ಮೈಸೂರು:ಅಪಾರ್ಟ್‌ಮೆಂಟನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಮನೆಯವರಿಗೆ ವಿಷ ನೀಡಿ ಕೊಂದ ಯಜಮಾನ !

ಮೈಸೂರು:ಅಪಾರ್ಟ್‌ಮೆಂಟನಲ್ಲಿ ಒಂದೇ ಕುಟುಂಬದ ನಾಲ್ವರು ಸಾವು, ಮನೆಯವರಿಗೆ ವಿಷ ನೀಡಿ ಕೊಂದ ಯಜಮಾನ !

ಮೈಸೂರು, ಫೆ 17:  ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್‌ಮೆಂಟನಲ್ಲಿ ಒಂದೇ ಕುಟುಂಬದ ನಾಲ್ವರು ಸಾವಿಗೀಡಾಗಿದ್ದಾರೆ.

ಹಾಸನ ಮೂಲದ ಚೇತನ್ (45), ಪತ್ನಿ ರೂಪಾಲಿ (43), ಚೇತನ್ ತಾಯಿ ಪ್ರಿಯಂವಧ (62) ಚೇತನ್‌ ಅವರ ಮಗ ಕುಶಾಲ್ (15) ಮೃತರು. ನೇಣು ಬಿಗಿದ ಸ್ಥಿತಿಯಲ್ಲಿ ಚೇತನ್ ಶವ ಪತ್ತೆಯಾಗಿದೆ. ಉಳಿದವರು ಶವಗಳು ಅಪಾರ್ಟ್‌ಮೆಂಟಲ್ಲಿ ಪತ್ತೆಯಾಗಿವೆ.

ಚೇತನ್ ವಿಷ ನೀಡಿ ಮನೆಯವರನ್ನು ಕೊಂದು, ತಾನು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮೈಸೂರು ನಗರ ಪೊಲೀಸ್ ಕಮಿಷನ‌ರ್ ಸೀಮಾ ಲಾಟ್ಕರ್, ಡಿಸಿಪಿ ಜಾಹ್ನವಿ ಹಾಗೂ ವಿದ್ಯಾರಣ್ಯಪುರಂ ಠಾಣೆ ಇನ್‌ಸ್ಪೆಕ್ಟ‌ರ್ ಮೋಹಿತ್ ಭೇಟಿ ನೀಡಿ ಪರಿಶೀಲಿಸಿದರು.

ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿದ್ಯಾರಣ್ಯಪುರಂ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಲ್ವರು ಸಾವಿಗೀಡಾಗಿದ್ದಾರೆ. ಚೇತನ್, ಸೌದಿಗೆ ಕಾರ್ಮಿಕರನ್ನು ಕಳುಹಿಸುವ ಕೆಲಸ ಮಾಡುತ್ತಿದ್ದರು. 2019ರಲ್ಲಿ ಅಪಾರ್ಟ್‌ಮೆಂಟ್ ಖರೀದಿಸಿದ್ದರು. ಅವರ ಮಗ 10ನೇ ತರಗತಿ ಓದುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚೇತನ್ ಅಣ್ಣ ವಿದೇಶದಲ್ಲಿದ್ದಾರೆ. ಅವರು ಮೃತ ಚೇತನ್ ಹೆಂಡತಿಯ ಅಪ್ಪ, ಅಮ್ಮನಿಗೆ ಸೋಮವಾರ ಬೆಳಗಿನ ಜಾವ ಕರೆ ಮಾಡಿ ಅಪಾರ್ಟ್ ಮೆಂಟ್ ಬಳಿಗೆ ಹೋಗಲು ಹೇಳಿದ್ದಾರೆ. ಅವರು ಬಂದು ನೋಡಿದಾಗ ಸಾವಿಗೀಡಾಗಿರುವ ವಿಚಾರ ಗೊತ್ತಾಗಿದೆ ಎಂದು ಮಾಹಿತಿ ನೀಡಿದರು.

ಚೇತನ್‌ ಕುಟುಂಬ ಭಾನುವಾರ ಸಂಜೆ ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳಿದ್ದನ್ನು ಕೆಲವರು ನೋಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ

Ads on article

Advertise in articles 1

advertising articles 2

Advertise under the article