ಆಕಸ್ಮಿಕವಾಗಿ ತಗುಲಿದ ಗುಂಡು ; ಸೇನೆಗೆ ಸೇರಿದ ದಿನದಂದೇ ಬೆಳಗಾವಿ ಮೂಲದ ಯೋಧನ ಸಾವು
ಬೆಳಗಾವಿ, ಫೆ 14: ಕರ್ತವ್ಯದ ವೇಳೆ ಆಕಸ್ಮಿಕವಾಗಿ ಗುಂಡು ಹಾರಿ ಬೆಳಗಾವಿ ಮೂಲದ ನೌಕಾಪಡೆಯ ಯೋಧನೋರ್ವ ಸಾವನ್ನಪ್ಪಿರುವ ಘಟನೆ ಚೆನ್ನೈ ನಲ್ಲಿ ನಡೆದಿದೆ.
ಮೃತ ಯೋಧನನ್ನು ಮೂಡಲಗಿಯ ಕಲ್ಲೋಳಿ ಗ್ರಾಮದ ಪ್ರವೀಣ್ ಸುಭಾಷ್ ಖಾನಗೌಡರ ಎಂದು ಗುರುತಿಸಲಾಗಿದೆ.
2020ರ ಫೆ.12 ರಂದು ನೌಕಾಪಡೆಗೆ ಸೇರಿದ್ದರು, ಅಲ್ಲದೇ ಸೇನೆಯಲ್ಲಿ ಶಿಸ್ತಿನಿಂದ ಕೆಲಸ ಮಾಡುತ್ತಿದ್ದರು.
ಸಾಯುವುದಕ್ಕೂ ಒಂದು ಗಂಟೆಗೆ ಮುನ್ನ ತಾಯಿಯ ಜೊತೆ ಮಾತನಾಡಿದ್ದರು.
ಇದೀಗ ಚೆನ್ನೈನ ನೌಕಾನೆಲೆಯಲ್ಲಿ ಕರ್ತವ್ಯದ ವೇಳೆ ಏಕಾಏಕಿ ಬಂದೂಕಿನಿಂದ ಆಕಸ್ಮಿಕವಾಗಿ ಸಿಡಿದ ಪರಿಣಾಮ ಬುಲೆಟ್ ನೇರವಾಗಿ ಪ್ರವೀಣ್ ಅವರ ತಲೆಗೆ ಹೊಕ್ಕಿ ಸಾವನ್ನಪ್ಪಿದ್ದಾರೆ. ವಿಚಿತ್ರ ಏನಪ್ಪಾ ಅಂದರೆ ತಾವು ಸೇನೆಗೆ ಸೇರಿದ ದಿನಾಂಕದಂದೇ ಮೃತಪಟ್ಟಿದ್ದಾರೆ.
2020ರಲ್ಲಿ ನೌಕಾಪಡೆಗೆ ನೇಮಕಾತಿ ಹೊಂದಿದ್ದ ಸುಭಾಷ ಅವರು ಕೇರಳದ ಕೊಚ್ಚಿಯಲ್ಲಿ ತರಬೇತಿ ಪಡೆದಿದ್ದರು. ನಂತರ ಅಂಡಮಾನ್ ಹಾಗೂ ಸದ್ಯ ಚೆನ್ನೈನಲ್ಲಿ ಸೇವೆ ಸಲ್ಲಿಸುತ್ತಿದ್ದರು
ಈಗಾಗಲೇ ಮೃತದೇಹವನ್ನು ಗ್ರಾಮದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಅಂತ್ಯಸಂಸ್ಕಾರ ನೆರವೇರಲಿದೆ.