ನವದೆಹಲಿ :ಹೊಸ ನಿಯಮ ಜಾರಿ ;  ಬ್ಯಾಲೆನ್ಸ್​ ಇಲ್ಲದೇ ಪ್ರಯಾಣಿಸುವ ಟೋಲ್​ ಪ್ರಯಾಣಿಕರು  ದುಪ್ಪಟ್ಟು ಕಟ್ಟಲು ರೆಡಿಯಾಗಿ, ಏನೆಲ್ಲಾ  ರೂಲ್ಸ್ ಇದೆ ಒಮ್ಮೆ ನೋಡಿ!

ನವದೆಹಲಿ :ಹೊಸ ನಿಯಮ ಜಾರಿ ; ಬ್ಯಾಲೆನ್ಸ್​ ಇಲ್ಲದೇ ಪ್ರಯಾಣಿಸುವ ಟೋಲ್​ ಪ್ರಯಾಣಿಕರು ದುಪ್ಪಟ್ಟು ಕಟ್ಟಲು ರೆಡಿಯಾಗಿ, ಏನೆಲ್ಲಾ ರೂಲ್ಸ್ ಇದೆ ಒಮ್ಮೆ ನೋಡಿ!

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಫಾಸ್ಟ್ಯಾಗ್ ಬಳಕೆದಾರರಿಗಾಗಿ ಇಂದಿನಿಂದ ಹೊಸ ನಿಯಮವನ್ನು ಪರಿಚಯಿಸುತ್ತಿದೆ. ಬ್ಯಾಲೆನ್ಸ್​ ಇಲ್ಲದೇ ಪ್ರಯಾಣಿಸುವ ಟೋಲ್​ ಪ್ರಯಾಣಿಕರಿಗೆ ಇದರಿಂದ ಹೆಚ್ಚು ಪರಿಣಾಮ ಉಂಟಾಗಲಿದೆ.

ಟೋಲ್ ತೆರಿಗೆ ಸಂಗ್ರಹವನ್ನು ಸುವ್ಯವಸ್ಥಿತಗೊಳಿಸುವ ಮತ್ತು ಪ್ರಯಾಣಿಕರಿಗೆ ತಡೆರಹಿತ ಅನುಭವವನ್ನು ಖಾತರಿಪಡಿಸುವ ಗುರಿಯೊಂದಿಗೆ ಈ ನಿಯಮವನ್ನು ಜಾರಿ ಮಾಡಲಾಗುತ್ತಿದೆ. ಹಾಗೆಯೇ ರಿಚಾರ್ಚ್​ ಇಲ್ಲದೇ ಪ್ರಯಾಣಿಸುವ ಪ್ರಯಾಣಿಕರು ದುಪ್ಪಟ್ಟು ಪಾವತಿಸುವ ಅನಿವಾರ್ಯತೆಯೂ ಎದುರಾಗಲಿದೆ.

  • ಟೋಲ್​ ಮೂಲಕ ಪ್ರಯಾಣಿಸುವ ಪ್ರಯಾಣಿಕರು ತಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಬ್ಯಾಲೆನ್ಸ್ ಹೊಂದುವುದು ಅವಶ್ಯಕ.
  • ಖಾತೆಯಲ್ಲಿ ಸಾಕಷ್ಟು ಹಣ ಹೊಂದಿಲ್ಲದಿದ್ದರೆ, ಸಿಸ್ಟಮ್ ನಿಮಗೆ ಮುಂದುವರಿಯಲು ಅವಕಾಶ ನೀಡುತ್ತದೆ. ಆದರೆ ನಿಮ್ಮ ಫಾಸ್ಟ್ಯಾಗ್​ನಲ್ಲಿ ಕಡಿಮೆ ಬ್ಯಾಲೆನ್ಸ್ ಹೊಂದಿದೆ ಎಂದು ತೋರಿಸುತ್ತದೆ.
  • ಫಾಸ್ಟ್ಯಾಗ್ ಬ್ಯಾಲೆನ್ಸ್​ ರಿಚಾರ್ಚ್​ ಮಾಡಲು, ಈ ಕುರಿತು ನೆನಪಿಸಲು ಎಸ್​ಎಂಎಸ್​/ಫಾಸ್ಟ್ಯಾಗ್ ​ಅಪ್ಲಿಕೇಶನ್ ಮೂಲಕ ನೋಟಿಫಿಕೇಶನ್​ ಸ್ವೀಕರಿಸುತ್ತೀರಿ.
  • ಸರಿಯಾದ ಸಮಯಕ್ಕೆ ರಿಚಾರ್ಜ್ ಮಾಡಲು ಸಾಧ್ಯವಾಗದಿದ್ದರೆ, ಹೆದ್ದಾರಿಯಿಂದ ನಿರ್ಗಮಿಸುವಾಗ ಟೋಲ್​ಗೆ ದುಪ್ಪಟ್ಟು ಪಾವತಿಸಬೇಕಾಗುತ್ತದೆ.

ಹೊಸ ಫಾಸ್ಟ್ಯಾಗ್ ನಿಯಮವೇಕೆ?:

  • ಅನೇಕ ಚಾಲಕರು ತಮ್ಮ ಫಾಸ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸದೆ ಟೋಲ್ ಪ್ಲಾಜಾಗಳನ್ನು ಪ್ರವೇಶಿಸಲು ಮುಂದಾಗುತ್ತಿದ್ದಾರೆ. ಇದರಿಂದ ಇತರೆ ವಾಹನಗಳ ಸಂಚಾರದಲ್ಲಿ ವಿಳಂಬ, ದಟ್ಟಣೆ ಸಮಸ್ಯೆಗಳಾಗುತ್ತಿವೆ. ಇದನ್ನು ಎನ್​ಎಚ್​ಎಐ ಗಂಭೀರವಾಗಿ ಪರಿಗಣಿಸಿದೆ.
  • ಇನ್ಮುಂದೆ ಪ್ರಯಾಣಿಕರು ಸಾಕಷ್ಟು ಬ್ಯಾಲೆನ್ಸ್​ ಹೊಂದಿಲ್ಲದೆ ಪ್ರಯಾಣಿಸಿದಲ್ಲಿ ಅದು ದಂಡಕ್ಕೆ ಕಾರಣವಾಗುತ್ತದೆ. ಹಾಗಾಗಿ, ಪ್ರಯಾಣ ಆರಂಭಿಸುವ ಮೊದಲು ಸಾಕಷ್ಟು ಮೊತ್ತದ ಬ್ಯಾಲೆನ್ಸ್​ ಅನ್ನು ಫಾಸ್ಟ್ಯಾಗ್ ಖಾತೆಯಲ್ಲಿ ಹೊಂದಿದ್ದೀರಾ ಎಂಬುದನ್ನು ಪರಿಶೀಲಿಸುವುದು ಅಗತ್ಯ.
  • ಟೋಲ್​ ಶುಲ್ಕ ರೂ.100 ಆಗಿದ್ದರೆ, ಹೆದ್ದಾರಿ ಪ್ರಯಾಣ ಆರಂಭಿಸುವ ಒಂದು ಗಂಟೆ ಮುಂಚೆ ರೀಚಾರ್ಜ್​ ಮಾಡದಿದ್ದರೆ, ನೀವು 200 ರೂಪಾಯಿ ಪಾವತಿಸಬೇಕಾಗುತ್ತದೆ

Ads on article

Advertise in articles 1

advertising articles 2

Advertise under the article