ಬೆಂಗಳೂರು: ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ; ರೆಸ್ಟೋರೆಂಟ್ ಸಿಬ್ಬಂದಿಗಳ ಅಮಾನುಷ ವರ್ತನೆ.

ಬೆಂಗಳೂರು: ಫುಡ್ ಡೆಲಿವರಿ ಬಾಯ್ ಮೇಲೆ ಹಲ್ಲೆ; ರೆಸ್ಟೋರೆಂಟ್ ಸಿಬ್ಬಂದಿಗಳ ಅಮಾನುಷ ವರ್ತನೆ.

ಬೆಂಗಳೂರು: ಫುಡ್ ಡಿಲೆವರಿ ಬಾಯ್ ಮೇಲೆ ರೆಸ್ಟೋರೆಂಟ್ ಸಿಬ್ಬಂದಿ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಫೆಬ್ರವರಿ 2ರಂದು ರಾತ್ರಿ ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಯ ಎದುರಿನಲ್ಲಿರುವ ಗಬ್ರು ಬಿಸ್ಟ್ರೋ ಅಂಡ್​​ ಕೆಫೆಯಲ್ಲಿ ಘಟನೆ ನಡೆದಿದ್ದು, ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಹಕರು ಆರ್ಡರ್ ಮಾಡಿದ್ದ ಫುಡ್ ನೀಡಲು ರೆಸ್ಟೋರೆಂಟ್ ಸಿಬ್ಬಂದಿ ವಿಳಂಬ ಮಾಡಿದ್ದಾರೆ. ಪದೇ ಪದೆ ಗ್ರಾಹಕರಿಂದ ಕರೆಗಳು ಬರುತ್ತಿದ್ದರಿಂದ ತನ್ನ ಕರ್ತವ್ಯದ ತುರ್ತುಸ್ಥಿತಿಯನ್ನು ಅರ್ಥಮಾಡಿಕೊಂಡ ಡೆಲಿವರಿ ಬಾಯ್, 'ಸಮಯಕ್ಕೆ ಸರಿಯಾಗಿ ಫುಡ್ ಡಿಲೆವರಿ ಮಾಡಲು ಸಾಧ್ಯವಾಗುವಂತೆ ಬೇಗನೆ ಫುಡ್ ನೀಡುವಂತೆ' ರೆಸ್ಟೋರೆಂಟ್ ಸಿಬ್ಬಂದಿ ಬಳಿ ಕೇಳಿದ್ದಾನೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ ಹಾಗೂ ಡಿಲೆವರಿ ಬಾಯ್ ನಡುವೆ ಮಾತಿಗೆ ಮಾತು ಬೆಳೆದಿದೆ. ನೋಡ ನೋಡುತ್ತಿದ್ದಂತೆ ಗ್ರಾಹಕರ ಕಣ್ಣೆದುರೆ ಫುಡ್ ಡಿಲೆವರಿ ಬಾಯ್ ಮೇಲೆ ಮುಗಿಬಿದ್ದ ನಾಲ್ಕೈದು ಜನ ರೆಸ್ಟೋರೆಂಟ್ ಸಿಬ್ಬಂದಿ, ಆತನನ್ನ ಅಟ್ಟಾಡಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ರೆಸ್ಟೋರೆಂಟ್ ಸಿಬ್ಬಂದಿಯ ಹಿಂಸಾತ್ಮಕವಾಗಿ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

ಘಟನೆಯ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article