಚಿವರ ರೀತಿಯಲ್ಲೇ ಕನ್ನಡ ಸಂಸ್ಕೃತಿ ಸಚಿವರಿಗೂ ಕನ್ನಡ ಓದಲು, ಬರೆಯಲು ಬರಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗಿದೆ. 

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಸಚಿವರು ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರದ ಕುರಿತು ವ್ಯಂಗ್ಯವಾಡಿದೆ. ಕನ್ನರಾಮಯ್ಯ ಸರ್ಕಾರದಿಂದ ಕನ್ನಡದ ಕಗ್ಗೂಲೆ ಎಂದಿರುವ ಬಿಜೆಪಿ, ಕನ್ನಡ ಓದಲು ಬರೆಯಲು ಬಾರದ ಅನಕ್ಷರಸ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಒಂದು ಕಡೆಯಾದರೆ, ಕನ್ನಡದ ಸುಲಭವಾದ ಪದವನ್ನು ಬರೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿಲ ವಿಲ ಒದ್ದಾಡಿದ್ದಾರೆ. ಅನಕ್ಷರಸ್ಥರ ದೊಡ್ಡಿಯಾಗಿರುವ ಕಾಂಗ್ರೆಸ್ ಸರ್ಕಾರ ಕನ್ನಡದ ಅಸ್ಮಿತೆಗೆ ಕೊಳ್ಳಿ ಇಟ್ಟಿದೆ. ಇಂತಹ ಮಹಾನ್‌ ಮೇಧಾವಿಗಳಾದ ಶಿಕ್ಷಣ ಸಚಿವ, ಕನ್ನಡ ಮತ್ತು ಸಂಸ್ಕೃತಿ ಸಚಿವರನ್ನು ಪಡೆದ ಕರುನಾಡು ಪಾವನ ಎಂದು ವ್ಯಂಗ್ಯವಾಡಿದೆ.

ಕೆ.ಪಿ.ಎಸ್ಸಿ ಪ್ರಶ್ನೆ ಪತ್ರಿಕೆಗಳಲ್ಲು ಪದೇ ಪದೇ ಕನ್ನಡ ವ್ಯಾಕರಣ ತಪ್ಪಾಗಿ ಮುದ್ರಿಸುವುದು. ಕನ್ನಡ ಶಾಲೆಗಳನ್ನು ಮುಚ್ಚಿಸುತ್ತಿರುವುದು ಈ ಎಲ್ಲವನ್ನೂ ನೋಡಿದರೆ ಕರುನಾಡಲ್ಲಿ ಕನ್ನಡವನ್ನು ಅಳಿಸಿ ಹಾಕಬೇಕೆಂದು ಕಾಂಗ್ರೆಸ್‌ ಹೊರಟಿದೆ ಎಂದೂ ಬಿಜೆಪಿ ಕಿಡಿಕಾರಿದೆ.

Ads on article

Advertise in articles 1

advertising articles 2

Advertise under the article