ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ; 16 ಸಾವಿರ ಮೊಬೈಲ್ ಸ್ವಿಚ್ ಆಫ್, ಪ್ರಕರಣದಲ್ಲಿ ದೊಡ್ಡ ಸಂಚಿರುವ ಬಗ್ಗೆ ಶಂಕೆ

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ; 16 ಸಾವಿರ ಮೊಬೈಲ್ ಸ್ವಿಚ್ ಆಫ್, ಪ್ರಕರಣದಲ್ಲಿ ದೊಡ್ಡ ಸಂಚಿರುವ ಬಗ್ಗೆ ಶಂಕೆ

ಪ್ರಯಾಗರಾಜ್, ಫೆ.3: ಮೌನಿ ಅಮಾವಾಸ್ಯೆಯಂದು ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ ದೊಡ್ಡ ಸಂಚು ಇದ್ಯಾ ಎನ್ನುವ ಶಂಕೆ ಈಗ ಎದ್ದಿದೆ. ತನಿಖೆ ನಡೆಸುತ್ತಿರುವ ಪೊಲೀಸರು ಕಾಲ್ತುಳಿತ ಸಂಭವಿಸಿದ ದಿನದಲ್ಲಿ ಪಾಲ್ಗೊಂಡ ಜನರ ಮೊಬೈಲ್ ಸಂಖ್ಯೆಗಳು, ಸಿಸಿಟಿವಿಗಳನ್ನು ತನಿಖೆ ನಡೆಸುತ್ತಿದ್ದಾರೆ. 

ಕಾಲ್ತುಳಿತ ಸಂಭವಿಸಿದ ಸ್ಥಳದಲ್ಲಿ ಸಕ್ರಿಯವಾಗಿದ್ದ ಸುಮಾರು 16 ಸಾವಿರ ಮೊಬೈಲ್‌ ಫೋನ್ ದತ್ತಾಂಶಗಳನ್ನು ತನಿಖೆ ಮಾಡಲಾಗಿದ್ದು ಈ ಪೈಕಿ ಬಹುತೇಕ ಮೊಬೈಲ್‌ ಫೋನ್‌ಗಳು ಸ್ವಿಚ್‌ ಆಫ್‌ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ. ತನಿಖಾ ತಂಡ ಸ್ವಿಚ್‌ ಆಫ್‌ ಆಗಿರುವ ಮೊಬೈಲ್‌ ಸಂಖ್ಯೆಗಳ ಗ್ರಾಹಕರ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. 

ಪೊಲೀಸ್‌ ಕಂಟ್ರೋಲ್‌ ರೂಮ್‌ನಲ್ಲಿ ಸಂಗ್ರಹಿಸಲಾದ ಸಿಸಿಟಿವಿ ದೃಶ್ಯಗಳಿಂದ ಮುಖ ಗುರುತಿಸುವಿಕೆ ಅಪ್ಲಿಕೇಶನ್ ಮೂಲಕ ಶಂಕಿತರನ್ನು ಗುರುತಿಸಲಾಗುತ್ತಿದೆ. ಜನವರಿ 29ರಂದು ಮೌನಿ ಅಮಾವಾಸ್ಯೆಯಂದು ಸ್ನಾನ ಮಾಡಲು ನೂಕು ನುಗ್ಗಲು ಉಂಟಾಗಿ ಸುಮಾರು 30 ಮಂದಿ ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಜನಸಮೂಹವು ಬ್ಯಾರಿಕೇಡ್‌ಗಳನ್ನು ಹಾರಿ ಮುನ್ನುಗ್ಗಿದ್ದರಿಂದ ಈ ದುರಂತ ಸಂಭವಿಸಿತ್ತು. ಯೋಗಿ ಅದಿತ್ಯನಾಥ್‌ ಸರ್ಕಾರ ಈ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿದೆ. ಮೂವರು ಸದಸ್ಯರ ನ್ಯಾಯಾಂಗ ಆಯೋಗವು ಶುಕ್ರವಾರ ಘಟನೆಯ ಸ್ಥಳಕ್ಕೆ ಭೇಟಿ ನೀಡಿತ್ತು. ಸಮಿತಿ ತನಿಖೆ ಮುಗಿಸಿ ವರದಿ ಸಲ್ಲಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ. 

ಕುಂಭಮೇಳದಲ್ಲಿ ಪವಿತ್ರ ಬಸಂತ ಪಂಚಮಿ ಹಿನ್ನೆಲೆಯಲ್ಲಿ ಫೆ.3ರಂದು ಸೋಮವಾರ ಕನಿಷ್ಠ ಮೂರು ಕೋಟಿ ಜನರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ

Ads on article

Advertise in articles 1

advertising articles 2

Advertise under the article