ತೆಲಂಗಾಣ :ಪ್ರಾಂಶುಪಾಲರು ಬೈದರೆಂದು ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ
Thursday, February 6, 2025
ಹೈದರಾಬಾದ್, ಫೆ.6: ಪ್ರಾಂಶುಪಾಲರು ಗದರಿಸಿದರು ಎಂಬ ಕಾರಣಕ್ಕೆ ಮನನೊಂದ 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾದ್‌ನಗರ ಖಾಸಗಿ ಶಾಲೆಯಲ್ಲಿ ನಡೆದಿದೆ.
ಮೃತ ವಿದ್ಯಾರ್ಥಿ ನೀರಜ್ ಎಂದು ತಿಳಿದುಬಂದಿದ್ದು, ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ, ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮೃತ ನೀರಜ್, ಬಿಜೆಪಿ ಶಾದ್‌ನಗರ ಪಟ್ಟಣ ಅಧ್ಯಕ್ಷ ಹರಿಭೂಷಣ್ ಅವರ ಪುತ್ರ ಎಂಬ ಮಾಹಿತಿ ಲಭ್ಯವಾಗಿದೆ.
ನೀರಜ್ ಬಾಲ್ಕನಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿಯೊಂದಿಗೆ ಮಾತನಾಡುತ್ತಿದ್ದಾಗ ಪ್ರಾಂಶುಪಾಲರು ಇಬ್ಬರನ್ನು ತಮ್ಮ ಕೋಣೆಗೆ ಕರೆದು ಬೈದಿದ್ದಾರೆ. ಇದರಿಂದಲೇ ನೊಂದು ನೀರಜ್ ಆತುರದ ನಿರ್ಧಾರ ಕೈಗೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ. ತೀವ್ರ ಗಾಯಗೊಂಡಿದ್ದ ನೀರಜ್ನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯ ಅಸುನೀಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.