ಮಂಗಳೂರು/ಬೆಂಗಳೂರು : ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಕಲಿಕಾ ಹಬ್ಬ ಆಯೋಜಿಸಲು ಸಮಗ್ರ ಶಿಕ್ಷಣ ಕರ್ನಾಟಕ ಸೂಚನೆ.
Monday, February 3, 2025
ಮಂಗಳೂರು/ಬೆಂಗಳೂರು : ಮಕ್ಕಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಹೆಚ್ಚಿಸುವ ದೃಷ್ಟಿಯಿಂದ ಕಲಿಕಾ ಹಬ್ಬ ಆಯೋಜಿಸಬೇಕು ಎಂದು ಸಮಗ್ರ ಶಿಕ್ಷಣ ಕರ್ನಾಟಕ ಸೂಚಿಸಿದೆ.
ಸರಕಾರಿ ಶಾಲೆಗಳಲ್ಲಿ 1ರಿಂದ 5ನೇ ತರಗತಿಯವರೆಗೆ ಓದುತ್ತಿರುವ ಮಕ್ಕಳ ಕಲಿಕಾ ಬಲವರ್ಧನೆಗೆ ಕ್ಲಸ್ಟರ್ ಮಟ್ಟದಲ್ಲಿ ಕಲಿಕಾ ಹಬ್ಬ ಆಚರಿಸುವಂತೆ ಸಮಗ್ರ ಶಿಕ್ಷಣ ಸೂಚನೆ ನೀಡಿದೆ.
ಕಥೆ ಹೇಳುವುದು, ಒಳಾಂಗಣ ಮತ್ತು ಹೊರಾಂಗಣದ ಮೋಜಿನ ಆಟಗಳು, ಸಂವಾದಾತ್ಮಕ ಅವಧಿಗಳು ಮತ್ತು ಕಲೆ ಕುಶಲತೆ ಆಧಾರಿತ ಸೃಜನಾತ್ಮಕ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಸಂತೋಷದಾಯಕ ಮತ್ತು ಅನುಭವಯುಕ್ತ ಕಲಿಕೆಯ ವಾತಾವರಣವನ್ನು ಪ್ರೇರೇಪಿಸುವಂತೆ ಸೂಚಿಸಲಾಗಿದೆ
ಕಲಿಕಾ ಹಬ್ಬದಲ್ಲಿ ಗಟ್ಟಿ ಓದು, ಕಥೆ ಹೇಳುವುದು, ಕೈಬರಹ, ಸಂತೋಷದಾಯಕ ಗಣಿತ, ನಿಧಿ ಹುಡುಕಾಟ, ಸ್ಮರಣಾ ಪರೀಕ್ಷೆ, ರಸ ಪ್ರಶ್ನೆ ಮುಂತಾದ ಚಟುವಟಿಕೆಯನ್ನು ಆಯೋಜಿಸುವಂತೆ ಸೂಚಿಸಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ಈ ಚಟುವಟಿಕೆ ನಡೆಯಲಿದ್ದು, ಪ್ರತಿ ಕ್ಲಸ್ಟರ್‌ಗೆ 25 ಸಾವಿರ ರೂ. ವೆಚ್ಚ ನಿಗದಿಪಡಿಸಲಾಗಿದೆ.
ಈ ಕಲಿಕಾ ಹಬ್ಬವನ್ನು ಫೆ.10 ರೊಳಗೆ ಆಯೋಜಿಸಬೇಕು, ಶಿಕ್ಷಣೇತರ ಚಟುವಟಿಕೆಗೆ ಆಸ್ಪದ ನೀಡಬಾರದು ಎಂದು ಸೂಚನೆ ಕೊಡಲಾಗಿದೆ.