ಕಾರವಾರ: ಜನಪದ ಹಾಡುಗಾರ್ತಿ, ಪದ್ಮಶ್ರೀ‌ ಪುರಸ್ಕೃತ, ಸುಕ್ರಜ್ಜಿ ಎಂದೇ ಹೆಸರಾಗಿದ್ದ ಹಾಲಕ್ಕಿ ಜನಾಂಗದ ಸುಕ್ರಿ ಬೊಮ್ಮ ಗೌಡ ಅಲ್ಪಕಾಲದ ಅನಾರೋಗ್ಯದಿಂದ ನಿಧನ.

ಕಾರವಾರ: ಜನಪದ ಹಾಡುಗಾರ್ತಿ, ಪದ್ಮಶ್ರೀ‌ ಪುರಸ್ಕೃತ, ಸುಕ್ರಜ್ಜಿ ಎಂದೇ ಹೆಸರಾಗಿದ್ದ ಹಾಲಕ್ಕಿ ಜನಾಂಗದ ಸುಕ್ರಿ ಬೊಮ್ಮ ಗೌಡ ಅಲ್ಪಕಾಲದ ಅನಾರೋಗ್ಯದಿಂದ ನಿಧನ.


ಕಾರವಾರ: ಜನಪದ ಹಾಡುಗಾರ್ತಿ, ಪದ್ಮಶ್ರೀ‌ ಪುರಸ್ಕೃತ, ಸುಕ್ರಜ್ಜಿ ಎಂದೇ ಹೆಸರಾಗಿದ್ದ ಹಾಲಕ್ಕಿ ಜನಾಂಗದ ಸುಕ್ರಿ ಬೊಮ್ಮ ಗೌಡ(88) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಸುಕ್ರಜ್ಜಿ ಫೆ.13ರ ಗುರುವಾರ ಮುಂಜಾನೆ 3.30ಕ್ಕೆ ಕೊನೆಯುಸಿರೆಳೆದಿದ್ದಾರೆ.

ಸುಕ್ರಜ್ಜಿ ಕೆಲವು ತಿಂಗಳುಗಳಿಂದ ವಯೋಸಹಜ ಅನಾರೋಗ್ಯಕ್ಕೆ ಒಳಗಾಗಿದ್ದರು. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ‌ ತಾಲೂಕಿನ ಬಡಿಗೇರಿ ಗ್ರಾಮದ ನಿವಾಸಿ ಆಗಿದ್ದರು. ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಜನಾಂಗದಲ್ಲಿ ಜನಿಸಿದ್ದ ಸುಕ್ರಿ ಬೊಮ್ಮ ಗೌಡ ಜನಪದ ಹಾಡುಗಾರ್ತಿಯಾಗಿದ್ದು ಅವರನ್ನು ಜಾನಪದ ಕೋಗಿಲೆ ಎಂದೇ ಕರೆಯುತ್ತಿದ್ದರು. 

ಸುಕ್ರಿ ಬಾಲ್ಯದಲ್ಲಿ ತನ್ನ ತಾಯಿ ಬಳಿಯಿಂದ ಜಾನಪದ ಹಾಡುಗಳನ್ನು ಕಲಿತಿದ್ದರು. ಜಾನಪದ ಹಾಡುಗಳು, ಹಾಲಕ್ಕಿ ಒಕ್ಕಲಿಗ ಬುಡಕಟ್ಟಿನ ಸಾಂಪ್ರದಾಯಿಕ ಹಾಡುಗಳನ್ನು ಸಂರಕ್ಷಿಸಿ ಬಾಯ್ದೆರೆಯಾಗಿ ಹಾಡುತ್ತ ಅವುಗಳನ್ನು ಸಂಗ್ರಹಿಸಿದ್ದರು. ವಿವಿಧ ಸಾಮಾಜಿಕ ಹೋರಾಟಗಳಲ್ಲಿಯೂ ಸುಕ್ರಜ್ಜಿ ಮುಂಚೂಣಿಯಲ್ಲಿದ್ದರು. 

ಇವರಲ್ಲಿರುವ ಅದ್ಭುತ ಹಾಡುಗಾರಿಕೆ ಕಲೆಯನ್ನು ಗುರುತಿಸಿದ್ದ ಭಾರತ ಸರ್ಕಾರ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಸ್ಥಳೀಯ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಸಂರಕ್ಷಿಸಿದ್ದಕ್ಕಾಗಿ 1988ರಲ್ಲಿ ಕರ್ನಾಟಕ ಸರ್ಕಾರದಿಂದ ಪ್ರಶಸ್ತಿ, 1999ರಲ್ಲಿ ‘ಜಾನಪದ ಶ್ರೀ’ ಪ್ರಶಸ್ತಿ, 2006ರಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ನೀಡಲಾಗುವ ‘ನಾಡೋಜ’ ಗೌರವ ಹಾಗೂ 2009ರಲ್ಲಿ ಸಂದೇಶ ಕಲಾ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಇವರಿಗೆ ಲಭಿಸಿದ್ದವು.

Ads on article

Advertise in articles 1

advertising articles 2

Advertise under the article