ಮೈಸೂರು : ಐಪಿಎಲ್​, ಆನ್​ಲೈನ್ ಬೆಟ್ಟಿಂಗ್​ ಚಟದಿಂದಾಗಿ  ಒಂದೇ ಕುಟುಂಬದ ಮೂವರು ಸಾವಿಗೆ ಶರಣು ; ನನ್ನ ಸಾವಿಗೆ ತಮ್ಮ ಹಾಗೂ ಹೆಂಡತಿ ಕಾರಣ ಎಂದ ಅಣ್ಣ, ವಿಡಿಯೋ ನೋಡಿ ಹೋಯಿತು ದಂಪತಿಗಳ ಪ್ರಾಣ!

ಮೈಸೂರು : ಐಪಿಎಲ್​, ಆನ್​ಲೈನ್ ಬೆಟ್ಟಿಂಗ್​ ಚಟದಿಂದಾಗಿ ಒಂದೇ ಕುಟುಂಬದ ಮೂವರು ಸಾವಿಗೆ ಶರಣು ; ನನ್ನ ಸಾವಿಗೆ ತಮ್ಮ ಹಾಗೂ ಹೆಂಡತಿ ಕಾರಣ ಎಂದ ಅಣ್ಣ, ವಿಡಿಯೋ ನೋಡಿ ಹೋಯಿತು ದಂಪತಿಗಳ ಪ್ರಾಣ!

ಮೈಸೂರು : ಐಪಿಎಲ್​ ಹಾಗೂ ಆನ್​ಲೈನ್ ಬೆಟ್ಟಿಂಗ್​ಗೆ ಚಟಕ್ಕೆ ಬಿದ್ದು ಒಂದೇ ಕುಟುಂಬದ ಮೂವರು ಮೃತಪಟ್ಟಿರುವ ಘಟನೆ ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದ ಬಳಿ ನಡೆದಿದೆ. ಜೋಶಿ ಆಂಥೋನಿ, ಜೋಬಿ ಆಂಥೋನಿ ಹಾಗು ಶರ್ಮಿಳಾ ಅಲಿಯಾಸ್​ ಸ್ವಾತಿ ಮೃತ ದುರ್ದೈವಿಗಳು. ಜೋಬಿ ಹಾಗೂ ಜೋಷಿ ಅವಳಿ ಜವಳಿ ಸಹೋದರರು.

ಜೋಶಿ ಆಂಥೋನಿ ತನ್ನ ತಮ್ಮನಾದ ಜೋಬಿಗೆ ಮತ್ತು ನಾದಿನಿ ಶರ್ಮಿಳಾ ಆಲಿಯಾಸಿ ಸ್ವಾತಿ ಮೇಲೆ ಮೋಸದ ಆರೋಪ ಹೊರಿಸಿ ಸೋಮವಾರ (ಫೆ.17) ರಂದು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಜೋಶಿ ವಿಡಿಯೋ ಮಾಡಿದ್ದು, “ಸಹೋದರ ಜೋಬಿ, ಆತನ ಪತ್ನಿ ಶರ್ಮಿಳಾ ಮೋಸದಿಂದ ನನ್ನ ಸಹೋದರಿ ಮೂಲಕ ಊರು ತುಂಬ ಸಾಲ ಪಡೆದು ಮೋಸ ಮಾಡಿದ್ದಾರೆ. ನನ್ನ ಸಹೋದರಿಗೆ ಗಂಡ ಇಲ್ಲ, ಅವರು ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಜೋಬಿ ಆಂಥೋನಿ ಮತ್ತು ಆತನ ಪತ್ನಿ ಶರ್ಮಿಳಾ ಕಾರಣ ಅವರಿಗೆ ಶಿಕ್ಷೆ ಕೊಡಿಸಿ” ಎಂದು ಹೇಳಿ ನೇಣಿಗೆ ಶರಣದಾಗಿದ್ದಾರೆ.

ಜೋಶಿ ಆಂಥೋನಿ ಸಾವಿನ ವಿಚಾರ ತಿಳಿದು ತಮ್ಮ ಜೋಬಿ l ಹಾಗೂ ಪತ್ನಿ ಶರ್ಮಿಳಾ ಅಲಿಯಾಸ್​ ಸ್ವಾತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್​ ಗಾಗಿ ಸುಮಾರು 91 ಲಕ್ಷಾ ರೂ. ಸಾಲ ಮಾಡಿಕೊಂಡಿದ್ದರು, ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿ ಬಂದು ಗಲಾಟೆ ಮಾಡ್ತಿದ್ರು. ಇದರಿಂದ ಮನನೊಂದ ಜೋಷಿ ಆಂಥೋನಿ ಸೋಮವಾರ ಮೈಸೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು (ಫೆ.18) ಜೋಬಿ ಹಾಗೂ ಶರ್ಮಿಳಾ ವಿಜಯನಗರದ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ. 

ತಂಗಿ ಮೇರಿ ಶರ್ಲೈನ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾರಣಕ್ಕೆ ಮೈಸೂರಿನ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ದಂಪತಿಗಳ ವಿರುದ್ಧ ಕೇಸ್‌ ದಾಖಲಿಸಿದ್ದರು. ಹೀಗಾಗಿ ಕೇಸ್‌ಗೆ ಭಯಪಟ್ಟು ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article