ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿನ ಮನೆ ತೆರವು ಪ್ರಕರಣ; ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿಯಿಂದ ಅವಹೇಳನ ಅರೋಪ ; ಪುತ್ತೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ.
ಪುತ್ತೂರು : ಮಹಾಲಿಂಗೇಶ್ವರ ದೇವಸ್ಥಾನದ ಜಾಗದಲ್ಲಿನ ಮನೆ ತೆರವು ಪ್ರಕರಣದಲ್ಲಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಬಿಜೆಪಿಯಿಂದ ಅವಹೇಳನ ಅರೋಪ ಮಾಡಿರುವುದರ ವಿರುದ್ದ ಪುತ್ತೂರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಪುತ್ತೂರಿನ ಅಮರ್ ಜವಾನ್ ಜ್ಯೋತಿ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೇಸ್ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ವಿರುದ್ದ ಘೋಷಣೆಗಳ್ನು ಕೂಗಿದರು. ಈ ವೇಳೆ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದ ಕಾಂಗ್ರೇಸ್ ಮುಖಂಡ ಎಂ.ಜಿ.ಹೆಗಡೆ, ಬಿಜೆಪಿ ಮತ್ತು ಸಂಘ ಪರಿವಾರದವರು ನಕಲಿ ಹಿಂದುತ್ವವಾದಿಗಳು, ಇವರನ್ನು ಹೀಗೆ ಮುಂದುವರಿಯಲು ಬಿಟ್ಟರೆ ಹಿಂದೂ ಧರ್ಮಕ್ಕೇ ಆತಂಕ. ಹಿಂದೂ ಧರ್ಮದ ಉಪನಿಷತ್ತ್, ವೇದಗಳನ್ನು ಈ ನಕಲಿ ಹಿಂದೂಗಳು ನಾಶ ಮಾಡಲಿದ್ದಾರೆ. ಇವರಿಗೆ ಚುನಾವಣೆ ಬಂದಾಗ ಮಾತ್ರ ಹಿಂದುತ್ವ ನೆನಪಾಗೋದು, ಬಿಜೆಪಿ ಕಾಂಗ್ರೇಸ್ ಪಕ್ಷದ ಗೂಂಡಾಗಿರಿ ಬಗ್ಗೆ ಮಾತಾಡುತ್ತೆ. ಚುನಾವಣೆ ಬಂದಾಗ ಬಿಜೆಪಿ ಎಷ್ಟು ಅಮಾಯಕರನ್ನು ಕೊಂದು ಹಾಕಿದೆ. ಈ ಕುರಿತ ಲೆಕ್ಕ ಬಿಜೆಪಿ ಬಳಿ ಇದೆಯಾ? ಎಂದು ಪ್ರಶ್ನಿಸಿದರು